ಬೆಂಗಳೂರು: ಮಾಜಿ ಸಿಎಂ ಸಿದ್ದರಾಮಯ್ಯಗೆ ಗೆಲ್ಲುವ ಕ್ಷೇತ್ರದ ಬಗ್ಗೆ ಚಿಂತೆಯಾಗಿದೆ ಎಂಬುದು ಆಪ್ತ ಮೂಲಗಳಿಂದ ಸಿಕ್ಕ ಮಾಹಿತಿಯಾಗಿದೆ. ನಲವತ್ತು ವರ್ಷಗಳ ಸುಧೀರ್ಘ ರಾಜಕೀಯ ಮಾಡಿದ್ರು, ಗೆಲ್ಲುವ ಕ್ಷೇತ್ರ ಕಟ್ಟುವಲ್ಲಿ ಸಿದ್ದರಾಮಯ್ಯ ವಿಫಲವಾದರಾ ಎಂಬ ಪ್ರಶ್ನೆ ಮೂಡುತ್ತಿದೆ.
ವರುಣಾ ಕ್ಷೇತ್ರವನ್ನು ಮಗನಿಗೆ ಬಿಟ್ಟು ಕೊಟ್ಟ ಬಳಿಕ ಸಿದ್ದರಾಮಯ್ಯಗೆ ಕ್ಷೇತ್ರದ ಕೊರತೆ ಎದುರಾಗಿದೆ. ಚಾಮುಂಡೇಶ್ವರಿಯಲ್ಲಿ ಜಿಟಿ ದೇವೇಗೌಡರ ವಿರುದ್ಧ ಬಾರಿ ಅಂತರದಿಂದ ಸೋತಿದ್ದರು ಸಿದ್ದರಾಮಯ್ಯ. ಬಾದಾಮಿಯಲ್ಲಿ ರಾಮುಲು ವಿರುದ್ಧವೂ ಬೆರಳೆಣಿಕೆಯಷ್ಟು ಮತಗಳಿಂದ ಗೆದ್ದಿದ್ದರು ಸಿದ್ದರಾಮಯ್ಯ.
ಆದರೆ ಇದೀಗ 2023ಕ್ಕೆ ಕ್ಷೇತ್ರ ಸಂಕಷ್ಟ ಎದುರಾಗಿದೆ. ಈ ಮಧ್ಯೆ ನಾಲ್ಕೈದು ಕಡೆ ಸಿದ್ದರಾಮಯ್ಯಗೆ ಅಹ್ವಾನವಿದ್ದರು, ಗೆಲ್ಲುವ ಕ್ಷೇತ್ರದ ಹುಡುಕಾಟದಲ್ಲಿದ್ದಾರೆ ಸಿದ್ದರಾಮಯ್ಯ. ತಮ್ಮ ಸಮುದಾಯ ಪ್ರಬಲವಾಗಿ ಇರುವ ಕಡೆ ಸ್ಪರ್ಧೆ ಮಾಡಲು ಸಿದ್ದರಾಮಯ್ಯ ಯೋಚಿಸುತ್ತಿದ್ದಾರೆ ಎನ್ನಲಾಗಿದೆ. ಕೋಲಾರದಲ್ಲಿ ಮುಸ್ಲಿಂ, ಕುರುಬ ಸಮುದಾಯದ ಮತಗಳು ಹೆಚ್ಚು ಇರೋದರಿಂದ ಅಲ್ಲಿ ಸ್ಪರ್ಧೆ ಮಾಡುವ ಬಗ್ಗೆ ಚಿಂತನೆ ಇದೆ.
ಹೀಗಾಗಿ ಕೃತಕ ಡಿಮ್ಯಾಂಡ್ ಹುಟ್ಟಿಸಿಕೊಳ್ಳುತ್ತಿದ್ದಾರೆ ಸಿದ್ದರಾಮಯ್ಯ ಎನ್ನಲಾಗಿದೆ. ಪ್ರತಿ ದಿನ ಕೋಲಾರ ನಿಯೋಗ ಸಿದ್ದರಾಮಯ್ಯ ಮನೆಗೆ ಭೇಟಿ ಮತ್ತು ಚರ್ಚೆ ನಡೆಸುತ್ತಿದ್ದಾರೆ. ಇಲ್ಲಿಯವರೆಗೂ ಆರು ನಿಯೋಗಗಳು ಸಿದ್ದರಾಮಯ್ಯ ಭೇಟಿ ಮಾಡಿ ಮಾತುಕತೆ ನಡೆಸಿವೆ. ಸ್ವತಃ ಕೋಲಾರ ಜನ ನನ್ನ ಸ್ಪರ್ಧೆ ಗೆ ಒತ್ತಡ ಮಾಡುತ್ತಿದ್ದಾರೆ ಅಂತ ಹೇಳುತ್ತಿರುವ ಸಿದ್ದರಾಮಯ್ಯ. ಇದೇ ವಾತಾವರಣ ಸೃಷ್ಟಿ ಮಾಡಿ ಕೊನೆಗೆ ಕೋಲಾರದಲ್ಲಿ ಸ್ಪರ್ಧೆ ಮಾಡುವ ತೀರ್ಮಾನ ಮಾಡುವ ಸಾಧ್ಯತೆಯೂ ಇದೆ ಎಂದು ರಾಜಕೀಯ ವಲಯದಲ್ಲಿ ಚರ್ಚೆಯಾಗುತ್ತಿದೆ.