ಮೈಸೂರು ರಸ್ತೆಗೆ ಸಿದ್ದರಾಮಯ್ಯ ಹೆಸರು : ಕಾನೂನು ಹೋರಾಟ ಮಾಡ್ತೇವೆ ಅಂದ್ರು ರಾಜವಂಶಸ್ಥ ಯದುವೀರ್..!

ಮೈಸೂರು: ಇಲ್ಲಿನ ರಸ್ತೆಯೊಂದಕ್ಕೆ ಸಿಎಂ ಸಿದ್ದರಾಮಯ್ಯ ಅವರ ಹೆಸರಿಟ್ಟು ಮರುನಾಮಕರಣ ಮಾಡಬೇಕೆಂದು ಮೈಸೂರು ಮಹಾನಗರ ಪಾಲಿಕೆ ಆಲೋಚಿಸಿದೆ. ಆದರೆ ಇದಕ್ಕೆ ಹಲವರಿಂದ ಬಾರೀ ವಿರೋಧ ವ್ಯಕ್ತವಾಗುತ್ತಿದೆ. ಇದೀಗ ಮೈಸೂದು ರಾಜವಂಶಸ್ಥ ಹಾಗೂ ಮೈಸೂರು, ಕೊಡಗು ಸಂಸದರಾದ ಯದುವೀರ್ ಒಡೆಯರ್ ಅವರು ಕೂಡ ಈ ಬಗ್ಗೆ ವಿರೋಧ ವ್ಯಕ್ತಪಡಿಸಿದ್ದಾರೆ.

ಈ ಬಗ್ಗೆ ಮಾತನಾಡಿರುವ ಯದುವೀರ್ ಅವರು, ಹಿಂದಿನಿಂದಲೂ ರಾಜಮನೆತನದವರನ್ನ ಸರ್ಕಾರ ಸಾಕಷ್ಟು ಟಾರ್ಗೆಟ್ ಮಾಡಿದೆ. ಸಂಸದನಾದ ಮೇಲೆ ನಾನು ಕೂಡ ಹೆಚ್ಚು ಟಾರ್ಗೆಟ್ ಆಗಿದ್ದೇನೆ. ಹಲವು ವೈಯಕ್ತಿಕ ವಿಚಾರಗಳಿವೆ ಅವುಗಳನ್ನ ಹೇಳುವುದಕ್ಕೆ ಸಾಧ್ಯವಿಲ್ಲ. ಆದರೆ ನಾನು ಸಂಸದನಾದ ಮೇಲೆ ಹೆಚ್ಚು ಟಾರ್ಗೆಟ್ ಆಗಿದ್ದೇನೆ. ರಾಜಕಾರಣಕ್ಕೆ ಬಂದ ಮೇಲೆ ನನ್ನನ್ನ ಹೆಚ್ಚು ಟಾರ್ಗೆಟ್ ಮಾಡಲಾಗಿದೆ.

ಪ್ರಿನ್ಸೆಸ್ ರಸ್ತೆಗೆ ರಾಜಕುಮಾರಿಯ ಸ್ಮರಣಾರ್ಥ ಹೆಸರನ್ನು ಇಡಲಾಗಿದೆ. ಈ ರಸ್ತೆಯ ಹೆಸರು ಬದಲಾವಣೆಗೆ ನಮ್ಮ‌ ವಿರೋಧವಿದೆ. ಯಾವುದೇ ಕಾರಣಕ್ಕೂ ರಸ್ತೆಯ ಹೆಸರು ಬದಲಾಗಬಾರದು. ಈ ಕುರಿತು ನಾವೂ ಕಾನೂನು ಹೋರಾಟ ಮಾಡುತ್ತೇವೆ. ಚಾಮುಂಡಿ ಬೆಟ್ಟ, ಕುರುಬಾರಹಳ್ಳಿ ವಿಚಾರಗಳಲ್ಲಿಯೂ ನಾವೂ ಟಾರ್ಗೆಟ್ ಆಗಿದ್ದೇವೆ ಎಂದಿದ್ದಾರೆ.

ಇದೇ ವೇಳೆ ಅವರದ್ದೇ ಪಕ್ಷದ, ಮೈಸೂರು ಮಾಜಿ ಸಂಸದರಾದ ಪ್ರತಾಪ್ ಸಿಂಹ ಅವರು ಸಿದ್ದರಾಮಯ್ಯ ಅವರ ಹೆಸರಿಡುವುದರಲ್ಲಿ ತಪ್ಪೇನು ಇಲ್ಲ. ಇದನ್ನ ವಿರೋಧಿಸಿ ಸಣ್ಣತನ ತೋರುವುದು ಬೇಡ ಎಂದಿದ್ದರು. ಅವರ ಮಾತಿಗೆ ಪ್ರತಿಕ್ರಿಯೆ ನೀಡಿದ್ದು, ಪ್ರತಾಪ್ ಸಿಂಹ ಪ್ರಾಯಶಃ ಇತಿಹಾಸ ಮರೆತಿದ್ದಾರೆ ಎನಿಸುತ್ತದೆ. ನಾನು ಹೇಳಿದ ಮೇಲೆ ಮತ್ತೆ ನೆನಪಾಗಬಹುದು. ರಸ್ತೆಗೆ ಸಿದ್ದರಾಮಯ್ಯ ಅವರ ಹೆಸರಿಡಲು ನನ್ನದು ವಿರೋಧವಿಲ್ಲ. ಆದರೆ ಪ್ರಿನ್ಸೆಸ್ ರಸ್ತೆಗೆ ಸಿದ್ದರಾಮಯ್ಯ ಅವರ ಹೆಸರು ಬೇಡ ಎಂದಿದ್ದಾರೆ.

Leave a Reply

Your email address will not be published. Required fields are marked *

error: Content is protected !!