Warning: Undefined array key "options" in /home/nagendra/public_html/content/plugins/elementor-pro/modules/theme-builder/widgets/site-logo.php on line 124

ಶಿವಲಿಂಗಾನಂದ ಶ್ರೀಗಳು ತ್ರಿವಿಧ ದಾಸೋಹಿಗಳು : ಮಾದಾರ ಚನ್ನಯ್ಯ ಸ್ವಾಮೀಜಿ

Facebook
Twitter
Telegram
WhatsApp

 

ವರದಿ ಮತ್ತು ಫೋಟೋ ಕೃಪೆ
ಸುರೇಶ್ ಪಟ್ಟಣ್,
ಮೊ : 98862 95817

ಸುದ್ದಿಒನ್, ಚಿತ್ರದುರ್ಗ. ನ. 10 :
ಗೋಶಾಲೆಯನ್ನು ಪ್ರಾರಂಭ ಮಾಡುವುದಕ್ಕೆ ಬಂದು ಈಗ ಜನತೆಗೆ ಅನ್ನ, ಜ್ಞಾನ ಮತ್ತು ಧರ್ಮದ ಭೋದನೆಯನ್ನು ಮಾಡುತ್ತಾ ತ್ರಿವಿಧ ದಾಸೋಹವನ್ನು ಮಾಡುವುದರ ಮೂಲಕ ಜನತೆಗೆ ಶಿವಲಿಂಗಾನಂದ ಶ್ರೀಗಳು ಹತ್ತಿರವಾಗುತ್ತಿದ್ದಾರೆ ಎಂದು ಮಾದಾರ ಚನ್ನಯ್ಯ ಗುರುಪೀಠದ ಶ್ರೀ ಬಸವಮೂರ್ತಿ ಮಾದಾರ ಚನ್ನಯ್ಯ ಶ್ರೀಗಳು ತಿಳಿಸಿದರು.

ನಗರದ ಕಬೀರಾನಂದಾಶ್ರಮದ ಪೀಠಾಧಿಪತಿಗಳಾದ ಶ್ರೀ ಶಿವಲಿಂಗಾನಂದ ಶ್ರೀಗಳ ಜನ್ಮ ದಿನವಾದ ಗುರುವಾರ ಸಂಜೆ ಶ್ರೀ ಮಠದ ಆವರಣದಲ್ಲಿ ಹಮ್ಮಿಕೊಳ್ಳಲಾಗಿದ್ದ ಸಮಾರಂಭದ ಸಾನಿಧ್ಯವಹಿಸಿ ಮಾತನಾಡಿದ ಶ್ರೀಗಳು, ಈ ಸಮಾರಂಭದಲ್ಲಿ ನಾವುಗಳು ಶುಭ ಕೋರುವುದಕ್ಕೆ ಬದಲಾಗಿ ಶ್ರೀಗಳ ಆರ್ಶಿವಾದವನ್ನು ಕೇಳುವುದಕ್ಕೆ ನಾವುಗಳು ಬಂದಿದ್ದೇವೆ. ಇಲ್ಲಿ ಶ್ರೀಗಳ ಜನ್ಮ ದಿನ ಧಾರ್ಮಿಕ ಕಾರ್ಯಕ್ರಮವಾಗಿ ಮಾರ್ಪಾಡಾಗಿದೆ. ಇದರಲ್ಲಿ ಭಾಗವಹಿಸುವುದು ನಮ್ಮ ಭಾಗ್ಯವಾಗಿದೆ.
ಶ್ರೀಗಳ ಪ್ರೀತಿ ಅಂತಃಕರಣದಿಂದಾಗಿ ನಮ್ಮಲ್ಲಿ ಆತ್ಮಾಭಿಮಾನ ಹೆಚ್ಚಾಗಿದೆ ಎಂದರು.

ಚಿತ್ರದುರ್ಗ ನಗರದಲ್ಲಿ ಗೋಗಳ ರಕ್ಷಣೆಗಾಗಿ ಗೋಶಾಲೆಯನ್ನು ಪ್ರಾರಂಭ ಮಾಡುವುದಕ್ಕೆ ಬಂದ ಶ್ರೀಗಳು ಇಂದು ತಮ್ಮ ಆಶ್ರಮದಲ್ಲಿ ಶಿಕ್ಷಣ, ಅನ್ನ, ಮತ್ತು ಧರ್ಮದ ಬಗ್ಗೆ ದಾಸೋಹವನ್ನು ಮಾಡುವುದರ ಮೂಲಕ ತ್ರಿವಿಧ ದಾಸೋಹವಾಗಿ ಮಾರ್ಪಾಟು ಮಾಡಿದ್ದಾರೆ. ಇದರಿಂದ ಜನತೆಗೆ ಹತ್ತಿರವಾಗುತ್ತಿದ್ದಾರೆ. ಇದ್ದಲ್ಲದೆ ಪ್ರತಿ ವರ್ಷ ಮಹಾ ಶಿವರಾತ್ರಿ ಸಪ್ತಾಹವನ್ನು ಮಾಡುವುದರ ಮೂಲಕ ರಾಜ್ಯದಲ್ಲಿಯೇ ಶ್ರೀಗಳು ಹೆಸರನ್ನು ಮಾಡಿದ್ದಾರೆ.

ನಮ್ಮ ಕಾರ್ಯಗಳಿಗೆ ಶ್ರೀಗಳು ಬೆನ್ನುಲುಬಾಗಿ ನಿಂತಿದ್ದಾರೆ ನಮಗೆ ಮಾರ್ಗದರ್ಶನವನ್ನು ಮಾಡುತ್ತಿದ್ದಾರೆ. ನಮ್ಮ  ಹಿತೈಷಿಗಳಾಗಿ ಹಿರಿಯರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ ಎಂದು ಮಾದಾರ ಚನ್ನಯ್ಯ ಶ್ರೀಗಳು ತಿಳಿಸಿದರು.

ಕಾರ್ಯಕ್ರಮವನ್ನು ಉದ್ಘಾಟಿಸಿದ ಆದಿಚುಂಚನಗಿರಿಯ ಶಂಬುನಾಥ್ ಶ್ರೀಗಳು ಮಾತನಾಡಿ, ಗುರುವಿನ ಮಾರ್ಗದರ್ಶನದಲ್ಲಿ ಶಿಷ್ಯನಾದವನು ಎಷ್ಟರ ಮಟ್ಟಿಗೆ ಅಭಿವೃದ್ದಿಯಾಗುತ್ತಾನೆ ಎನ್ನುವುದಕ್ಕೆ ಶಿವಲಿಂಗಾನಂದ ಶ್ರೀಗಳು ಉದಾಹರಣೆಯಾಗಿದ್ಧಾರೆ ಆದಿಚುಂಚನಗಿರಿಯ ಶ್ರೀ ಬಾಲಗಂಗಾಧರನಾಥ್ ಶ್ರೀಗಳು ಶಿಷ್ಯರಾಗಿ ಉತ್ತಮ ಕಾರ್ಯವನ್ನು ಮಾಡಿದ್ದಾರೆ. ಗುರುವಿನ ವಾಣಿಯನ್ನು ಆಲಿಸುವುದರ ಮೂಲಕ ಉತ್ತಮ ಸಾರ್ಥಕ ಜೀವನವನ್ನು ಸಾಗಿಸಬಹುದಾಗಿದೆ. ಗುರು ಆದವರಿಗೆ ಯಾವುದರ ಅಗತ್ಯ ಇಲ್ಲ ಆದರೆ ಭಕ್ತಾಧಿಗಳ ಇಚ್ಚೆಗೆ ಮನ ಸೋಲಬೇಕಾಗಿದೆ ಎಂದರು.

ನೂರು ಕೋಟಿ ಜನ್ಮದ ನಂತರ ನಮಗೆ ಮಾನವ ಜನ್ಮ ಸಿಗುತ್ತದೆ, ಇದರ ಸದುಪಯೋಗವನ್ನು ಮಾಡಿಕೊಳ್ಳಬೇಕಿದೆ. ಇಂದಿನ ದಿನಮಾನದಲ್ಲಿ ಎಲ್ಲರಿಗೂ ಸಹಾ ಗುರುವಿನ ಮಾರ್ಗದರ್ಶನ ಆಗತ್ಯವಾಗಿದೆ. ಗುರು ಇಲ್ಲದೆ ಇದ್ದರೆ ಬದುಕು ಕತ್ತಲೆಯಾಗುತ್ತದೆ.  ಭಾವನೆಯ ಭಕ್ತಿಯನ್ನು ಗುರುವಿನ ಮುಖದಲ್ಲಿ ಕಾಣಬಹುದಾಗಿದೆ. ಕತ್ತಲೆಯಿಂದ ಬೆಳಕಿನಡೆಗೆ ಕರೆದ್ಯೂಯುವ ಶಕ್ತಿ ಗುರುವಿಗೆ ಇದೆ. ಧರ್ಮದ ಭಕ್ತಿ ಇದ್ದರೆ ಮಾತ್ರ ಮುಕ್ತಿ ದೂರಕಲು ಸಾಧ್ಯವಿದೆ ಎಂದು ಶ್ರೀಗಳು ತಿಳಿಸಿದರು.

ಹೊಸದುರ್ಗದ ಭಗೀರಥ ಪೀಠದ ಶ್ರೀ ಪುರೋಷತ್ತಮಾನಂದ ಶ್ರೀಗಳು ಮಾತನಾಡಿ, ನಮ್ಮ ಮಠದ ಲೇಪಾಕ್ಷಿ ಶ್ರೀಗಳ ಕಾಲದಿಂದಲೂ ಸಹಾ ನಮಗೆ ಈ ಆಶ್ರಮದ ಸಂಪರ್ಕ ಇದೆ. ಶ್ರೀಗಳು ಮಾತೃವಾತ್ಸಲ ಹೃದಯದವರಾಗಿದ್ದಾರೆ. ಎಲ್ಲರನ್ನು ಸಹಾ ಒಂದೇ ರೀತಿಯಲ್ಲಿ ನೋಡುವುದರ ಮೂಲಕ ಆಶ್ರಮವನ್ನು ಮುನ್ನೆಡೆಸುತ್ತಿದ್ದಾರೆ. ಜಾತ್ಯಾತೀತ ಮಠ ಎಂದರೆ ಅದು ಕಬೀರಾನಂಧ ಆಶ್ರಮವಾಗಿದೆ. ಧಾರ್ಮಿಕ ಕಾರ್ಯ, ಶಿಕ್ಷಣ, ಆನ್ನ ದಾಸೋಹವನ್ನು ಮಾಡುವುದರ ಮೂಲಕ ಶ್ರೀಗಳು ಹೆಸರನ್ನು ಮಾಡಿದ್ದಾರೆ. ಸಿದ್ದಾರೂಢ ಪರಂಪರೆಯನ್ನು ಚನ್ನಾಗಿ ನಡೆಸುತ್ತಿದ್ದಾರೆ. ಗುರುಗಳ ಆರ್ಶಿವಾದವನ್ನು ಪಡೆಯುವುದರ ಮೂಲಕ ಸಂಸ್ಕಾರವನ್ನು ಪಡೆಯಬಹುದಾಗಿದೆ ಎಂದು ಶ್ರೀಗಳು ಹೇಳಿದರು.

ಕಾರ್ಯಕ್ರಮದ ಸಾನೀಧ್ಯವನ್ನು ವಹಿಸಿದ್ದ ಶ್ರೀ ಶಿವಲಿಂಗಾನಂದ ಶ್ರೀಗಳು ಮಾತನಾಡಿ, ನಮಗೆ ಸಿಕ್ಕ ಸಮಯವನ್ನು ಸರಿಯಾದ ರೀತಿಯಲ್ಲಿ ಸದುಪಯೋಗ ಪಡಿಸಿಕೊಳ್ಳಬೇಕಿದೆ. ಪ್ರಶಾಂತವಾದ ಮನಸ್ಸ್‌ನ್ನು ಹೊಂದಿರುವವನು ಭಗವಂತನ ಮನಸ್ಸಿನಲ್ಲಿ ಸಂತನಾಗುತ್ತಾನೆ, ಸಂತರ ಸಾನಿಧ್ಯ ದೊಡ್ಡದು, ಅವರಿಗೆ ಶಕ್ತಿಯನ್ನು ತುಂಬುವ ಚೈತನ್ಯ ಇದೆ. ನಮ್ಮ ಜನ್ಮ ದಿನಕ್ಕೆ ವಿವಿಧ ಮಠಾಧಿಶರು ಆಗಮಿಸಿದ್ದ ಸಾರ್ಥಕತೆಯನ್ನು ಪಡೆದಿದೆ. ಶರಣರಗಿಂತ ಯಾರು ಸಹಾ ದೊಡ್ಡವರಿಲ್ಲ ಎಂದರು.

ಕಾರ್ಯಕ್ರಮದಲ್ಲಿ ಕಬಿನಿಯ ಆದಿಚುಂಚುನಗಿರಿಯ ಶ್ರೀ ಶಿವಪುತ್ರ ಶ್ರೀಗಳು, ವಿಸ್ಮಯ ಟ್ರಸ್ಟ್‌ನ ಆನಂತ ಗೂರುಜಿ, ಸಮಾಜದ ಮುಖಂಡರಾದ ರುದ್ರಮುನಿ, ಕೆ.ಇ.ಬಿ ಷಣ್ಮುಖಪ್ಪ, ಗೋಪಾಲಸ್ವಾಮಿ ನಾಯಕ್ ಕುಮಾರ್ ಗೌಡ, ನಗರಸಭೆಯ ಸದಸ್ಯರಾದ ಶ್ರೀಮತಿ ಪೂಜಾ ಮಂಜುನಾಥ್, ಚಂದ್ರಶೇಖರಯ್ಯ, ಬಿಜೆಪಿ ಮುಖಂಡರಾದ ಅನಿತ್ ಕುಮಾರ್, ಭದ್ರಾವತಿಯ ಗೋವಿಂದಸ್ವಾಮಿ,ಭಾಗವಹಿಸಿದ್ದರು.

ಇದೇ ಸಂದರ್ಭದಲ್ಲಿ ಶ್ರೀ ಶಿವಲಿಂಗಾನಂದ ಶ್ರೀಗಳ ಪಾದ ಪೂಜೆಯನ್ನಯು ಭಕ್ತಾಧಿಗಳಾದ ತಿಪ್ಪೇಸ್ವಾಮಿ ನೇರವೇರಿಸಿದರು. ಸಂಸ್ಕೃತ ಪಾಠ ಶಾಲೆಯ ಶಿಕ್ಷಕರಾದ ಸುಬ್ರಾಯ ಭಟ್ ವೇದ ಘೋಷ ನೇರವೇರಿಸಿದರೆ ಶಿಕ್ಷಕಿ ಶ್ರೀಮತಿ ಸುಮನ ಪ್ರಾರ್ಥಿಸಿದರು. ವೀರಣ್ಣ ಸ್ವಾಗತಿದರು, ಮುರುಗೇಶ್ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.

Facebook
Twitter
Telegram
WhatsApp
suddionenews

suddionenews

Leave a Comment

Top Stories

ಪ್ರಜ್ವಲ್ ಅಶ್ಲೀಲ ವಿಡಿಯೋ ಪ್ರಕರಣ : ಎಸ್ಐಟಿ ಮುಂದೆ ಹಾಜರಾಗುವುದು ಉತ್ತಮ ಎಂದ ನಿಖಿಲ್ ಕುಮಾರಸ್ವಾಮಿ

ಬೆಂಗಳೂರು: ಅಶ್ಲೀಲ ವಿಡಿಯೋ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಜ್ವಲ್ ರೇವಣ್ಣ ಇನ್ನು ಪತ್ತೆಯಾಗಿಲ್ಲ. ಈ ಬಗ್ಗೆ ನಿಖಿಲ್ ಕುಮಾರಸ್ವಾಮಿಗೆ ಪ್ರಶ್ನೆ ಎದುರಾದಾಗ, ಆರೋಪಿ ಆಗಿದ್ದವನು ಆರೋಪವನ್ನು ಎದುರಿಸಬೇಕು. ಕಾನೂನು ಹೋರಾಟವನ್ನು ಮಾಡಬೇಕು ಎಂದಿದ್ದಾರೆ.   ಆರೋಪವೆಂಬುದು

ವಿದ್ಯಾರ್ಥಿಗಳಿಗೆ ಅದ್ದೂರಿ ಸ್ವಾಗತ ಕೋರಿದ ಎಸ್ ಆರ್ ಎಸ್ ಹೆರಿಟೇಜ್ ಶಾಲೆ

  ಸುದ್ದಿಒನ್, ಚಿತ್ರದುರ್ಗ, ಮೇ. 20 : ಎಸ್ ಆರ್ ಎಸ್ ಹೆರಿಟೇಜ್ ಶಾಲೆಯು 2024-25 ರ ಶೈಕ್ಷಣಿಕ ವರ್ಷ ಸೋಮವಾರದಿಂದ ಆರಂಭಗೊಂಡಿದ್ದು ಬೇಸಿಗೆ ರಜಾ ಮುಗಿಸಿಕೊಂಡು ಶಾಲೆಯತ್ತ ಮುಖ ಮಾಡಿದ ವಿದ್ಯಾರ್ಥಿಗಳನ್ನು ಶಾಲಾ

ಗ್ಯಾರಂಟಿಗಳ ಹೊರತಾಗಿ ಅಭಿವೃದ್ಧಿಗೂ ಹಣ ಮೀಸಲಿಟ್ಟು ಖರ್ಚು ಮಾಡಿದ್ದೇವೆ : ಮುಖ್ಯಮಂತ್ರಿ ಸಿದ್ದರಾಮಯ್ಯ

ಬೆಂಗಳೂರು ಮೇ 20: ಬಿಜೆಪಿಯ ನಿರಂತರ ಅಪಪ್ರಚಾರದ ನಡುವೆಯೂ ಗ್ಯಾರಂಟಿಗಳು ಜನರ ಮನೆ ಮನೆ ತಲುಪಿವೆ. ಗ್ಯಾರಂಟಿಗಳ ಹೊರತಾಗಿ ಅಭಿವೃದ್ಧಿಗೂ ಹಣ ಮೀಸಲಿಟ್ಟು ಖರ್ಚು ಮಾಡಿದ್ದೇವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅಂಕಿ ಅಂಶಗಳ

error: Content is protected !!