ವಾಲ್ಮೀಕಿ ಹಗರಣದಲ್ಲಿ ಮಹತ್ವದ ಬೆಳವಣಿಗೆ : ಪಾಲಿಕೆಯ ಬಿಜೆಪಿ ಸದಸ್ಯನಿಗೆ ಸಂಕಷ್ಟ..?

1 Min Read

ವಾಲ್ಮೀಕಿ ಹಗರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಹಲವರ ತಲೆದಂಡವಾಗಿದೆ. ಇದೀಗ ಈ ಹಗರಣಕ್ಕೆ ಸಂಬಂಧಿಸಿದಂತೆ ಮಹತ್ವದ ಬೆಳವಣಿಗೆಯೊಂದು ನಡೆದಿದೆ. ಮೊದಲ ಬಾರುಗೆ ಸಿಬಿಐ ಎಂಟ್ರಿಯಾಗಿದೆ. ಈ ಕೇಸ್ ನಿಂದಾಗಿ ಪಾಲಿಕೆಯ ಬಿಜೆಪಿ ಸದಸ್ಯನಿಗೆ ಸಂಕಷ್ಟವಾಗುವ ಎಲ್ಲಾ ಲಕ್ಷಣಗಳು ಕಾಣಿಸುತ್ತಿವೆ. ಹಾಗಾದ್ರೆ ವಾಲ್ಮೀಕಿ ಹಗರಣದ ಪ್ರಕರಣದಲ್ಲಿ ಏನೆಲ್ಲಾ ಬೆಫವಣಿಗೆಗಳಗ್ತಾ ಇದೆ ಅನ್ನೋದನ್ನ ನೋಡೋಣಾ.

ಬಿಜೆಪಿಯ ಕಾರ್ಪೋರೇಟರ್ ಮನೆ ಮೇಲೆ ದಾಳಿಯಾಗಿದೆ. ಕಾರ್ಪೋರೇಟರ್ ಗೋವಿಂದರಾಜುಗೆ ಸಿಬಿಐ ಶಾಕ್ ನೀಡಿದ್ದು, ದಾಳಿ ನಡೆಸಿದೆ. ಹಣದ ವಹಿವಾಟು ಹಿನ್ನೆಲೆ, ಕಾರ್ಪೋರೇಟರ್ ಗೋವಿಂದರಾಜು ಮನೆ ಮೇಲೆ ಸಿಬಿಐ ದಾಳಿ ನಡೆಸಿದೆ‌. ಹತ್ತಕಗಕೂ ಹೆಚ್ಚು ಸಿಬಿಐ ಅಧಿಕಾರಿಗಳಿಂದ ದಾಳಿಯಾಗಿದೆ.

ಉದ್ಯಮಿ ಕುಮಾರಸ್ವಾಮಿ, ಮಗ ಗೋವಿಂದರಾಜುಲುಗೆ ಶಾಕ್ ನೀಡಲಾಗಿದೆ. ಬಳ್ಳಾರಿಯ ಗಾಂಧಿನಗರದಲ್ಲಿರುವ ಮನೆ ಮೇಲೆ ದಾಳಿ ನಡೆಸಿ, ಪರಿಶೀಲನೆ ನಡೆಸುತ್ತಾ ಇದ್ದಾರೆ. ನೆಕ್ಕಂಟಿ ನಾಗರಾಜ್ ಖಾತೆಯಿಂದ ಗೋವಿಂದ ರಾಜುಗೆ ಹಣ ವರ್ಗಾವಣೆಯಾಗಿದೆ. ಈಗ ಈ ಹಣ ವರ್ಗಾವಣೆಯ ಬಗ್ಗೆಯೂ ಪರಿಶೀಲನೆ ನಡೆಯುತ್ತಿದೆ. ಮೊಟ್ಟೆ ವ್ಯಾಪಾರ ಸೇರಿದಂತೆ ಕುಮಾರಸ್ವಾಮಿ ಹಲವು ರೀತಿಯ ವ್ಯಾಪಾರವನ್ನು ನಡೆಸ್ತಾ ಇದ್ದಾರೆ. ಈ ಹಿನ್ನೆಲೆ ಕುಮಾರಸ್ವಾಮಿ ಪುತ್ರ ಗೋವಿಂದ ರಾಜುಲು ಹಲವು ಕಡೆ ಹಣ ಹೂಡಿಕೆ ಮಾಡಿದ್ದಾರೆ. ಹೀಗಾಗಿ ಇದೆಲ್ಲವನ್ನು ಸಿಬಿಐ ಪರಿಶೀಲನೆಯನ್ನು ನಡೆಸುತ್ತಿದ್ದಾರೆ. ಮಾಜಿ ಸಚಿವ ನಾಗೇಂದ್ರ ಅವರ ಆಪ್ತ ಕೂಡ ಆಗಿದ್ದಾರೆ ಕುಮಾರಸ್ವಾಮಿ. ನೆಕ್ಕಂಟಿ ನಾಗರಾಜ್ ನಿಂದ ಕೋಟಿ ಕೋಟಿ ಹಣ ಗೋವಿಂದ ರಾಜುಲು ಅವರ ಅಕೌಂಟ್ ಗೆ ವರ್ಗಾವಣೆಯಾಗಿದೆ. ಅವರಿಂದ ಇವರಿಗೆ ಯಾಕೆ ಅಷ್ಟೊಂದು ದಿಬಾರಿ ಪ್ರಮಾಣದ ಹಣ ಯಾಕೆ ವರ್ಗಾವಣೆ ಆಯ್ತು ಅನ್ನೋದು ಸಿಬಿಐ ಪ್ರಶ್ನೆಯಾಗಿದೆ. ಹೀಗಾಗಿ ಪರಿಶೀಲನೆ ನಡೆಯುತ್ತಾ ಇದೆ.

Share This Article