ಬೆಂಗಳೂರು: ಕೆಲವೊಂದು ಪರೀಕ್ಷೆಗಳು ಮಕ್ಕಳ ಭವಿಷ್ಯಕ್ಕೆ ಬಹಳ ಮುಖ್ಯವಾಗುತ್ತವೆ. ಅದರಲ್ಲೂ ಎಸ್ಎಸ್ಎಲ್ಸಿ, ಪಿಯು ಪರೀಕ್ಷೆಗಳು ತುಂಬಾನೇ ಮುಖ್ಯವಾಗಿರುತ್ತವೆ. 100 ಅಂಕಗಳಿಗೆ 3 ಗಂಟೆ ಪರೀಕ್ಷೆ ನಡೆಸಲಾಗುತ್ತದೆ. ಇಡೀ ವರ್ಷ ಓದಿರುವುದನ್ನು 3 ಗಂಟೆಗಳಲ್ಲಿ ಬರೆಯಬೇಕು. ಎಷ್ಟೋ ಮಕ್ಕಳಿಗೆ ಈ ಸಮಯವೇ ಸಾಕಾಗುವುದಿಲ್ಲ. ಆದರೆ ಈಗ ಆ ಸಮಯವನ್ನು ಕೂಡ ಇಳಿಸಲಾಗುತ್ತಿದೆ. ಈ ಸಂಬಂಧ ಶಿಕ್ಷಣ ಇಲಾಖೆ ಮಹತ್ವದ ಆದೇಶ ಹೊರಡಿಸಿದ್ದು, ಹೊಸ ನಿಯಮ ಜಾರಿಗೆ ತಂದಿದೆ.
ಇಷ್ಟು ವರ್ಷ 3 ಗಂಟೆಗಳ ಕಾಲ ಪರೀಕ್ಷೆ ನಡೆಯುತ್ತಿತ್ತು. ಆದರೆ ಇನ್ಮುಂದೆ ಅದರಲ್ಲಿ 15 ನಿಮಿಷವನ್ನು ಇಳಿಸಲಾಗಿದೆ. ಅಂದರೆ 2 ಗಂಟೆ 45 ನಿಮಿಷಗಳಿಗೆ ಪರೀಕ್ಷೆಯ ಕೊನೆಯ ಬೆಲ್ ಹೊಡೆಯಲಿದೆ. ಅಷ್ಟರ ಒಳಗೆ ಮಕ್ಕಳು ಪರೀಕ್ಷೆಯನ್ನು ಬರೆದು ಮುಗಿಸಿರಬೇಕು. ಹಾಗಂತ ಅಂಕಗಳು ನೂರಕ್ಕೆ ಸೀಮಿತವಾಗಿಲ್ಲ. ಅಂಕದ ವಿಚಾರದಲ್ಲೂ ಇಳಿಕೆ ಮಾಡಲಾಗಿದೆ. 100 ಅಂಕಕ್ಕೆನಡೆಯಬೇಕಿದ್ದ ಪರೀಕ್ಷೆ ಇನ್ಮುಂದೆ 80 ಅಂಕಕ್ಕೆ ನಡೆಯಲಿದೆ. ಅಂದರೆ 20 ಅಂಕವನ್ನು ಶಿಕ್ಷಣ ಇಲಾಖೆ ಇಳಿಸಿದೆ.
ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿಯು ಪರೀಕ್ಷೆಯ ಅವಧಿಯನ್ನು ಇಳಿಸಿದ್ದು, ಈ ಹೊಸ ನಿಯಮ ಇನ್ಮುಂದೆ ಪರೀಕ್ಷೆ ಬರೆಯಿವವರಿಗೆ ಅನ್ವಯವಾಗಲಿದೆ. ಈ ಮೊದಲೆಲ್ಲಾ ಪರೀಕ್ಷೆಗೂ ಮುನ್ನ 15 ನಿಮಿಷ ಪ್ತಶ್ನೆ ಪತ್ರಿಕೆ ಓದಿಕೊಳ್ಳುವುದಕ್ಕೇನೆ ಕೊಡಲಾಗಿತ್ತು. ಈಗಲೂ ಆ ನಿಯಮ ಮುಂದುವರೆದಿದೆ. ಪ್ರಶ್ನೆ ಪತ್ರಿಕೆಯನ್ನು ಓದಿಕೊಳ್ಳುವುದಕ್ಕೆ, ಬರೆಯುವುದಕ್ಕೆ ಮೂರು ಗಂಟೆಗಳ ಅವಧಿ ನೀಡಲಾಗಿದೆ. ಈ ಹೊಸ ನಿಯಮಗಳು ಮುಂದಿನ ಪರೀಕ್ಷೆಗೆ ಅನ್ವಯವಾಗಲಿವೆ.