ಬೆಂಗಳೂರು: ರಂಗಾಯಣದ ಅಡ್ಡಂಡ ಕಾರ್ಯಪ್ಪನವರು ಸಿದ್ದು ನಿಜಕನಸುಗಳು ಎಂಬ ಪುಸ್ತಕವನ್ನು ಬರೆದಿದ್ದಾರೆ. ಇದರ ಮುಖಪುಟದಲ್ಲಿ ಸಿದ್ದರಾಮಯ್ಯ ಅವರು ಖಡ್ಗ ಹಿಡಿದ ಫೋಟೋ ಹಾಕಲಾಗಿದೆ. ಈ ಬಗ್ಗೆ ಇದೀಗ ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇದು ಮಾನನಷ್ಟ ಉದ್ದೇಶ. ಇದಕ್ಕೆ ಕಾನೂನಿನ ಮೂಲಕ ಕ್ರಮ ಕೈಗೊಳ್ಳುತ್ತೇನೆ. ಯಾರು ಆ ಕೃತಿ ಬಿಡುಗಡೆ ಮಾಡುತ್ತಿದ್ದಾರೆ ಎಂಬುದು ಗೊತ್ತಿಲ್ಲ. ನೋಡಿ ಕಾಮಾಲೆ ರೋಗದವರಿಗೆ ಎಲ್ಲವೂ ಹಳದಿಯಾಗಿಯೇ ಕಾಣುತ್ತದೆ. ಚುನಾವಣೆ ಸಂದರ್ಭದಲ್ಲಿ ನನ್ನ ತೇಜೋವಧೆ ಮಾಡುವುದಕ್ಕೆ ಇಂತಹ ಪುಸ್ತಕವನ್ನು ಬಿಡುಗಡೆ ಮಾಡುತ್ತಿದ್ದಾರೆ.
ಟಿಪ್ಪು ಖಡ್ಗ ಹಿಡಿದು, ಡ್ರೆಸ್ ಹಾಕಿಕೊಂಡವರು ಯಾರು..? ಯಡಿಯೂರಪ್ಪ ಮತ್ತು ಶೋಭಾ ಕರಂದ್ಲಾಜೆಯಲ್ಲವೆ. ಟಿಪ್ಪು ಬಗ್ಗೆ ಶೇಖ್ ಅಲಿ ಪುಸ್ತಕ ಬರೆದಾಗ, ಮುನ್ನುಡಿ ಬರೆದವರು ಯಾರು..? ಇದು ಇಬ್ಬಂದಿತನ ಅಲ್ವಾ..? ಎಂದು ಪ್ರಶ್ನಿಸಿದ್ದಾರೆ. ಇಂದು ಟೌನ್ ಹಾಲ್ ನಲ್ಲಿ ಸಿದ್ದು ನಿಜಕನಸುಗಳು ಪುಸ್ತಕವನ್ನು, ಸಚಿವ ಅಶ್ವತ್ಥ್ ನಾರಾಯಣ್ ಲೋಕಾಪರ್ಣೆ ಮಾಡುತ್ತಿದ್ದಾರೆ.