ಜ.9ಕ್ಕೆ ಮತ್ತೆ ಕೋಲಾರಕ್ಕೆ ಸಿದ್ದರಾಮಯ್ಯ ಭೇಟಿ : ವರ್ತೂರು ಪ್ರಕಾಶ್ ಗೆ ಸೆಡ್ಡು

suddionenews
1 Min Read

ಕೋಲಾರ: ಸಿದ್ದರಾಮಯ್ಯ ಅವರು ಯಾವ ಕ್ಷೇತ್ರದಲ್ಲಿ ಸ್ಪರ್ಧೆ ಮಾಡುತ್ತಾರೆ ಎಂಬ ವಿಚಾರ ಇನ್ನು ಕಗ್ಗಂಟಾಗಿಯೇ ಉಳಿದಿದೆ. ಆದರೆ ಕೋಲಾರದಲ್ಲಿ ನಿಲ್ಲಬಹುದು ಎಂಬ ಲೆಕ್ಕಾಚಾರ ಜೋರಾಗಿದೆ. ಕೋಲಾರದಲ್ಲಿ ನಿಲ್ತಾರೋ ಇಲ್ವೋ ಪಕ್ಕಾ ಮಾಹಿತಿ ಇಲ್ಲ. ಆದರೆ ಹವಾ ಅಂತು ಶುರುವಾಗಿದೆ. ಯಾಕಂದ್ರೆ ನವೆಂಬರ್ 13ರಂದು ಸಿದ್ದರಾಮಯ್ಯ ಅವರು ಅದ್ಯಾವಾಗ ಕೋಲಾರಕ್ಕೆ ಭೇಟಿ ನೀಡಿದರೋ, ಜನ ಸಾಗರವೇ ಹರಿದು ಬಂದಿತ್ತು. ಆ ಜನಸಾಗರ ನೋಡಿ ಇದೀಗ ಸಿದ್ದರಾಮಯ್ಯ ಅವರು ಮತ್ತೆ ಕೋಲಾರಕ್ಕೆ ಭೇಟಿ ನೀಡುವ ಮನಸ್ಸು ಮಾಡಿದ್ದಾರೆ.

ಜನವರಿ 9 ರಂದು ಸಿದ್ದರಾಮಯ್ಯ ಅವರು ಕೋಲಾರಕ್ಕೆ ಭೇಟಿ ನೀಡಲಿದ್ದಾರೆ. ನಗರದ ಬಾಸ್ಕೆಟ್ ಬಾಲ್ ಕ್ರೀಡಾಂಗಣದಲ್ಲಿ ತಮ್ಮ ಶಕ್ತಿ ಪ್ರದರ್ಶನ ಮಾಡಲಿದ್ದಾರೆ. ಈ ಸಭೆಯಲ್ಲಿ ಹತ್ತು ಸಾವಿರಕ್ಕೂ ಹೆಚ್ಚು ಕಾರ್ಯಕರ್ತರು ಭಾಗವಹಿಸುವ ನಿರೀಕ್ಷೆ ಇದೆ. ಕೋಲಾರ ವಿಧಾನಸಭಾ ಕ್ಷೇತ್ರದ 23 ಪಂಚಾಯತ್ ಕಾಂಗ್ರೆಸ್ ಮುಖಂಡರು ಕೂಡ ಕಾರ್ಯಕ್ರಮದಲ್ಲಿ ಇರಲಿದ್ದಾರೆ.

ಇದೇ ಪ್ರವಾಸದ ಸಮಯದಲ್ಲಿ ಸಿದ್ದರಾಮಯ್ಯ ಅವರು ಕೋಲಾರದಲ್ಲಿ ನಿಲ್ಲಲಿದ್ದಾರಾ ಎಂಬ ಪ್ರಶ್ನೆಗೆ ಉತ್ತರವೂ ಸಿಗಲಿದೆ. ಇತ್ತಿಚೆಗಷ್ಟೇ ವರ್ತೂರು ಪ್ರಕಾಶ್ ಸವಾಲೊಂದನ್ನು ಹಾಕಿದ್ದರು. ಐದು ಸಾವಿರ ಜನರನ್ನು ಸೇರಿಸಲು ಇಲ್ಲಿನ ನಾಯಕರಿಂದ ಆಗುವುದಿಲ್ಲ ಎಂದು ಲೇವಡಿ ಮಾಡಿದ್ದರು. ಇದೊಇಗ ಆ ಸವಾಲಿಗೆ ಸೆಡ್ಡು ಹೊಡೆಯಲು ಸಿದ್ದರಾಮಯ್ಯ ಟೀಂ ರೆಡಿಯಾಗಿದೆ. ಬೃಹತ್ ವೇದಿಕೆ ಸಿದ್ಧತೆ ಮಾಡಿದ್ದು, ವೇದಿಕೆ ಮೂಲಕವೇ ಉತ್ತರ ಕೊಡಲು ರೆಡಿಯಾಗಿದೆ.

Share This Article
Leave a Comment

Leave a Reply

Your email address will not be published. Required fields are marked *