ಸಿದ್ದೇಶ್ ಯಾದವ್ ನಿಧನ ಕುಂಟುಂಬಕ್ಕೆ ಮಾತ್ರವಲ್ಲದೆ ಪಕ್ಷ ಮತ್ತು ಸಂಘಟನೆಗೂ ಅಪಾರ ನಷ್ಠ : ಸಿ.ಟಿ ರವಿ

suddionenews
1 Min Read

 

ವರದಿ ಮತ್ತು ಫೋಟೋ ಕೃಪೆ
ಸುರೇಶ್ ಪಟ್ಟಣ್,
ಮೊ : 98862 95817

ಚಿತ್ರದುರ್ಗ,(ಜು.07) : ಸಿದ್ದೇಶ್ ಯಾದವ್ ರವರ ಆಕಾಲಿಕ ನಿಧನ ಅವರ ಕುಟುಂಬದವರಿಗೆ ಮಾತ್ರವಲ್ಲ ಸಂಘಟನೆ ಮತ್ತು ಪಕ್ಷಕ್ಕೂ ಸಹಾ ದುಃಖವನ್ನುಂಟು ಮಾಡಿದೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ತಿಳಿಸಿದರು.

ಇತ್ತೀಚೆಗೆ ನಿಧನರಾದ ಸಿದ್ದೇಶ್ ಯಾದವ್‌ರವರು ಮನೆಗೆ ಭೇಟಿ ನೀಡಿ ಮೃತರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಕುಂಟುಂಬದವರಿಗೆ ಸಾಂತ್ವಾನ ಹೇಳಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಸಿದ್ದೇಶ್ ಯಾದವ್ ರವರು ನನ್ನದೊಂದಿಗೆ ಬಹಳ ವರ್ಷಗಳಿಂದ ಒಡನಾಡಿಗಳಾಗಿದ್ದರು.

ವಿದ್ಯಾರ್ಥಿ ಪರಿಷತ್ ಕಾಲದಿಂದಲೂ ಹಿಡಿದು ಬಿಜೆಪಿ ಯುವ ಮೋರ್ಚಾದಿಂದಲೂ ಪಕ್ಷದ ಹಲವಾರು ಜವಾಬ್ದಾರಿಗಳನ್ನು ಹೊತ್ತು ಕೊಂಡು ನಮ್ಮ ಜೊತೆಯಲ್ಲಿ ಉತ್ತಮವಾಗಿ ಕೆಲಸವನ್ನು ಮಾಡಿದವರು. ಅವರ ಆಕಾಲಿಕ ನಿಧನ ಅವರ ಕುಂಟುಂಬಕ್ಕೆ ಮಾತ್ರವಲ್ಲ ಪಕ್ಷ ಮತ್ತು ಸಂಘಟನೆಗೆ ದುಃಖವಾಗಿದ್ದು ಅಪಾರವಾದ ನಷ್ಠವನ್ನು ಉಂಟು ಮಾಡಿದೆ ಎಂದರು.

ಪಕ್ಷದಲ್ಲಿ ಬೆಳೆಯುತ್ತಿದ್ದ ನಾಯಕನಾಗಿದ್ದು, ಹಿಂದುಳಿದ ವರ್ಗದ ನಾಯಕರಾಗಿದ್ದು ಕಾಡುಗೊಲ್ಲರನ್ನು ಎಸ್.ಟಿ.ಗೆ ಸೇರಿಸಬೇಕೆಂದು ಹೋರಾಟವನ್ನು ಮಾಡುವುದರ ಮೂಲಕ ಬಹಳಷ್ಟು ಪ್ರಯತ್ನವನ್ನು ಮಾಡಿದ್ದರು. ಎರಡು ಮೂರು ಬಾರಿ ದೆಹಲಿಗೆ ಹೋಗಿ ಕಾಡುಗೊಲ್ಲರನ್ನು ಎಸ್.ಟಿ.ಗೆ ಸೇರಿಸುವ ಪ್ರಯತ್ನವನ್ನು ಮಾಡಿದ್ದರು. ಇವರ ಆಕಾಲಿಕ ನಿಧನ ಆಘಾತಕರ ಸಂಗತಿಯಾಗಿದೆ. ನಾನು ಸಿದ್ಧೇಶ್ ಯಾದವ್ ಒಟ್ಟಿಗೆ ಕೆಲಸವನ್ನು ಮಾಡಿದವರು ಅವರು ನಿಧನರಾದ ದಿನ ನಾನು ರಾಜ್ಯದಲ್ಲಿ ಇರಲಿಲ್ಲ. ಈ ಹಿನ್ನಲೆಯಲ್ಲಿ ಇಂದು ಅವರ ನಿವಾಸಕ್ಕೆ ಭೇಟಿ ನೀಡಿ ಅವರ ಕುಟುಂಬ ವರ್ಗದವರಿಗೆ ಸ್ವಾಂತ್ವಾನ ಹಾಗೂ ಧೈರ್ಯವನ್ನು ತುಂಬುವ ಕಾರ್ಯವನ್ನು ಮಾಡಿದ್ದೇನೆ ಎಂದು ರವಿ ತಿಳಿಸಿದರು.

Share This Article
Leave a Comment

Leave a Reply

Your email address will not be published. Required fields are marked *