ಹಾವೇರಿ: ರಷ್ಯಾ ಉಕ್ರೇನ್ ನಡುವೆ ಯುದ್ಧ ನಡೆಯುತ್ತಿದ್ದು, ಈ ಯುದ್ಧದಲ್ಲಿ ರಷ್ಯಾದ ಶೆಲ್ ದಾಳಿಯಲ್ಲಿ ಕನ್ನಡಿಗ ನವೀನ್ ಮೃತಪಟ್ಟಿದ್ದಾರೆ. ಆದ್ರೆ ನವೀನ್ ಮೃತದೇಹ ತರಲು ಸಾಧ್ಯವಾಗುತ್ತಿಲ್ಲ.

ಇದೀಗ ಮಾಜಿ ಸಿಎಂ ಸಿದ್ದರಾಮಯ್ಯ ಮೃತ ನವೀನ್ ಅವರ ನಿವಾಸಕ್ಕೆ ಭೇಟಿ ನೀಡಿದ್ದಾರೆ. ಜಿಲ್ಲೆಯ ರಾಣೆಬೆನ್ನೂರು ತಾಲೂಕಿನ ಚಳಗೇರಿ ಗ್ರಾಮದ ನವೀನ್ ನಿವಾಸಕ್ಕೆ ಭೇಟಿ ನೀಡಿದ್ದಾರೆ. ಬಳಿಕ ಕುಟುಂಬಸ್ಥರಿಗೆ ಸಾಂತ್ವನ ಹೇಳಿದ್ದಾರೆ.

ಈ ವೇಳೆ ಮಾಧ್ಯಮದವರೊಂದಿಗೆ ಮಾತನಾಡಿದ ಸಿದ್ದರಾಮಯ್ಯ ಅವರು, ನವೀನ್ ಬಗ್ಗೆ ತಂದೆ ತಾಯಿ ದೊಡ್ಡ ಆಸೆ ಇಟ್ಟುಕೊಂಡಿದ್ದರು. ಮೆಡಿಕಲ್ ಓದಲೆಂದು ಆತ ಅಲ್ಲಿಗೆ ಹೋಗಿದ್ದ. ದುರಾದೃಷ್ಟವಶಾತ್ ಓದು ಮುಗಿಸಲು ಆಗದೆ, ರಷ್ಯಾ ದಾಳಿಯಲ್ಲಿ ನವೀನ್ ಮೃತಪಟ್ಟಿದ್ದಾರೆ. ಇನ್ನು ಬಾಳಿ ಬದುಕಬೇಕಾಗಿದ್ದವ ನವೀನ್.
ನವೀನದ ಮೃತದೇಹ ಇನ್ನು ಅಲ್ಲಿಯೇ ಇದೆ. ಮೃತ ದೇಹ ತರುವ ಪ್ರಯತ್ನ ನಡೆಯುತ್ತಿದೆ. ಭಾರತ ಸರ್ಕಾರ ಆದಷ್ಟು ಬೇಗ ಆ ಪ್ರಯತ್ನ ಮಾಡಬೇಕು. ಮೃತದೇಹ ತರಲು ಪ್ರಧಾನಮಂತ್ರಿಯವರಿಗೆ ನಾನು ಕೂಡ ಪತ್ರ ಬರೆಯುವೆ. ಕೋಳಿವಾಡರ ಪುತ್ರ ಅನುಮತಿ ಕೊಟ್ಟರೆ ತಮ್ಮ ವಿಮಾನದಲ್ಲಿ ಮೃತದೇಹ ತರಲು ಕೇಂದ್ರಕ್ಕೆ ಪತ್ರ ಬರೆದಿದ್ದರು ಎಂದಿದ್ದಾರೆ.

