ಚಿತ್ರದುರ್ಗ, (ಜ.06): ಮೇಕೆದಾಟು ಯೋಜನೆಗೆ ಆಗ್ರಹಿಸಿ ಜನವರಿ 9 ರಂದು ಕಾಂಗ್ರೆಸ್ ನಾಯಕರು ಪಾದಯಾತ್ರೆ ಹಮ್ಮಿಕೊಂಡಿದ್ದಾರೆ. ಈ ಪಾದಯಾತ್ರೆಯಲ್ಲಿ ಸಾಕಷ್ಟು ಜನ ಸೇರುವ ಸಾಧ್ಯತೆ ಇತ್ತು. ಆದ್ರೀಗ ಕೊರೋನಾ ರೂಲ್ಸ್ ನಿಂದ ಎಲ್ಲಾ ಉಲ್ಟಾ ಆಗಿದೆ. ಮೇಕೆದಾಟು ಪಾದಯಾತ್ರೆ ಬಗ್ಗೆ ಕೋಡಿಹಳ್ಳಿ ಚಂದ್ರಶೇಖರ್ ಟೀಕೆ ಮಾಡಿದ್ದರು. ಇದಕ್ಕೆ ಸಿದ್ದರಾಮಯ್ಯ ತಿರುಗೇಟು ಕೊಟ್ಟಿದ್ದಾರೆ.
ಜಿಲ್ಲೆಯಲ್ಲಿ ಮಾತನಾಡಿದ ಅವರು, ಕೋಡಿಹಳ್ಳಿ ಚಂದ್ರಶೇಖರ್ ಯಾರು ಅವರು..? ಕೋಡಿಹಳ್ಳಿ ಚಂದ್ರಶೇಖರ್ ರೈತ ಮುಖಂಡರಾ ಎಂದು ಪ್ರಶ್ನಿಸಿದ್ದಾರೆ. ಇನ್ನು ನಮ್ಮದು ರಾಜಕೀಯ ಅಜೆಂಡಾ ಅಲ್ಲ, ನಮ್ಮದು ರಾಜಕೀಯ ಪಕ್ಷ, ರಾಜಕೀಯಕ್ಕಾಗಿ ನಾವು ಪಾದಯಾತ್ರೆ ಮಾಡುತ್ತಿಲ್ಲ ಎಂದಿದ್ದಾರೆ.
ಮೇಕೆದಾಟು ಯೋಜನೆಗಾಗಿ ನಮ್ಮ ಸರ್ಕಾರದ ಅವಧಿಯಲ್ಲಿ ಡಿಪಿಆರ್ ತಯಾರಿಸಿದ್ದೆವು. ಬಿಜೆಪಿ ಅಧಿಕಾರಕ್ಕೆ ಬಂದು 2.5 ವರ್ಷ ಆಯ್ತು, ಆದ್ರೆ ಇನ್ನು ಮಲಗಿದ್ದೀರಲ್ವ . ಮೇಕೆದಾಟು ಯೋಜನೆ ಕಾರ್ಯಗತ ಮಾಡಲು ಯಾವುದೇ ಕಾನೂನು ಅಡೆತಡೆ ಇಲ್ಲ. ತಮಿಳುನಾಡಿನ ಕ್ಯಾತೆಗಾಗಿ ನೀವು ಮಾಡುತ್ತಿಲ್ಲ. ಬದಲಿಗೆ ತಮಿಳುನಾಡು ಬಿಜೆಪಿ ರಾಜ್ಯಾಧ್ಯಕ್ಷ ಅಣ್ಣಾಮಲೈ ಅವರಿಗೆ ಕುಮ್ಮಕ್ಕು ನೀಡುತ್ತಿದ್ದಿರಿ. ತಮಿಳುನಾಡಿನಲ್ಲಿ ನಿಮ್ಮ ಪಕ್ಷ ವಿಸ್ತರಣೆಗೆ ಮೇಕೆದಾಟು ಯೋಜನೆ ಮಾಡುತ್ತಿಲ್ಲ. ಹೀಗಾಗಿ ನಮ್ಮ ಪಾದಯಾತ್ರೆ ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು.
ಸಿದ್ದರಾಮಯ್ಯ ನಾಡಿನ ಆಸ್ತಿ ಎಂಬ ಸಚಿವ ಈಶ್ವರಪ್ಪ ಹೇಳಿಕೆ ವಿಚಾರದಲ್ಲಿ ಮಾತನಾಡಿದ ಸಿದ್ದು
ನಾವು ಕೊವೀಡ್ ಮುಂಜಾಗ್ರತಾ ಕ್ರಮವಹಿಸುತ್ತೇವೆ. ನಮ್ಮಿಂದ ನಿಮಗೂ, ನಿಮ್ಮಿಂದ ನಮಗೂ ಕೊವೀಡ್ ಬರದೇ ಇರಲಿ ಎಂದು ಮಾಸ್ಕ್ ಹಾಕಿದ್ದೇವೆ ಸಚಿವ ಈಶ್ವರಪ್ಪಗೆ ಟಾಂಗ್ ನೀಡಿದರು.
ಕೋವಿಡ್ ನೆಪ ಹೇಳಿಕೊಂಡು 144 ಸೆಕ್ಷನ್ ಹಾಕಿ ಜನರನ್ನ ಪಾದಯಾತ್ರೆಗೆ ಬರದಂತೆ ಮಾಡಿದರೆ ನಾನು ಹಾಗೂ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಇಬ್ಬರೇ ಪಾದಯಾತ್ರೆಯಲ್ಲಿ ನಡೆಯುತ್ತೇವೆ ಎಂದು ತಿಳಿಸಿದರು.