ಸುದ್ದಿಒನ್, ಚಿತ್ರದುರ್ಗ, ಏಪ್ರಿಲ್. 12 :
ಪಂಚಾಕ್ಷರಿ ಮಂತ್ರವಾದ “ಓಂ ನಮಃ ಶಿವಾಯ” ಇದು ಶಿವನಿಗೆ ನಮಸ್ಕಾರ ಎಂದಾಗಿದ್ದು, ಇದೊಂದು ಶಕ್ತಿ ಮಂತ್ರ, ದಿವ್ಯ ಮಂತ್ರ ಹಾಗೂ ಪಾಪ ಪರಿಹಾರ ಮಂತ್ರವಾಗಿದೆ ಎಂದು ನಿರಂಜನ ದೇವರಮನೆ ಅವರು ಹೇಳಿದರು.

ಅವರು ಶನಿವಾರ ನಗರದ ಶ್ರೀ ನೀಲಕಂಠೇಶ್ವರ ದೇವಸ್ಥಾನದಲ್ಲಿ ನಡೆದ ಸಮೃದ್ಧಿ ಮಹಿಳಾ ಸಂಸ್ಥೆಯ 8ನೇ ಮಾಸಿಕ ಸಭೆಯಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ಅವರು ಆಚಾರವೇ ಸ್ವರ್ಗ ಅನಾಚಾರವೇ ನರಕ, ಧರ್ಮ ಮತ್ತು ಸಂಸ್ಕೃತಿಯ ಬಗ್ಗೆ ಮಾತನಾಡುತ್ತಾ ಪಂಚಾಕ್ಷರಿ ಮಂತ್ರ ಹಾಗೂ ರುದ್ರಾಕ್ಷಿ ಧಾರಣೆಯ ಮಹತ್ವದ ಕುರಿತು ಹಿತನುಡಿಗಳನ್ನು ಆಡಿದರು.
ಮತ್ತೋರ್ವ ಅತಿಥಿ ಯೋಗ ಗುರು ಶ್ರೀ ಚಿನ್ಮಯಾನಂದ ಗುರೂಜಿ ಅವರು “ಅಕಾರ ಉಕಾರ ಮಕಾರ” ಮೂರು ಅಕ್ಷರಗಳಿರುವ ಓಂ ಮಂತ್ರದ ಜಪದಿಂದ ಎಷ್ಟು ಶಕ್ತಿ ಸಿಗುತ್ತದೆ ಮತ್ತು ಆ ಮಂತ್ರದಿಂದ ಆಗುವ ಲಾಭದ ಬಗ್ಗೆ ತಿಳಿಸಿಕೊಟ್ಟರು.
ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀಮತಿ ಸುನಿತಾ ಮಲ್ಲಿಕಾರ್ಜುನ್ ವಹಿಸಿದ್ದು, ಶ್ರೀಮತಿ ಕೆ ಸಿ ವೀಣಾ ಸುರೇಶ್, ಶ್ರೀಮತಿ ಜಯಶೀಲ, ಶ್ರೀಮತಿ ಮಾಂತಮ್ಮ, ಶ್ರೀಮತಿ ಪುಷ್ಪಲತಾ, ಶ್ರೀಮತಿ ಶಾಲಿನಿ, ಶ್ರೀಮತಿ ವಿಶಾಲ ನಂದೀಶ್, ಶ್ರೀಮತಿ ನಳಿನಿ ವಿರೂಪಾಕ್ಷಪ್ಪ ಉಪಸ್ಥಿತರಿದ್ದರು. ಶ್ರೀಮತಿ ಲಲಿತಾ ಎಸ್ ಹಿರೇಮಠ ಕಾರ್ಯಕ್ರಮದ ನಿರೂಪಣೆ ವಹಿಸಿದ್ದರು. ಪ್ರಾರ್ಥನೆ ಶ್ರೀಮತಿ ವಿಶಾಲ, ಸ್ವಾಗತ ಶ್ರೀಮತಿ ಮಹಾಂತಮ್ಮ ಹಾಗೂ ವಂದನಾರ್ಪಣೆ ಶ್ರೀಮತಿ ಕೆ ಸಿ ವೀಣಾ ಸುರೇಶ್ ಅವರಿಂದ ನಡೆಯಿತು. ಸಮೃದ್ಧಿ ಮಹಿಳಾ ಸಂಸ್ಥೆಯ ಸರ್ವ ಸದಸ್ಯರುಗಳು ಭಾಗವಹಿಸಿದ್ದರು.














