ಮೈಸೂರು: ಬಿಟ್ ಕಾಯಿನ್ ಬಗ್ಗೆ ಕಾಂಗ್ರೆಸ್ ನವರಿಗೆ ಸಂಪೂರ್ಣ ಮಾಹಿತಿ ಇದೆ. ಇಡಿ ಅಧಿಕಾರಿಗಳು ಮೊದಲು ಸಿದ್ದರಾಮಯ್ಯ ಅವರಿಗೆ ನೋಟೀಸ್ ನೀಡಬೇಕು ಎಂದು ಸಂಸದ ಪ್ರತಾಪ್ ಸಿಂಹ ಕಿಡಿಕಾರಿದ್ದಾರೆ.
ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಬಿಟ್ ಕಾಯಿನ್ ಬಗ್ಗೆ ಮೊದಲು ಟ್ವೀಟ್ ಮಾಡಿದ್ದೇ ಸಿದ್ದರಾಮಯ್ಯ. ಹೀಗಾಗಿ ಅವರಿಗೆ ನೋಟೀಸ್ ನೀಡಬೇಕು. ಸಿದ್ದರಾಮಯ್ಯ ಅವರಾದ ಬಳಿಕ ಪ್ರಿಯಾಂಕ ಖರ್ಗೆ, ಸುರ್ಜೆವಾಲ್ ಮಾತನಾಡಿದ್ದಾರೆ. ಅವರಿಗೆ ಈ ಬಗ್ಗೆ ಸಂಪೂರ್ಣ ಮಾಹಿತಿ ಇದೆ. ಎಲ್ಲರಿಗೂ ನೋಟೀಸ್ ನೀಡಿ ವಿಚಾರಣೆ ನಡೆಸಲಿ ಎಂದಿದ್ದಾರೆ.
ಮಾಜಿ ಸಿಎಂ ಕುಮಾರಸ್ವಾಮಿ ಅವರಿಗೂ ನೋಟೀಸ್ ನೀಡಬೇಕು. ಜನ್ ಧನ್ ಹಣ ಕದ್ದ ಬಗ್ಗೆ ಅವರು ಹೇಳಿಕೆ ನೀಡಿದ್ಸಾರೆ. ಅವರಿಗುಹ ನೋಟೀಸ್ ನೀಡಲಿ. ಸಾಮಾನ್ಯ ಪ್ರಕರಣದಲ್ಲಿ ನಡೆದಂತೆ ಈ ಪ್ರಕರಣದಲ್ಲೂ ತನಿಖೆ ನಡೆಯಬೇಕು. ನೋಟೀಸ್ ನೀಡಿದ ಮೇಲೆ ಎಲ್ಲಾ ನಾಯಕರು ತನಿಖೆಗೆ ಸಹಕಾರ ನೀಡಬೇಕು ಎಂದು ಒತ್ತಾಯಿಸಿದ್ದಾರೆ.