ಜಾನಪದ ಕಲಾವಿದರಿಗೆ ಸರಕಾರದ ಸೌಲಭ್ಯ ಕಲ್ಪಿಸಲು ಪ್ರಾಮಾಣಿಕ ಪ್ರಯತ್ನ : ಕೆ.ಸಿ.ನಾಗರಾಜ್ ಭರವಸೆ

2 Min Read

 

ವರದಿ ಮತ್ತು ಫೋಟೋ ಕೃಪೆ
ಕೆ.ಎಂ.ಮುತ್ತುಸ್ವಾಮಿ ಕಣ್ಣನ್
ಮೊ : 78998 64552

ಸುದ್ದಿಒನ್, ಚಿತ್ರದುರ್ಗ, ನವೆಂಬರ್. 19 : ಜಾನಪದ ಕಲಾವಿದರಿಗೆ ಸರ್ಕಾರದಿಂದ ಸಿಗಬೇಕಾದ ನ್ಯಾಯಯುತವಾದ ಸೌಲಭ್ಯಗಳನ್ನು ಕೊಡಿಸುವಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಕೆ.ಡಿ.ಪಿ.ಸದಸ್ಯ ಕೆ.ಸಿ.ನಾಗರಾಜ್ ಭರವಸೆ ನೀಡಿದರು.

 

ಧ್ವನಿ ಗ್ರಾಮೀಣಾಭಿವೃದ್ದಿ ಮತ್ತು ಸಾಂಸ್ಕøತಿಕ ಕಲಾ ಸಂಘ ಹುಲ್ಲೂರು, ಕನ್ನಡ ಮತ್ತು ಸಂಸ್ಕøತಿ ನಿರ್ದೇಶನಾಲಯ ಇವರುಗಳ ಸಂಯುಕ್ತಾಶ್ರಯದಲ್ಲಿ ಕುರುಬರಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಆವರಣದಲ್ಲಿ ಮಂಗಳವಾರ ಏರ್ಪಡಿಸಲಾಗಿದ್ದ ಜನಪದ ಸಾಂಸ್ಕøತಿಕ ಉತ್ಸವ ಹಾಗೂ ಕಲಾವಿದರಿಗೆ ಸನ್ಮಾನ ಸಮಾರಂಭ ಉದ್ಗಾಟಿಸಿ ಮಾತನಾಡಿದರು.

 

ಗ್ರಾಮೀಣ ಪ್ರದೇಶಗಳಲ್ಲಿ ಈ ಹಿಂದೆ ಯಾವುದೆ ಶುಭ ಸಮಾರಂಭಗಳು ನಡೆಯುವಾಗ ಜಾನಪದ, ಸೋಬಾನೆ ಪದಗಳನ್ನು ಹಾಡುತ್ತಿದ್ದರು. ಈಗ ಅಂತಹ ಕಲೆ ನಶಿಸುತ್ತಿದೆ. ಜಾನಪದ ಕಲಾವಿದರಿಗೆ ಮೊದಲು ಗುರುತಿನ ಚೀಟಿಗಳನ್ನು ನೀಡಬೇಕು. ಕಲೆಯನ್ನು ಜೀವನದ ಉಸಿರನ್ನಾಗಿಸಿಕೊಂಡಿರುವ ಕಲಾವಿದರಿಗೆ ಸರ್ಕಾರದಿಂದ ಮಾಶಾಸನ ಸಿಗಬೇಕು ಎಂದು ಹೇಳಿದರು.

 

ಕರ್ನಾಟಕ ರಾಜ್ಯ ಟಿಪ್ಪುಸುಲ್ತಾನ್ ಅಭಿಮಾನಿಗಳ ಮಹಾವೇದಿಕೆ ರಾಜ್ಯಾಧ್ಯಕ್ಷ ಟಿಪ್ಪುಖಾಸಿಂ ಆಲಿ ಮಾತನಾಡುತ್ತ ನಿಜವಾದ ಕಲಾವಿದರಿಗೆ ಸರ್ಕಾರದಿಂದ ಮಾಶಾಸನ ಸಿಕ್ಕರೆ ವೃದ್ದಾಪ್ಯದಲ್ಲಿ ನೆಮ್ಮದಿಯಾಗಿ ಜೀವಿಸಲು ನೆರವಾಗಲಿದೆ. ಕಳೆದ ಹದಿನೇಳು ವರ್ಷಗಳಿಂದ ಟಿಪ್ಪುಸುಲ್ತಾನ್ ಜಯಂತಿಯನ್ನು ಆಚರಿಸಿಕೊಂಡು ಬರುತ್ತಿದ್ದು, ರಾಜ್ಯದ ಮೂಲೆ ಮೂಲೆಗಳಿಂದ ಕಲಾವಿದರನ್ನು ಕರೆಸಿದ್ದೇನೆ. ಮುನ್ನೂರು ರೋಡ್‍ಶೋ ಮಾಡಿದ್ದೇನೆ. ಮೊದಲಿನಿಂದಲೂ ಹೋರಾಟವೇ ನನ್ನ ಜೀವನ. ಮುರುಘರಾಜೇಂದ್ರ ಒಡೆಯರ್, ಜಯಣ್ಣನವರು ನನ್ನ ಜೊತೆಗಿರುತ್ತಿದ್ದರು. ಈಗ ಅವರಿಬ್ಬರು ಜೀವಂತವಾಗಿಲ್ಲ ಎಂದು ನೆನಪಿಸಿಕೊಂಡರು.

 

ಕಲಾವಿದರ ಬದುಕು ಕಷ್ಟದಲ್ಲಿದೆ. ನಮ್ಮ ದೇಶದ ಸಂಪತ್ತು ಕಲೆಯನ್ನು ಉಳಿಸಿ ಬೆಳೆಸಿದಾಗ ಕಲಾವಿದರ ಬದುಕು ಸುಧಾರಣೆಯಾಗಲಿದೆ ಎಂದು ತಿಳಿಸಿದರು. ಧ್ವನಿ ಗ್ರಾಮೀಣಾಭಿವೃದ್ದಿ ಮತ್ತು ಸಾಂಸ್ಕøತಿಕ ಕಲಾ ಸಂಘದ ಕಾರ್ಯದರ್ಶಿ ಎ.ಕೃಷ್ಣಪ್ಪ ಪ್ರಾಸ್ತಾವಿಕವಾಗಿ ಮಾತನಾಡಿ ಕಲಾವಿದ ಬದುಕು ಕಷ್ಟದಲ್ಲಿದೆ. ಬಹಳಷ್ಟು ಕಲಾವಿದರು ಮಾಶಾಸನದಿಂದ ವಂಚಿತರಾಗಿದ್ದಾರೆ. ಬಸ್‍ಗಳಲ್ಲಿ ಉಚಿತ ಪ್ರಯಾಣಕ್ಕೆ ಅವಕಾಶ ಮಾಡಿಕೊಡಬೇಕು ಎಂದು ಸರ್ಕಾರವನ್ನು ಒತ್ತಾಯಿಸಿದರು.

ಗ್ರಾಮ ಪಂಚಾಯಿತಿ ಅಧ್ಯಕ್ಷೆ ಫರ್ವಿನ್ ರಿಯಾಬುದ್ದಿನ್ ಅಧ್ಯಕ್ಷತೆ ವಹಿಸಿದ್ದರು. ಕಡ್ಲೆಗುದ್ದು ಆಂಜನೇಯಸ್ವಾಮಿ ಪ್ರೌಢಶಾಲೆ ಮುಖ್ಯ ಶಿಕ್ಷಕ ಡಾ.ಮಹೇಶ್, ಗ್ರಾಮ ಪಂಚಾಯಿತಿ ಸದಸ್ಯರುಗಳಾದ ಅಸ್ಮಾತಾಜ್ ಮಹಮದ್ ಇಬ್ರಾಹಿಂ, ಅಯಾಜ್ ಅಹಮದ್ ಖಾನ್, ಕೊಲ್ಲಮ್ಮ ದುರುಗಪ್ಪ, ರಹಮತ್‍ವುಲ್ಲಾಬೇಗ್, ಜಾಮಿಯ ಮಸೀದಿ ಅಧ್ಯಕ್ಷ ಬಸೀರ್‍ಸಾಬ್, ಕಾರ್ಯದರ್ಶಿ ಯಾಕೂಬ್‍ಸಾಬ್, ಕೆ.ಡಿ.ಪಿ.ತಾಲ್ಲೂಕು ಸದಸ್ಯ ಮಹಮದ್ ನೂರುಲ್ಲಾ, ಶಕುಂತಲ, ಸೈಯದ್ ರಫಿ, ಹನೀಸ್, ಸೈಯದ್ ಖುದ್ದೂಸ್ ಇನ್ನು ಅನೇಕರು ವೇದಿಕೆಯಲ್ಲಿದ್ದರು.
ಎಂ.ಕೆ.ಹರೀಶ್, ತ್ರಿವೇಣಿ, ಬಡಾವಣೆ ಠಾಣೆ ಸಬ್‍ಇನ್ಸ್‍ಪೆಕ್ಟರ್ ಯಶೋಧ ಇವರುಗಳು ಜಾನಪದ ಹಾಡುಗಳನ್ನು ಹಾಡಿ ಗ್ರಾಮಸ್ಥರನ್ನು ರಂಜಿಸಿದರು.

 

Share This Article
Leave a Comment

Leave a Reply

Your email address will not be published. Required fields are marked *