ಸಿದ್ಧೇಶ್ ಯಾದವ್ ನಿಧನ : ಗಣ್ಯರ ಸಂತಾಪ, ನಾಳೆ ಹುಟ್ಟೂರಿನಲ್ಲಿ ಅಂತ್ಯಕ್ರಿಯೆ…!

1 Min Read

ಸುದ್ದಿಒನ್, ಚಿತ್ರದುರ್ಗ, (ಜು.03) : ಭಾರತೀಯ ಜನತಾ ಪಾರ್ಟಿಯ ಬಳ್ಳಾರಿ ವಿಭಾಗದ ಪ್ರಬಾರಿ ಸಿದ್ಧೇಶ್ ಯಾದವ್ (49) ಬೆಂಗಳೂರಿನ ಮಲ್ಲೇಶ್ವರಂನ ಬಿಜೆಪಿ ಕಛೇರಿಯಲ್ಲಿ ಇಂದು ಮಧ್ಯಾಹ್ನ ಹೃದಯಾಘಾತದಿಂದ ನಿಧನರಾದರು.

ಇಂದು ಮಧ್ಯಾನ್ಹ ಬೆಂಗಳೂರಿನ ಪಕ್ಷದ ಕಛೇರಿಯಲ್ಲಿ ಪಕ್ಷದ ಸಭೆ ನಡೆಯುತ್ತಿರುವಾಗಲೇ ಹೃದಯಾಘಾತವಾಗಿದೆ
ತಕ್ಷಣವೇ ಅವರನ್ನು ಹತ್ತಿರದ ಕೆಸಿ ಜನರಲ್ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೂ ಚಿಕಿತ್ಸೆ ಫಲಿಸದೆ ಕೊನೆಯುಸಿರೆಳೆದಿದ್ದಾರೆ.

ಎಬಿವಿಪಿಯಲ್ಲಿ 1988 ರಿಂದ ಕಾರ್ಯ ನಿರ್ವಹಿಸಿದ್ದು, ನಗರ ಕಾರ್ಯದರ್ಶಿ, ರಾಜ್ಯ ಕಾರ್ಯಕಾರಿಣಿ ಸದಸ್ಯರು, ಜಿಲ್ಲಾ ಪ್ರಮುಖರಾಗಿ ಕಾರ್ಯನಿರ್ವಹಿಸಿದ್ದು, ನಂತರ ಬಿಜೆಪಿಯನ್ನು ಸೇರಿದ ಅವರು ಇದರಲ್ಲಿ ಎನ್.ಜಿ.ಓ.ರಾಜ್ಯ ಸಹ ಸಂಚಾಲಕರಾಗಿ, ಚಿತ್ರದುರ್ಗ ಜಿಲ್ಲಾ ಸಂಘಟನಾ ಪ್ರಧಾನ ಕಾರ್ಯದರ್ಶಿ, 2008 ರಿಂದ 2011ರವರೆಗೆ ಚಿತ್ರದುರ್ಗ ಜಿಲ್ಲಾ ಬಿಜೆಪಿ ಅಧ್ಯಕ್ಷರಾಗಿ, 2013ರಲ್ಲಿ ಬಿಜೆಪಿಯಿಂದ ಹಿರಿಯೂರು ವಿಧಾನಸಭಾ ಕ್ಷೇತ್ರದ ಅಭ್ಯರ್ಥಿಯಾಗಿ, ರಾಜ್ಯ ಓಬಿಸಿ ಪ್ರಧಾನ ಕಾರ್ಯದರ್ಶಿಯಾಗಿ, ರಾಜ್ಯ ಸ್ಲಂ ಮೋರ್ಚಾ ಉಪಾಧ್ಯಕ್ಷರಾಗಿ ಈಗ ಹಾಲಿ ಬಳ್ಳಾರಿ ವಿಭಾಗದ ಪ್ರಬಾರಿಗಳಾಗಿ ಕಾರ್ಯ ನಿರ್ವಹಿಸುತ್ತಿದ್ದರು.

ಮೃತರಿಗೆ ಪತ್ನಿ ಹಾಗೂ ಇಬ್ಬರು ಪುತ್ರರು ಸೇರಿದಂತೆ ಆಪಾರ ಬಂಧು ಬಳಗವನ್ನು ಆಗಲಿದ್ದಾರೆ. ಎಂ.ಎ.ಪದವೀದರರರಾಗಿದ್ದರು.
ಹಿರಿಯೂರು ತಾಲ್ಲೂಕಿನ ಬಸಪ್ಪ ಮಾಳಿಗೆ ಇವರ ಹುಟ್ಟೂರು.

ಇವರು ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್.ಸಂತೋಷ್ ಮತ್ತು ಆರ್.ಎಸ್.ಎಸ್.ನ ರಾಷ್ಟ್ರೀಯ ಸರಕಾರ್ಯವಾಹರಾಗಿದ್ದ ದತ್ತಾತ್ರೇಯ ರವರ ಜೊತೆಯಲ್ಲಿ ಒಡನಾಡಿಯಾಗಿದ್ದರು.

ಸಂತಾಪ : ಸಿದ್ಧೇಶ್ವ ಯಾದವ್ ರವರ ಆಗಲಿಕೆಗೆ ಕೇಂದ್ರ ಸಚಿವರಾದ ನಾರಾಯಣಸ್ವಾಮಿ, ದಾವಣಗೆರೆ ಸಂಸದರಾದ ಜಿ,ಎಂ ಸಿದ್ದೇಶ್ವರ, ಶಾಸಕರಾದ ಎಂ.ಚಂದ್ರಪ್ಪ ವಿಧಾನ ಪರಿಷತ್ ಮುಖ್ಯ ಸಚೇತಕರಾದ ವೈ.ಎ.ನಾರಾಯಣಸ್ವಾಮಿ, ಸದಸ್ಯರಾದ ಕೆ.ಎಸ್.ನವೀನ್, ಮಾಜಿ ಶಾಸಕ ಜಿ.ಹೆಚ್. ತಿಪ್ಪಾರೆಡ್ಡಿ, ಶ್ರೀಮತಿ ಪೂರ್ಣಿಮಾ ಶ್ರೀನಿವಾಸ್, ತಿಪ್ಪೇಸ್ವಾಮಿ, ಜಿಲ್ಲಾಧ್ಯಕ್ಷ ಎ.ಮುರುಳಿ, ಮುಖಂಡರಾದ ಲಿಂಗಮೂರ್ತಿ, ಜಯಪಾಲಯ್ಯ, ಅನಿತ್ ಕುಮಾರ್ ಸೇರಿದಂತೆ ಇತರರು ಸಂತಾಪವನ್ನು ವ್ಯಕ್ತಪಡಿಸಿದ್ದಾರೆ.

ಅಂತ್ಯಕ್ರಿಯೆ : ಜುಲೈ 4 ರಂದು ಸ್ವಗ್ರಾಮವಾದ ಹಿರಿಯೂರಿನ ಬಸಪ್ಪ ಮಾಳಿಗೆಯಲ್ಲಿ ಮಧಾಹ್ನ ಅಂತ್ಯಕ್ರಿಯೇ ನಡಯಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.

Share This Article
Leave a Comment

Leave a Reply

Your email address will not be published. Required fields are marked *