ರಾಜಣ್ಣ ಮನೆಗೆ ಸಿದ್ದರಾಮಯ್ಯ ಭೇಟಿ : ನಾಟಿ ಕೋಳಿ ತಿಂದು ಹೇಳಿದ್ದೇನು..?

1 Min Read

ತುಮಕೂರು: ಸಿಎಂ ಸಿದ್ದರಾಮಯ್ಯ ಅವರು ಮಾಜಿ ಸಚಿವ ರಾಜಣ್ಣ ಅವರ ಮನೆಗೆ ಹೋಗಿ ತನ್ನಿಷ್ಟದ ಊಟವನ್ನು ಸವಿದು ಬಂದಿದ್ದಾರೆ. ಇದು ರಾಜಕೀಯ ವಲಯದಲ್ಲಿ ಕುತೂಹಲಕ್ಕೆ ಕಾರಣವಾಗಿದೆ. ತುಮಕೂರಿನಲ್ಲಿ ಇಂದು ನಡೆದ ಕರ್ನಾಟಕ ಕ್ರೀಡಾಕೂಟ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಕಾರ್ಯಕ್ರಮ ಉದ್ಘಾಟಿಸಿದ ಬಳಿಕ ಕೆ.ಎನ್.ರಾಜಣ್ಣ ಮನೆಗೆ ಭೇಟಿ ನೀಡಿ, ಊಟ ಸವಿದಿದ್ದಾರೆ. ಈ ಸಂಬಂಧ ಸಿದ್ದರಾಮಯ್ಯ ಅವರು ಪ್ರತಿಕ್ರಿಯೆ ನೀಡಿದ್ದಾರೆ.

ಕೆ.ಎನ್.ರಾಜಣ್ಣ ನಿವಾಸದಲ್ಲಿ ಮಾಡಿಸಿದ್ದ ಊಟ ತುಂಬಾ ಚೆನ್ನಾಗಿತ್ತು. ಕಾಲ್ ಸೂಪ್ ಮಾಡಿದ್ರು. ನಾಟಿ ಕೋಳಿ ತಂದು ಅಡುಗೆ ಮಾಡಿಸಿದ್ದರು. ನನಗೆ ಹುಷಾರಿರಲಿಲ್ಲ. ನಾಲಿಗೆ ಕೆಟ್ಟಿತ್ತು. ಹೀಗಾಗಿ ಊಟ ಚೆನ್ನಾಗಿತ್ತು ತಿಂದೆ ಎಂದು ಸಿಎಂ ಸಿದ್ದರಾಮಯ್ಯ ಅವರು ರಾಜಣ್ಣ ಭೇಟಿ ಬಗ್ಗೆ ಮಾಹಿತಿ ನೀಡಿದರು. ಅಷ್ಟೇ ಅಲ್ಲ ರಾಜಣ್ಣ ಅವರು ಕೂಡ ಸಿದ್ದರಾಮಯ್ಯ ಅವರಿಗೋಸ್ಕರ ನಾಟಿ ಕೋಳಿ ಸಾರು, ಕಾಲ್ ಸೂಪು, ಮುದ್ದೆ ಮಾಡಿದ್ದರು. ಹೀಗಾಗಿ ಸಿಎಂ ಸಿದ್ದರಾಮಯ್ಯ ಅವರು ಕೂಡ ಪ್ರೀತಿಯಿಂದ ಸವಿದರು.

ಶಾಸಕ ರಾಜಣ್ಣ ಅವರು ಸಿದ್ದರಾಮಯ್ಯ ಅವರ ಸಂಪುಟದಲ್ಲಿ ಸಹಕಾರಿ ಸಚಿವರಾಗಿದ್ದರು. ಆದರೆ ಅವರದ್ದೇ ಪಕ್ಷದಲ್ಲಿ, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ವೋಟ್ ಚೋರಿ ಬಗ್ಗೆ ಆರೋಪ ಮಾಡಿದ್ದರು. ನಮ್ಮ ಪಕ್ಷದಿಂದಾನೂ ತಪ್ಪಾಗಿದೆ ಎಂದೇ ರಾಜಣ್ಣ ಅವರು ಆಡಿದ್ದ ಮಾತು, ಹೈಕಮಾಂಡ್ ನಾಯಕರ ಆಕ್ರೋಶಕ್ಕೆ ಕಾರಣವಾಗಿತ್ತು. ಬಳಿಕ ತಮ್ಮ ಸಚಿವ ಸ್ಥಾನವನ್ನು ಕಳೆದುಕೊಂಡರು. ಸಿಎಂ ಸಿದ್ದರಾಮಯ್ಯ ಅವರು ಕೂಡ ತಮ್ಮ ಸಂಪುಟದಲ್ಲಿಯೇ ಉಳಿಸಿಕೊಳ್ಳಲು ಸಾಕಷ್ಟು ಶ್ರಮಪಟ್ಟರು. ಆದರೂ ಅದು ಸಾಧ್ಯವಾಗಲಿಲ್ಲ.

Share This Article