ವಿಜಯಪುರ: ಸಿದ್ದೇಶ್ವರ ಸ್ವಾಮೀಜಿ ಭಕ್ತರು ತುಂಬಾ ಆತಂಕದಲ್ಲಿದ್ದಾರೆ. ಸ್ವಾಮೀಜಿಗಳ ಆರೋಗ್ಯ ಸ್ಥಿತಿ ಗಂಭೀರವಾಗಿದೆ ಎನ್ನಲಾಗಿತ್ತು. ಈ ಆತಂಕದಿಂದ ಹಬ್ಬಿದ್ದ ವದಂತಿಗಳಿಂದ ಜ್ಞಾನಯೋಗಾಶ್ರಮದ ಬಳಿ ಭಕ್ತರು, ಬೆಂಬಲಿಗರು ಜಮಾಯಿಸಿದ್ದರು. ಈ ವೇಳೆ ಜನರನ್ನು ನಿಯಂತ್ರಿಸಲು ಪೊಲೀಸರಿಗೂ ಸಾಕಷ್ಟು ಕಷ್ಟವಾಯಿತು.
ಭಕ್ತರನ್ನು ನಿಯಂತ್ರಿಸುವುದಕ್ಕೆ ಪೊಲೀಸರು ಲಾಠಿ ಚಾರ್ಜ್ ಮಾಡಬೇಕಾಯಿತು. ಇದರ ನಡುವೆಯೂ ಆಶ್ರಮದತ್ತ ಸಹಸ್ರಾರು ಸಂಖ್ಯೆಯಲ್ಲಿ ಭಕ್ತರು ದೌಡಾಯಿಸುತ್ತಿದ್ದಾರೆ. ಸ್ವಾಮೀಜಿಯನ್ನು ನೋಡಲೇಬೇಕೆಂದು ಭಕ್ತರು ಪಟ್ಟು ಹಿಡಿದು, ಕಣ್ಣೀರು ಹಾಕುತ್ತಿದ್ದಾರೆ.
ಇನ್ನು ವೈದ್ಯರು ಸ್ವಾಮೀಜಿ ಬಗ್ಗೆ ಮಾಹಿತಿ ನೀಡಿದ್ದು, ವದಂತಿಗಳಿಗೆ ಕಿವಿಗೊಡಬೇಡಿ ಎಂದಿದ್ದಾರೆ. ಸ್ವಾಮೀಜಿಗಳ ಆರೋಗ್ಯ ಸ್ಥಿರವಾಗಿದೆ. ಆಕ್ಸಿಜನ್ ಪೂರೈಕೆಯಾಗುತ್ತಿದೆ. ಉಸಿರಾಟ ಕೂಡ ಚೆನ್ನಾಗಿದೆ. ಅವರ ಆರೋಗ್ಯ ಸ್ಥಿತಿ ಸುಧಾರಿಸುತ್ತಿದೆ ಎಂದಿದ್ದಾರೆ.