ರಾಹುಲ್ ಮುಂದೆ ಮುಂದಿನ ಸಿಎಂ ಎಂದು ಗುರುತಿಸಿಕೊಳ್ಳುವುದೇ ಸಿದ್ದರಾಮಯ್ಯ ಉದ್ದೇಶ : ಬಿಜೆಪಿ

1 Min Read

ಬೆಂಗಳೂರು: ಸಿದ್ದರಾಮಯ್ಯ ಅವರಿಗೆ 75 ವರ್ಷ ತುಂಬುತ್ತಿರುವ ಹಿನ್ನೆಲೆ ಅವರ ಬೆಂಬಲಿಗರು ಸಿದ್ದರಾಮೋತ್ಸವ ಮಾಡಲು ರೆಡಿಯಾಗಿದ್ದಾರೆ. ದೊಡ್ಡಮಟ್ಟದಲ್ಲಿ ಕಾರ್ಯಕ್ರಮ ಮಾಡಲು ಯೋಜನೆ ರೂಪಿಸಿದ್ದಾರೆ. ಕಾರ್ಯಕ್ರಮಕ್ಕೆ ಕಾಂಗ್ರೆಸ್ ನ ಹಿರಿಯರೆಲ್ಲಾ ಒಟ್ಟುಗೂಡುತ್ತಿದ್ದಾರೆ. ರಾಹುಲ್ ಗಾಂಧಿಗೂ ಆಹ್ವಾನ ನೀಡಿದ್ದು, ಅವರು ಬರಲಿದ್ದಾರೆ. ಈ ಬಗ್ಗೆ ಬಿಜೆಪಿ ವ್ಯಂಗವಾಡಿದ್ದು, ಟ್ವೀಟ್ ಮಾಡಿದೆ.

ಟ್ವಿಟ್ಟರ್ ನಲ್ಲಿ ಹೀಗಿದೆ : ಸಿದ್ದರಾಮೋತ್ಸವ ಎನ್ನುವುದು ಮಾಜಿ ಮುಖ್ಯಮಂತ್ರಿ @siddaramaiah ಹಾಗೂ ಅವರ ಬಣದ ಪೊಲಿಟಿಕಲ್ ಟೂಲ್ ಕಿಟ್!. ಇದೊಂದು ವ್ಯವಸ್ಥಿತವಾದ ರಾಜಕೀಯ ಗುಪ್ತಮಾರ್ಗಸೂಚಿಯ ಭಾಗ, ಮೂಲ ಕಾಂಗ್ರೆಸಿಗರ ಸರ್ವನಾಶವೇ ಇದರ ಉದ್ದೇಶ.

ರಾಜಕೀಯ ಚದುರಂಗದಾಟದಲ್ಲಿ @siddaramaiah ನಿಸ್ಸೀಮರು. ಸಿದ್ದರಾಮೋತ್ಸವ ಏಕಾಏಕಿ ಆಯೋಜನೆಗೊಂಡಿದ್ದಲ್ಲ. ಯಾವ ದಾಳವನ್ನು ಯಾವಾಗ ಯಾರ ಮುಂದೆ ಉರುಳಿಸಬೇಕೆಂಬ ಅನುಭವ ಸಿದ್ದರಾಮಯ್ಯಗಿದೆ. ಸಿದ್ದರಾಮೋತ್ಸವದ ಮೂಲಕ ಮುಂದೆ ಡಿಕೆಶಿ, ಪರಮೇಶ್ವರ್‌ ಹಾಗೂ ಖರ್ಗೆ ಅವರನ್ನು ಮಕಾಡೆ ಮಲಗಿಸುವ ಉದ್ದೇಶವಿದೆಯೇ?.

ಕೆಪಿಸಿಸಿ ಕಚೇರಿಯಲ್ಲಿ ಪಿಸು ಮಾತು ಬಂದಾಗಲೇ @DKShivakumar ಎಚ್ಚೆತ್ತುಕೊಳ್ಳಬೇಕಿತ್ತು. ಸಿದ್ದರಾಮಯ್ಯ ಟೂಲ್ ಕಿಟ್ ಆಟ ಅದಾಗಲೇ ಶುರುವಾಗಿತ್ತು, ಅಮಾಯಕರ ತಲೆದಂಡವಾಯಿತಷ್ಟೇ. ಈಗ @siddaramaiah ಮತ್ತೊಂದು ಸುತ್ತಿನ ಟೂಲ್‌ಕಿಟ್‌ ಪ್ರಹಸನ ಆರಂಭಿಸಿದ್ದಾರೆ, ಈ ಬಾರಿ ದೊಡ್ಡ ಬೇಟೆಯಾಡುವುದು ಖಚಿತ! ಎಂದಿದೆ.

Share This Article
Leave a Comment

Leave a Reply

Your email address will not be published. Required fields are marked *