ಬೆಂಗಳೂರು: ಪಿಎಸ್ಐ ವಿಚಾರದಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಗೃಹ ಸಚಿವ ಆರಗ ಜ್ಞಾನೇಂದ್ರ ಅವರ ವಿರುದ್ಧ ಕಿಡಿಕಾರಿದ್ದಾರೆ. ಈಗ ತನಿಖೆ ನಡೆಯುತ್ತಿದೆ. 28-29 ಜನ ಅರೆಸ್ಟ್ ಆಗಿದ್ದಾರೆ. ನೇಮಕಾತಿ ರದ್ದು ಮಾಡಿ, ಮರುಪರೀಕ್ಷೆಗೆ ಆದೇಶ ನೀಡಿದ್ದಾರೆ. ನೀವೂ ಮಂತ್ರಿಯಾಗಿ ಮುಂದುವರೆಯುವುದಕ್ಕೆ ಲಾಯಕ್ಕಾ ಎಂದು ಪ್ರಶ್ನಿಸಿದ್ದಾರೆ.
ನನ್ನ ಪ್ರಕಾರ ಕೂಡಲೇ ಅವರನ್ನು ವಜಾ ಮಾಡಬೇಕು. ಅಮಿತ್ ಶಾ ಬಂದು ಹೋಗುವುದಲ್ಲ. ಅವರು ದೆಹಲಿ ಹೋಂ ಮಿನಿಸ್ಟರ್ ಬೇರೆ. ಅವರಿಗೆ ಬೇಕಾದಷ್ಟು ಮಾಹಿತಿ ಇರುತ್ತೆ. ಅವರು ಬಂದು ಬೆನ್ನು ತಟ್ಟಿ ಹೋಗಿ, ಸರ್ಕಾರ ಚೆನ್ನಾಗಿ ನಡೆಯುತ್ತಾ ಇದೆ ಅಂತ ಹೇಳಿ ಹೋದ್ರೆ ಏನು ಇದರ ಅರ್ಥ ಎಂದು ಪ್ರಶ್ನಿಸಿದ್ದಾರೆ.
ಇಬ್ಬರು ಪೊಲೀಸ್ ಆಫೀಸರ್ ಗಳನ್ನು ಟ್ರಾನ್ಸ್ ಫರ್ ಮಾಡಿದ್ದಾರೆ. ಈ ಅಕ್ರಮಕ್ಕೆ ಹೊಣೆಗಾರರು ಅಂತ ಹೇಳಿ, ಅವರನ್ನು ಅಮನತು ಮಾಡಬೇಕು. ಇನ್ನು ಯಾರ್ಯಾರು ಅಧಿಕಾರಿಗಳಿದ್ದಾರೆ ಅವರ ಮೇಲೆ ಕ್ರಮ ತೆಗೆದುಕೊಳ್ಳಬೇಕು. ಇದೆಲ್ಲವನ್ನು ಅಧಿಕಾರಗಳ ಬೆಂಬಲ, ರಾಜಕಾರಣಿಗಳ ಬೆಂಬಲವಿಲ್ಲದೆ ಮಾಡಲು ಆಗುವುದಿಲ್ಲ. ಮಂತ್ರಿಗಳ ಕುಮ್ಮಕ್ಕಿಲ್ಲದೆ ಮಾಡಲು ಆಗುವುದಿಲ್ಲ. ಈ ಎಲ್ಲರ ಮೇಲೆ ಕ್ರಮ ತೆಗೆದುಕೊಳ್ಳಬೇಕು. ಈ ಸರ್ಕಾರದ್ದು ಇದು ಒಂದೇ ಹಗರಣವಲ್ಲ. ಒಂದಾದ ಮೇಲೆ ಒಂದರಂತೆ ಬರುತ್ತಲೆ ಇದೆ ಎಂದಿದ್ದಾರೆ.