ಬೆಂಗಳೂರು: ಅಶ್ಲೀಲ ವಿಡಿಯೋಗಳು ಎಲ್ಲೆಡೆ ವೈರಲ್ ಆಗುತ್ತಿದ್ದಂತೆ ಊರು ಬಿಟ್ಟು ವಿದೇಶಕ್ಕೆ ಸೇರಿದ್ದ ಪ್ರಜ್ವಲ್ ರೇವಣ್ಣ ಇಂದು ಮಧ್ಯರಾತ್ರಿ ಬೆಂಗಳೂರಿಗೆ ಬಂದಿದ್ದಾರೆ. ಬೆಂಗಳೂರು ಏರ್ಪೋರ್ಟ್ ನಲ್ಲಿಯೇ ಬೀಡು ಬಿಟ್ಟಿದ್ದ ಎಸ್ಐಟಿ ಅಧಿಕಾರಿಗಳು ಬಂದ ಕೂಡಲೇ ವಶಕ್ಕೆ ಪಡೆದಿದ್ದಾರೆ. ಅದರಲ್ಲೂ ಎಸ್ಐಟಿಯ ಮಹಿಳಾ ಅಧಿಕಾರಿಗಳೇ ವಶಕ್ಕೆ ಪಡೆದಿದ್ದಾರೆ.
ಸುಮನ್ ಕರ್ನೇಕರ್ ಅವರ ಟೀಂ ಪ್ರಜ್ವಲ್ ರೇವಣ್ಣ ಅವರನ್ನು ಬಂಧಿಸಿದೆ. ಬಂಧಿಸಿದ ಬಳಿಕ ಎಸ್ಐಟಿ ಕಚೇರಿಗೆ ಕರೆದೊಯ್ದಿದ್ದಾರೆ. ಪ್ರಜ್ವಲ್ ರೇವಣ್ಣ ಬಂಧನಕ್ಕೆ ಮಹಿಳೆಯರನ್ನೇ ನೇಮಿಸಿದ್ದರ ಹಿಂದೆಯೂ ಒಂದು ಉದ್ದೇಶವಿದೆ. ಆ ಕಾರಣಕ್ಕಾಗಿಯೇ ಮಹಿಳಾ ಅಧಿಕಾರಿಗಳೇ ಬಂಧಿಸಿದ್ದಾರೆ.
ಪ್ರಜ್ವಲ್ ರೇವಣ್ಣ ಮೇಲೆ ಅತ್ಯಾಚಾರದಂತಹ ಆರೋಪ ಬಂದಿರುವುದು. ಒಂದಲ್ಲ ಎರಡಲ್ಲ ಸಾವಿರಾರು ಹುಡುಗಿಯರ ವಿಡಿಯೋ ಲೀಕ್ ಆಗಿರುವುದು. ಮಹಿಳೆಯರ ಕೇಸ್ ಆಗಿರುವ ಕಾರಣ ಹೆಣ್ಣುಮಕ್ಕಳಿಗೆ ಮುಜುಗರವಾಗಬಾರದು ಎಂಬ ಕಾರಣಕ್ಕೆ ತನಿಖೆಗೆ ಮಹಿಳಾ ಅಧಿಕಾರಿಗಳನ್ನೇ ನೇಮಕ ಮಾಡಲಾಗಿರುತ್ತದೆ. ಹೀಗಾಗಿ ಅರೆಸ್ಟ್ ಮಾಡುವುದಕ್ಕೂ ಮಹಿಳಾ ಅಧಿಕಾರಿಗಳೇ ಹೋಗಿದ್ದಾರೆ.
ಪ್ರಜ್ವಲ್ ರೇವಣ್ಣ ಸುಮಾರು 34 ದಿನಗಳ ಕಾಲ ಎಸ್ಐಟಿ ಅಧಿಕಾರಿಗಳನ್ನು ಆಟವಾಡಿಸಿದ್ದಾರೆ. ವಿದೇಶದಲ್ಲಿದ್ದುಕೊಂಡೇ ಎಲ್ಲಾ ಮಾಹಿತಿಯನ್ನು ಪಡೆದಿದ್ದಾರೆ. ಕಡೆಗೂ ಬೆಂಗಳೂರಿಗೆ ಬರುವ ಮನಸ್ಸು ಮಾಡಿದ್ದು, ಮಧ್ಯರಾತ್ರಿ ತಲುಪಿದ್ದಾರೆ. ಗುರುತರ ಆರೋಪ ಹೊತ್ತು ಜರ್ಮನಿಯಲ್ಲಿ ಝಾಂಡಾ ಊರಿದ್ದ ಸಂಸದ ಪ್ರಜ್ವಲ್ ಲುಫ್ತಾನ್ಸಾ ಏರ್ಲೈನ್ಸ್ನ LH764 ವಿಮಾನದಲ್ಲಿ ತಡರಾತ್ರಿ 12.46ಕ್ಕೆ ಮ್ಯೂನಿಕ್‌ನಿಂದ ಬೆಂಗಳೂರಿನ ಕೆಂಪೇಗೌಡ ಏರ್ಪೋರ್ಟ್ಗೆ ಬಂದಿಳಿದ್ರು. ಇನ್ನು ಪ್ರಜ್ವಲ್ ಇದ್ದ ವಿಮಾನ ಲ್ಯಾಂಡ್ ಆಗುತ್ತಿದ್ದಂತೆ ನೇರವಾಗಿ ವಿಮಾನದ ಬಳಿ ತೆರಳಿದ ಸಿಐಎಸ್ಎಫ್ ಅಧಿಕಾರಿಗಳು ಪ್ರಜ್ವಲ್ ರೇವಣ್ಣರನ್ನು ವಶಕ್ಕೆ ಪಡೆದು ಎಮಿಗ್ರೇಷನ್ ಬಳಿಗೆ ಕರೆತಂದರು.