ಬೆಂಗಳೂರು: ಇತ್ತೀಚೆಗೆ ನಾದಬ್ರಹ್ಮ ಹಂಸಲೇಖ ಅವರು ಪೇಜಾವರ ಶ್ರೀಗಳ ಬಗ್ಗೆ ನೀಡಿದ್ದ ಹೇಳಿಕೆ ಸಾಕಷ್ಟು ವಿವಾದಕ್ಕೆ ಸಿಲುಕಿತ್ತು. ಸದ್ಯ ರಕ್ತ ತಿಂತಾರಾ ಅನ್ನೋ ಹೇಳಿಕೆ ತಣ್ಣಗಾಗಿದ್ದು, ಇದೀಗ ಆ ಹೇಳಿಕೆಗೆ ಮಾಜಿ ಸಿಎಂ ಸಿದ್ದರಾಮಯ್ಯ ಬೆಂಬಲ ನೀಡಿದ ಮಾತನಾಡಿದ್ದಾರೆ.
ಇಂದು ನಗರದ ಗಾಂಧಿಭವನದಲ್ಲಿ ನಡೆದ ಎಸ್ ಜಿ ಸಿದ್ದರಾಮಯ್ಯ ಅವರ ಯರೆಬೇವು ಆತ್ಮಕಥನವನ್ನ ಬಿಡುಗಡೆ ಮಾಡಲಾಯಿತು. ಈ ವೇಳೆ ಮಾತನಾಡಿದ ಮಾಜಿ ಸಿಎಂ ಸಿದ್ದರಾಮಯ್ಯ, ಇತ್ತೀಚೆಗೆ ದೇಶದಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯ ಕಷ್ಟದಲ್ಲಿದೆ. ಅಭಿವ್ಯಕ್ತಿ ಸ್ವಾತಂತ್ರ್ಯದ ಹಕ್ಕು ಚಲಾಯಿಸಿದ್ರೆ ಕೆಲವರಿಗೆ ಕಹಿ ಎನಿಸಿದೆ. ಯಾರೇ ಮಾತಾಡಿದ್ರು ಅಂತ ದೇಶದ್ರೋಹಿಗಳಂತೆ ನೋಡ್ತಾರೆ. ಇದನ್ನು ಸಮಾಜಮುಖಿಯಾಗಿ ಚಿಂತಿಸುವವರು ಖಂಡಿಸಲೇಬೇಕು.
ಕಲಬುರ್ಗಿ ಏನು ತಪ್ಪು ಮಾಡಿದ್ರು. ಸತ್ಯ ಹೇಳುವ ಪ್ರಯತ್ನ ಮಾಡಿದ್ರು. ಸತ್ಯ ಒಪ್ಪದಿರುವ ಜನ, ಕೋಮುವಾದದಿಂದ ನರಳುವವರು ಕೊಂದರು. ಕಲಬುರ್ಗಿ, ಗೌರಿ ಲಂಕೇಶ್ ಅವರನ್ನು ಕೊಂದರು.ಮಹಾತ್ಮಗಾಂಧಿಯನ್ನ ಕೊಂದವರನ್ನೇ ದೇವಸ್ಥಾನದಲ್ಲಿಟ್ಟು ಪೂಜಿಸುವವರು ಇದ್ದಾರೆ. ಹಂಸಲೇಖ ಅವರು ಏನು ತಪ್ಪು ಮಾಡಿದ್ರು. ವಾಸ್ತವಿಕ ನೆಲೆಗಟ್ಟಿನ ಬಗ್ಗೆ ಮಾತನಾಡಿದ್ರು. ಕೆಲವರು ಸರಿಯಾದ ಕಣ್ಣಿನಿಂದ ನೋಡದೆ ವಕ್ರದೃಷ್ಟಿಯಿಂದ ನೋಡ್ತಾರೆ ಎಂದು ಕಿಡಿಕಾರಿದ್ದಾರೆ.