ಮೈಸೂರು: ಮಹಾರಾಷ್ಟ್ರದಲ್ಲಿ ರಾಜಕೀಯ ಬಿಕ್ಕಟ್ಟು ಎದುರಾಗಿದೆ. ಉದ್ಧವ್ ಠಾಕ್ರೆ ಸರ್ಕಾರ ಬೀಳಿಸಲು ಎಲ್ಲಾ ತಯಾರಿಯೂ ನಡೆದಿದೆ. ಈ ಸಂಬಂಧ ಮೈಸೂರಿನಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಆಕ್ರೋಶ ಹೊರ ಹಾಕಿದ್ದಾರೆ. ಕಳೆದ ಸಲ ಮಹಾರಾಷ್ಟ್ರದಲ್ಲಿ ಬಿಜೆಪಿಗೆ ಅಧಿಕಾರ ಕೊಟ್ಟಿದ್ದರಾ. 144 ಬರಬೇಕಿತ್ತು. ಆದರೆ ಅವರು ಗೆದ್ದಿದ್ದು 104. ಅದನ್ನ ಇಟ್ಟುಕೊಂಡು ಅಧಿಕಾರ ಹಿಡಿಯೋದಕ್ಕೆ ಪ್ರಜಾ ಪ್ರಭುತ್ವದಲ್ಲಿ ಅವಕಾಶವಿಲ್ಲ ಎಂದಿದ್ದಾರೆ.
40 ಜನ ದುಡ್ಡು ಕೊಟ್ಟು ಕೊಂಡುಕೊಳ್ಳುತ್ತೀವಿ ಅಂದ್ರೆ ಈ ದುಡ್ಡು ಎಲ್ಲಿಂದ ಬಂದಿರುತ್ತೆ. 25 ಕೋಟಿ, 30 ಕೋಟಿ ಹಿಂಗೆ ಕೊಡ್ತಾ ಇದ್ದಾರೆ. ಎಲ್ಲಿಂದ ಬಂದಿರುತ್ತೆ ಈ ದುಡ್ಡು. ಭ್ರಷ್ಟಾಚಾರದ ಹಣವಲ್ಲವಾ ಇದು. ಭ್ರಷ್ಟಾಚಾರ ಮಾಡದೆ ಹಣ ಎಲ್ಲಿಂದ ಬರುತ್ತೆ. ಬಿಜೆಪಿ ಸರ್ಕಾರದಲ್ಲಿ ಭ್ರಷ್ಟಚಾರವೂ ಮುಗಿಲು ಮುಟ್ಡಿದೆ. ಜನ ವೋಟು ಕೊಟ್ಟಿರುವುದು ಬಿಜೆಪಿ ವಿರುದ್ಧವಾಗಿ ಕೊಟ್ಟಿದೆ. ಸಮ್ಮಿಶ್ರ ಸರ್ಕಾರ ರಚನೆಯಾಗಿದೆ. ಐದು ವರ್ಷ ಮಾಡುವುದಕ್ಕೆ ಬಿಡಬೇಕು. ಇಲ್ಲದೆ ಹೋದರೆ ಜನ ಕೊಟ್ಟಿರುವ ತೀರ್ಮಾನಕ್ಕೆ ವಿರುದ್ಧವಾಗಿ ನಡೆದುಕೊಂಡರೆ ಮುಂದಿನ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸುತ್ತಾರೆ.
ಶಿವಸೇನೆ ಪ್ರಶ್ನೆ ಅಲ್ಲ. ಕಾಂಗ್ರೆಸ್ ಮತ್ತು ಸಮ್ಮಿಶ್ರ ಸರ್ಕಾರ ಸೇರಿ ಸರ್ಕಾರ ನಡೆಸುತ್ತಾ ಇತ್ತು. ಶಿವಸೇನ ಮುಖ್ಯಮಂತ್ರಿಯಾಗಿದೆ ಅಷ್ಟೇ. ಅಲ್ಲಿ ಮೂರು ಪಾರ್ಟಿ ಸೇರಿ ಮಾಡಿರುವ ಸರ್ಕಾರ. ಅವರಿಗೆ ಸರ್ಕಾರ ನಡೆಸಲು ಬಿಡಬೇಕು. ಕರ್ನಾಟಕದಲ್ಲೂ ಅದೇ ಮಾಡಿದ್ದು, ಈಗ ಮಹಾರಾಷ್ಟ್ರದಲ್ಲೂ ಅದನ್ನೇ ಮಾಡಲೂ ಹೊರಟಿದೆ ಎಂದು ಆಕ್ರೋಶ ಹೊರ ಹಾಕಿದ್ದಾರೆ.