ಕನ್ನಡದ ಕೋಗಿಲೆ ಅಂತಾನೇ ಖ್ಯಾತಿ ಪಡೆದಿದ್ದ ಅಖಿಲಾ ಮಜಿಮಣ್ಣು ದಾಂಪತ್ಯ ಜೀವನದಲ್ಲಿ ಬಿರುಕು ಮೂಡಿದೆ. ಡಿವೋರ್ಸ್ ಪಡೆಯುತ್ತಿದ್ದಾರೆ ಎಂಬ ಸುದ್ದಿ ಎಲ್ಲೆಡೆ ಹಬ್ಬಿದೆ. ಇದರ ಬೆನ್ನಲ್ಲೇ ಗಂಡನ ಜೊತೆಗಿದ್ದ ಎಲ್ಲಾ ಫೋಟೋಗಳನ್ನು ತಮ್ಮ ಸೋಷಿಯಲ್ ಮೀಡಿಯಾದಿಂದ ಡಿಲೀಟ್ ಮಾಡಲಾಗಿದೆ. ಇದು ಅವರ ಅಭಿಮಾನಿ ಬಳಗಕ್ಕೆ ಬೇಸರ ತರಿಸಿದೆ. ಆದರೆ ಡಿವೋರ್ಸ್ ಪಡೆಯುವ ಹಂತಕ್ಕೆ ದಾಂಪತ್ಯ ಜೀವನ ದಾಟಿದೆ ಅಂದ್ರೆ ಅದು ಅವರಿಬ್ಬರ ವೈಯಕ್ತಿಕ ವಿಚಾರವೆಂದು ಅಭಿಮಾನಿಗಳು ಅದನ್ನ ಗೌರವಿಸಿದ್ದಾರೆ.
ಕಳೆದ ಮೂರು ವರ್ಷಗಳ ಹಿಂದಷ್ಟೇ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಇದೀಗ ಅವರ ಡಿವೋರ್ಸ್ ಅರ್ಜಿ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಾ ಇದೆ. ಕುಟುಂಬಸ್ಥರ ಸಮ್ಮುಖದಲ್ಲಿ ಮದುವೆಯಾಗಿದ್ದ ಅಖಿಲಾ, ಸೋಷಿಯಲ್ ಮೀಡಿಯಾದಿಂದಾನೂ ಎಲ್ಲಾ ಫೋಟೋಗಳನ್ನು ಡಿಲೀಟ್ ಮಾಡಿದ್ದಾರೆ. ಆದರೆ ಕುಟುಂಬಸ್ಥರ ಜೊತೆಗಿರುವ ಫೋಟೋ ಮಾತ್ರ ಉಳಿಸಿದ್ದಾರೆ.
ಅಖಿಲಾ ಪಜಿಮಣ್ಣು ಅವರು 2022ರಲ್ಲಿ ಧನಂಜಯ್ ಶರ್ಮಾ ಎಂಬುವವರ ಜೊತೆಗೆ ಮದುವೆಯಾಗಿದ್ದರು. ಆಗಿನ್ನು ಅಖಿಲಾಗೆ 23 ವರ್ಷ ವಯಸ್ಸು. ಮದುವೆಯಾದ ಮೇಲೆ ದಂಪತಿ ವಿದೇಶಕ್ಕೆ ಹಾರಿದ್ದರು. ಅಮೆರಿಕಾದಲ್ಲಿ ದಂಪತಿ ವಾಸವಾಗಿದ್ದರು. ಅವರ ಸೋಷಿಯಲ್ ಮೀಡಿಯಾದಲ್ಲೆಲ್ಲಾ ಧನಂಜಯ ಶರ್ಮಾ ಅವರು ಅಖಿಲಾ ಹಾಡುವ ಹಾಡುಗಳನ್ನ ರೆಕಾರ್ಡ್ ಮಾಡಿ ಹಾಕ್ತಾ ಇದ್ದರು. ನೋಡುಗರಿಗೆ ಇಬ್ಬರ ದಾಂಪತ್ಯ ಚೆನ್ನಾಗಿದೆ ಅಂತಾನೇ ಅನ್ನಿಸಿದ್ದರು, ಇಂದು ಡಿವೋರ್ಸ್ ಗೆ ಬಂದು ನಿಂತಿದೆ. ಮದುವೆಯಾದ ಮೂರೇ ವರ್ಷಕ್ಕೆ ದಾಂಪತ್ಯ ಜೀವನಕ್ಕೆ ಗಾಯಕಿ ಬ್ರೇಕ್ ಹಾಕಿದ್ದಾರೆ. ಸದ್ಯಕ್ಕೆ ಈ ವಿಚಾರ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಾ ಇದೆ.






