ಶಿವಮೊಗ್ಗ: ಸಾಗರ ತಾಲೂಕಿನ ಶರಾವತಿ ಹಿನ್ನೀರಿನ ಸಿಗಂಧೂರು ಬ್ರಿಡ್ಜ್ ಉದ್ಘಾಟನೆಗೆ ರೆಡಿಯಾಗಿದೆ. ನಾಳೆ ಸೇತುವೆ ಉದ್ಘಾಟನೆಯಾಗಲಿದ್ದು, ಪ್ರವಾಸಿಗರಂತೂ ಕಾಯ್ತಾ ಇದ್ದಾರೆ. ಈ ಸೇತುವೆ ಕೇಬಲ್ ಸೇತುವೆಯಾಗಿದೆ. ಇದನ್ನು ಸಿದ್ಧ ಮಾಡುವುದಕ್ಕೆ ಸುಮಾರು 473 ಕೋಟಿ ಖರ್ಚು ಮಾಡಲಾಗಿದೆ. ಕೇಂದ್ರ ಸಚಿವರಾದ ನಿತಿನ್ ಗಡ್ಕರಿ ನಾಳೆ ಈ ಸೇತುವೆಯನ್ನ ಉದ್ಘಾಟನೆ ಮಾಡಲಿದ್ದಾರೆ. ಹಾಗೇ ಪ್ರಹ್ಲಾದ್ ಜೋಶಿ ಕೂಡ ಜೊತೆಯಲ್ಲಿರಲಿದ್ದಾರೆ.
ಮೊದಲು ಸಿಗಂಧೂರಿಗೆ ಹೋಗಿ ತಾಯಿ ಚೌಡೇಶ್ವರಿ ದರ್ಶನ ಪಡೆದು, ವಿಶೇಷ ಪೂಜೆ ಮಾಡಿ ಬಳಿಕ ಸೇತುವೆಯನ್ನು ಉದ್ಘಾಟನೆ ಮಾಡಲಿದ್ದಾರೆ ಎನ್ನಲಾಗಿದೆ. ಸೇತುವೆ ಉದ್ಘಾಟನೆ ಮಾಡಿದ ಬಳಿಕ ಸಾಗರದ ನೆಹರೂ ಮೈದಾನದಲ್ಲಿ ದಿಡ್ಡ ಕಾರ್ಯಕ್ರಮವನ್ನು ಆಯೋಜನೆ ಮಾಡಲಾಗಿದೆ. ಈ ಕಾರ್ಯಕ್ರಮಕ್ಕೆ ಮಾಜಿ ಪ್ರಧಾನಿಗಳಾದ ಹೆಚ್.ಡಿ.ದೇವೇಗೌಡ ಅವರು ಕೂಡ ಬರುವ ಸಾಧ್ಯತೆ ಇದೆ. ಸಾಗರದ ಜನತೆಯನ್ನುದ್ದೇಶಿಸಿ, ಸಿಗಂಧೂರು ಭಕ್ತರನ್ನುದ್ದೇಶಿಸಿ ಈ ಸಂದರ್ಭದಲ್ಲಿ ಮಾತನಾಡಲಿದ್ದಾರೆ.
ಇನ್ನು ಈ ಸೇತುವೆ ನಿರ್ಮಾಣಕ್ಕೆ 473 ಕೋಟಿ ರೂಪಾಯಿ ಖರ್ಚಾಗಿದ್ದು, 2019ರ ಡಿಸೆಂಬರ್‌ನಲ್ಲಿ ಇದರ ಕಾಮಗಾರಿ ಆರಂಭವಾಗಿದ್ದು. 2025ರ ಜುಲೈ 14 ರಂದು ಕಾಮಗಾರಿ ಮುಕ್ತಾಯವಾಗಿದೆ. ದಿಲೀಪ್ ಬಿಲ್ಡ್ ಕಾನ್ ಎಂಬ ಏಜೆನ್ಸಿ ಈ ಕಾಮಗಾರಿಯನ್ನು ನಿರ್ವಹಣೆ ಮಾಡಿದೆ.
ಈ ಸೇತುವೆಯ ಉದ್ಧ 2125 ಮೀಟರ್ ಇದೆ. ಹಾಗೇ ಅಗಲ 16 ಮೀಟರ್ ಇದೆ. ಉಕ್ಕಿನ ಕೇಬಲ್ ಅನ್ನ ಬಳಸಲಾಗಿದೆ. ಸಿಗಂಧೂರಿಗೆ ಹೋಗಲು ಈ ಮೊದಲು ಲಾಂಚ್ ಬಳಕೆ ಮಾಡುತ್ತಿದ್ದರು. ಜನ, ವಾಹನವೆಲ್ಲ ಅದರೊಳಗೆ ಹೋಗಬೇಕಿತ್ತು. ಇನ್ಮೇಲೆ ಬ್ರಿಡ್ಜ್ ಮೇಲೆ ಹೋಗಬೇಕು.






