Notice: Undefined index: options in /home/nagendra/public_html/content/plugins/elementor-pro/modules/theme-builder/widgets/site-logo.php on line 124

ಇಂದಿನಿಂದ ಶಿವಕುಮಾರ ಶ್ರೀಗಳ ಶ್ರದ್ಧಾಂಜಲಿ ಕಾರ್ಯಕ್ರಮ : ಮದುವಣಗಿತ್ತಿಯಂತೆ  ಸಿಂಗಾರಗೊಂಡ ಸಿರಿಗೆರೆ

Facebook
Twitter
Telegram
WhatsApp

ಸುದ್ದಿಒನ್, ಚಿತ್ರದುರ್ಗ, ಸೆಪ್ಟೆಂಬರ್.19 : ಇಂದಿನಿಂದ ಐದು ದಿನಗಳ ಕಾಲ ನಡೆಯುವ ತರಳಬಾಳು ಪೀಠದ ಹಿರಿಯ ಗುರುಗಳಾದ ಶ್ರೀ ಶಿವಕುಮಾರ ಶಿವಾಚಾರ್ಯು ಸ್ವಾಮೀಜಿಯವರ 31ನೆಯ ಶ್ರದ್ಧಾಂಜಲಿ ಕಾರ್ಯಕ್ರಮಕ್ಕೆ ಸಿರಿಗೆರೆ ಮದುವಣಗಿತ್ತಿಯಂತೆ ಸಿಂಗಾರಗೊಂಡು ಕಂಗೊಳಿಸುತ್ತಿದೆ.

ಈ ಹಿನ್ನೆಲೆಯಲ್ಲಿ ಎಲ್ಲಾ  ಸಿದ್ಧತೆಗಳು ಭರದಿಂದ ಸಾಗಿದ್ದು, ಅಂತಿಮ ಹಂತಕ್ಕೆ ತಲುಪಿದ್ದು ನೂರಾರು ಕಾರ್ಯಕರ್ತರು, ಶಿಕ್ಷಕರು ಮತ್ತು ವಿದ್ಯಾರ್ಥಿಗಳ ತಂಡ ಹಗಲಿರುಳು ಶ್ರಮವಹಿಸುತ್ತಿದ್ದಾರೆ.

ವಿಶಾಲವಾದ ವೇದಿಕೆ ಪ್ರಮುಖ ಆಕರ್ಷಣೆ:
ಇಂದು (ಬುಧವಾರ) ಸಂಜೆ ಮಹಾವೇದಿಕೆಯಲ್ಲಿ ತರಳಬಾಳು ಜಗದ್ಗುರು ಡಾ. ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳವರ ದಿವ್ಯ ಸಾನ್ನಿಧ್ಯದಲ್ಲಿ ಆರಂಭಗೊಳ್ಳುವ ಸಭಾ ಕಾರ್ಯಕ್ರಮಗಳಿಗೆ ವಿಶಾಲವಾದ ಸಭಾ ವೇದಿಕೆ ಮತ್ತು ಮಹಾಮಂಟಪ ಆಕರ್ಷಣೆಯ ಕೇಂದ್ರ ಬಿಂದುವಾಗಿದೆ.

ಗುರುಶಾಂತ ದಾಸೋಹ ಮಂಟಪದ ಮುಖ್ಯದ್ವಾರವನ್ನು ಒಳಗೊಂಡಂತೆ ವೇದಿಕೆಯು 40 × 60 ಅಡಿ  ವಿಸ್ತೀರ್ಣ ಹೊಂದಿದ್ದು, ಎರಡೂ ಬದಿಯಲ್ಲಿ ಗ್ರೀನ್‌ ರೂಂಗಳ ಸೌಲಭ್ಯ ಕಲ್ಪಿಸಲಾಗಿದೆ. ಪ್ರೇಕ್ಷಕರು ಕುಳಿತು ಕಾರ್ಯಕ್ರಮ ವೀಕ್ಷಿಸಲು 160 × 200 ಅಡಿಯ ವಿಶಾಲ ಮಹಾಮಂಟಪವನ್ನು ನಿರ್ಮಾಣ ಮಾಡಲಾಗಿದೆ.ಮಂಟಪದ ಎಡ ಬಲ ತುದಿಯಲ್ಲಿ 2 ಸಾವಿರ ಖುರ್ಚಿಗಳನ್ನು ಹಾಕಲು ವ್ಯವಸ್ಥೆ ಮಾಡಲಾಗಿದೆ. ಸಭಾ ಕಾರ್ಯಕ್ರಮವನ್ನು ವೀಕ್ಷಿಸಲು 8 ಕಡೆ ಬೃಹತ್‌ ಎಲ್‌ಇಡಿ ಪರದೆಗಳನ್ನು ಅಳವಡಿಸಲಾಗಿದೆ.

ದಾಸೋಹ ಭವನ : ದಾಸೋಹ ಮಂಟಪದ ಪಕ್ಷದಲ್ಲಿಯೇ ಅಡಿಗೆ ಮಂಟಪವನ್ನು ನಿರ್ಮಾಣ ಮಾಡಲಾಗಿದೆ.
ಸಭಾಮಂಟಪದಿಂದ ಸ್ವಲ್ಪ ದೂರದಲ್ಲಿ  ಪ್ರತ್ಯೇಕ ದಾಸೋಹ ಭವನವನ್ನು ನಿರ್ಮಾಣ ಮಾಡಲಾಗಿದೆ. ಇಲ್ಲಿ ಒಂದು ಬಾರಿಗೆ 3000 ಜನರು ಕುಳಿತು ಊಟ ಮಾಡಬಹುದಾಗಿದೆ. ಇಷ್ಟೇ ಅಲ್ಲದೇ ಗುರುಶಾಂತ ದಾಸೋಹ ಭವನದಲ್ಲಿಯೂ ಸಹಾ ಸುಮಾರು 2000 ಜನರು ಒಟ್ಟಿಗೆ ಬಫೆ ಪದ್ಧತಿಯಲ್ಲಿ ಪ್ರಸಾದ ಸ್ವೀಕರಿಸಬಹುದಾಗಿದೆ.

ಝಗಮಗಿಸುವ ವಿದ್ಯುದ್ದೀಪದ ಅಲಂಕಾರ :
ಮಠದ ಆವರಣದಲ್ಲಿರುವ ಐಕ್ಯಮಂಟಪ ಪ್ರಮುಖ ಆಕರ್ಷಣೆಯಾಗಿದ್ದು, ಪೊಲೀಸ್‌ ಸ್ಟೇಷನ್‌ ಮತ್ತು ಪೆಟ್ರೋಲ್‌ ಬಂಕ್‌ನವರೆಗೂ, ಪ್ರಮುಖ ರಸ್ತೆಗಳು, ಮಠದ ಆಡಳಿತಕ್ಕೆ ಒಳಪಟ್ಟ ಶಾಲಾ ಕಾಲೇಜು, ಕಚೇರಿ, ಕಟ್ಟಡಗಳಿಗೂ ಝಗಮಗಿಸುವ ವಿವಿಧ ರೀತಿಯ  ವಿದ್ಯುತ್‌ ದೀಪಗಳನ್ನು ಅಳವಡಿಸಿರುವುದು ನೋಡುಗರ ಕಣ್ಣಿಗೆ ಆಹ್ಲಾದಕರವೆನಿಸುತ್ತದೆ.

ಭಕ್ತರ ಭರಪೂರ ಸಹಕಾರ : ಈ ವರ್ಷ ಎಲ್ಲೆಡೆಯೂ ಬರದ ಛಾಯೆ ಆವರಿದೆ. ಆದರೆ ಶಿವಕುಮಾರ ಶ್ರೀಗಳ ಶ್ರದ್ಧಾಂಜಲಿ ಕಾರ್ಯಕ್ರಮಕ್ಕೆ ಮಾತ್ರ ಅಂತಹ ಯಾವುದೇ ಆತಂಕವಿಲ್ಲ. 500 ಕ್ವಿಂಟಾಲು ಅಕ್ಕಿ, ನೂರಾರು ಟಿನ್‌ ಖಾದ್ಯ ತೈಲ, ರಾಜ್ಯದ ವಿಶ್ರಾತ ಪೊಲೀಸ್‌ ಮಹಾನಿರ್ದೇಶಕ ಶಂಕರ ಬಿದರಿ ಅವರ 40 ಕ್ವಿಂಟಾಲು ಬೆಲ್ಲ ಸೇರಿ ನೂರಾರು ಕ್ವಿಂಟಾಲು ಬೆಲ್ಲ, ತೊಗರಿಬೇಳೆ, ಹೆಸರು ಕಾಳು, ಕಡ್ಲೇಕಾಳು, ಗೋದಿ ನುಚ್ಚು, ರವೆ, ಡಾಲ್ಡ ಮುಂತಾದ ಸಾಮಗ್ರಿಗಳು ಬಂದಿವೆ. ಇನ್ನುಳಿದಂತೆ ತರಕಾರಿ, ಆಹಾರ ಸಾಮಗ್ರಿಗಳನ್ನು ಹೆಚ್ಚು ಪ್ರಮಾಣದಲ್ಲಿ ನೀಡುವ ವಾಗ್ದಾನವನ್ನು ಭಕ್ತರು ಮಾಡಿದ್ದಾರೆ.

ಹೀಗೆ ರಾಜ್ಯದ ಹಲವಾರು ಕಡೆಗಳಿಂದ ಭಕ್ತಾದಿಗಳುತಮ್ಮ ಸೇವೆಯನ್ನು ಸಲ್ಲಿಸುವುದರ ಮೂಲಕ ಭರಪೂರ ಸಹಕಾರ ನೀಡಿದ್ದಾರೆ.

ಸ್ವಚ್ಛತೆಗೆ ಆದ್ಯತೆ : ಐದು ದಿನಗಳ ಕಾಲ ನಡೆಯುವ ಕಾರ್ಯಕ್ರಮಕ್ಕೆ ಬರುವ ಭಕ್ತರು ಒಂದೆಡೆಯಾದರೆ, ಸಿರಿಗೆರೆಯ ಶಾಲಾ ಕಾಲೇಜುಗಳಲ್ಲಿ ಓದುವ ವಿದ್ಯಾರ್ಥಿಗಳ ಸಂಖ್ಯೆ 4 ಸಾವಿರಕ್ಕೂ ಮಿಗಿಲು. ಇವರೆಲ್ಲರ ಆರೋಗ್ಯದ ಕಡೆಗೆ ಎಚ್ಚರಿಕೆ ಇಟ್ಟುಕೊಂಡೇ ಕಾರ್ಯಕರ್ತರು ಸ್ವಚ್ಚತೆಗೆ ಗಮನ ನೀಡಿದ್ದಾರೆ.ಮಠದಿಂದ ಸಭಾಮಂಟಪದವರೆಗಿನ ಸಾರ್ವ ಜನಿಕ ಚರಂಡಿಗಳಿಗೆ ರಸಾಯನಿಕ ಹಾಕಿ ಸ್ವಚ್ಛತೆ ಕಾಪಾಡಲಾಗಿದೆ. ರಸ್ತೆ ಬದಿಗಳನ್ನು ಕಳೆದ ಒಂದು ವಾರದಿಂದ ಸ್ವಚ್ಛಗೊಳಿಸಲಾಗಿದೆ.

ಜಿಲ್ಲಾ ಆರೋಗ್ಯ ಇಲಾಖೆಯೂ ಮುಂಜಾಗ್ರತ ಕ್ರಮವಾಗಿ ಆರೋಗ್ಯ ಸಿಬ್ಬಂದಿಗಳ ಜೊತೆಗೆ ಸಭೆ ನಡೆಸಿ, ಶ್ರದ್ಧಾಂಜಲಿಗೆ ಆಗಮಿಸುವ ಜನರ ಆರೋಗ್ಯದ ಕಡೆ ನಿಗಾ ವಹಿಸುವಂತೆ ಸೂಚಿಸಿಸದೆ.

ಇಂದಿನ ಕಾರ್ಯಕ್ರಮಗಳು
ಸಾನ್ನಿಧ್ಯ: ತರಳಬಾಳು ಜಗದ್ಗುರು ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳವರು
ಬೆಳಿಗ್ಗೆ 9.30 ಶ್ರದ್ಧಾಂಜಲಿ ಅಂಗವಾಗಿ ಸಾರ್ವಜನಿಕರಿಗೆ ಉಚಿತ ಆರೋಗ್ಯ ಮತ್ತು ನೇತ್ರ ತಪಾಸಣೆ ಶಿಬಿರ.

ಬೆಳಿಗ್ಗೆ 10 ಗಂಟೆಗೆ ಮಹಾಮಂಟಪದಲ್ಲಿ ತರಳಬಾಳು ಜಗದ್ಗುರು ವಿದ್ಯಾಸಂಸ್ಥೆಯ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳಿಗೆ ಸಾಂಸ್ಕೃತಿಕ ಸ್ಪರ್ಧೆಗಳು

ಸಂಜೆ 6 ಗಂಟೆಗೆ ಸಭಾ ಕಾರ್ಯಕ್ರಮ:
ವಿಜೇತ ತಂಡಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳ ಪ್ರದರ್ಶನ. ದಾವಣಗೆರೆಯ ಸುಶ್ರಾವ್ಯ ಸಂಗೀತ ವಿದ್ಯಾಲಯ ತಂಡದಿಂದ ವಚನಗೀತೆ, ತುಮಕೂರು ಸಾಯಿ ರಾಮನ್‌ ನೃತ್ಯ ಕೇಂದ್ರದಿಂದ ಭರತನಾಟ್ಯ ಪ್ರದರ್ಶನ.

ಅತಿಥಿಗಳು: ಶಾಸಕರಾದ ಬಿ.ಜಿ. ಗೋವಿಂದಪ್ಪ, ಎಚ್.ಕೆ. ಸುರೇಶ್‌, ಬಿ.ಪಿ. ಹರೀಶ್‌, ಕೆ.ಎಸ್.‌ ಬಸವಂತಪ್ಪ,
ವಿಶೇಷ ಆಹ್ವಾನಿತರು: ಜಿಲ್ಲಾಧಿಕಾರಿ ಜಿ.ಆರ್.ಜೆ. ದಿವ್ಯಾ ಪ್ರಭು, ರಕ್ಷಣಾಧಿಕಾರಿ ಧರ್ಮೇಂದರ್‌ ಕುಮಾರ್‌ ಮೀನಾ, ದಾವಣಗೆರೆ ವಿವಿ ಕುಲಪ0ತಿ ಬಿ.ಡಿ. ಕುಂಬಾರ್‌, ಶಿಕ್ಷಣ ಇಲಾಖೆಯ ಬಿ.ಎಸ್.‌ ರಘುವೀರ್.‌

Facebook
Twitter
Telegram
WhatsApp
suddionenews

suddionenews

Leave a Comment

Top Stories

ಅಜೀರ್ಣ, ಮಲಬದ್ಧತೆ ಸಮಸ್ಯೆನ್ನು ಎಂದಿಗೂ ನಿರ್ಲಕ್ಷಿಸಬೇಡಿ : ಇದು ಹೃದಯಕ್ಕೆ ತೊಂದರೆ

ನಮ್ಮ ದೇಹದಲ್ಲಿ ಸಣ್ಣ ಪುಟ್ಟ ಸಮಸ್ಯೆಯಾದರೂ ಕೆಲವೊಂದು ಆರೋಗ್ಯ ಸಮಸ್ಯೆಗೆ ಕಾರಣವಾಗುತ್ತದೆ. ಸುಮಾರು ಜನಕ್ಕೆ ಅಜೀರ್ಣ ಹಾಗೂ ಮಲಬದ್ಧತೆಯ ಸಮಸ್ಯೆ ಕಾಡುತ್ತಿರುತ್ತದೆ. ಇದು ಕಾಮನ್ ತಾನೇ ಎಂದು ನಿರ್ಲಕ್ಷ್ಯ ಮಾಡಿದರೆ ಅದರಿಂದ ಮುಂದೆ ಹೃದಯಕ್ಕೆ

ಈ ರಾಶಿಯವರಿಗೆ ಅಡಚಣೆ ಸಮಸ್ಯೆದಿಂದ ಬೇಸತ್ತು ಜೀವನದಲ್ಲಿ ಜಿಗುಪ್ಸೆ

ಈ ರಾಶಿಯವರಿಗೆ ಅಡಚಣೆ ಸಮಸ್ಯೆದಿಂದ ಬೇಸತ್ತು ಜೀವನದಲ್ಲಿ ಜಿಗುಪ್ಸೆ: ಈ ರಾಶಿಯವರಿಗೆ ಒಳ್ಳೆಯ ಸಂಬಂಧ ಮದುವೆಗೆ ಒಲೆಯಲಿದೆ ಶುಕ್ರವಾರರಾಶಿ ಭವಿಷ್ಯ -ನವೆಂಬರ್-22,2024 ಸೂರ್ಯೋದಯ: 06:29, ಸೂರ್ಯಾಸ್ತ : 05:35 ಶಾಲಿವಾಹನ ಶಕೆ -1946 ಸಂವತ್-2080

ಗೋಲ್ಡ್ ರೇಟ್ ಇಂದು ಕೂಡ ಹೆಚ್ಚಳ : ಗ್ರಾಂಗೆ ಎಷ್ಟು ಏರಿಕೆ ಆಯ್ತು..?

ಬೆಂಗಳೂರು: ಚಿನ್ನ ಬೆಳ್ಳಿಯ ಬೆಲೆಯಲ್ಲಿ ಹಾವು ಏಣಿಯ ಆಟ ಕೆಲ ದಿನದಿಂದ ಕಾಣಿಸ್ತಾ ಇದೆ. ಹಾವು ಮೇಲೇರಿದಂತೆ ಚಿನ್ನದ ಬೆಲೆ ಸರಸರನೆ ಏರುತ್ತಲೆ ಇದೆ. ಇಂದು ಕೂಡ ಇಳಿಕೆಯಾಗದೆ ಏರಿಕೆಯತ್ತಲೇ ಮುಖ ಮಾಡಿದೆ. ಹಾಗಾದ್ರೆ

error: Content is protected !!