ಬೆಂಗಳೂರು: ಅಧಿಕಾರದಲ್ಲಿ ಇರುವವರ ಓಡಾಟ ಜಾಸ್ತಿನೆ ಇರುತ್ತೆ. ಸಮಯವನ್ನ ಬ್ಯಾಲೆನ್ಸ್ ಮಾಡಬೇಕಾಗಿರುತ್ತೆ, ಸೇಫ್ಟಿಯನ್ನು ನೋಡಿಕೊಳ್ಳಬೇಕಾಗಿರುತ್ತದೆ. ಹೀಗಾಗಿ ವಿಮಾನದಲ್ಲಿನ ಓಡಾಟವೇ ಜಾಸ್ತಿ ಇರುತ್ತೆ. ಇದೀಗ ಸಿಎಂ ಸಿದ್ದರಾಮಯ್ಯ ಅವರು ವಿಮಾನದಲ್ಲಿ ಓಡಾಡಿದ ಖರ್ಚಿನ ಬಾಬ್ತು ಸುದ್ದಿಯಾಗ್ತಾ ಇದೆ. ಯಾಕಂದ್ರೆ ವಿಮಾನಕ್ಕಾಗಿ ಸಿದ್ದರಾಮಯ್ಯ ಅವರು ಖರ್ಚು ಮಾಡಿರುವುದು ಒಂದೆರಡು ಕೋಟಿಯಲ್ಲ. ಬರೋಬ್ಬರಿ 47 ಕೋಟಿ 38 ಲಕ್ಷದ 24 ಸಾವಿರದ 347 ರೂಪಾಯಿ.
2023ರಿಂದ ಅಂದರೆ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಆದಾಗಿನಿಂದ 2025ರ ನವೆಂಬರ್ ತಿಂಗಳವರೆಗಿನ ಸಿದ್ದರಾಮಯ್ಯ ಅವರ ವಿಮನಾಯಾನ ಹಾಗೂ ಹೆಲಿಕಾಪ್ಟರ್ ಪ್ರಯಾಣದಲ್ಲಿ ಓಡಾಡಿದ ಖರ್ಚು ವೆಚ್ಚದ ಬಗ್ಗೆ ಮಾಹಿತಿ ಸಿಕ್ಕಿದೆ. ಇಂದು ಬೆಳಗಾವಿಯ ಅಧಿವೇಶನದಲ್ಲಿ ಪರಿಷತ್ ಸದಸ್ಯ ಎನ್ ರವಿಕುಮಾರ್ ಈ ಸಂಬಂದ ಪ್ರಶ್ನೆ ಮಾಡಿದ್ದಾರೆ. ಆಗ ಸರ್ಕಾರ ಉತ್ತರ ನೀಡಿದ್ದು, ಖರ್ಚಿನ ಬಗ್ಗೆ ಮಾಹಿತಿ ನೀಡಿದೆ.
ಸಿಎಂ ಸಿದ್ದರಾಮಯ್ಯ ಅವರ ವಿಮಾನಯಾನ ಹಾಗೂ ಹೆಲಿಕಾಪ್ಟರ್ ಪ್ರಯಾಣಕ್ಕೆ ಒಟ್ಟು 47 ಕೋಟಿ ರೂಪಾಯಿ ಹಣವನ್ನು ಬಳಕೆ ಮಾಡಲಾಗಿದೆ. ರಾಜ್ಯದ ಬಹುತೇಕ ಜಿಲ್ಲೆಗಳಿಗೆ ಹೋಗುವುದಕ್ಕೆ, ಸಿಎಂ ಹೆಲಿಕಾಪ್ಟರ್ ಬಳಕೆ ಮಾಡಿದ್ದಾರೆ. ಅಷ್ಟೇ ಅಲ್ಲ ವಿಶೇಷವಾಗಿ ಬಳಕೆ ಮಾಡಲಾಗಿದೆ. ದೆಹಲಿ, ಹೈದರಾಬಾದ್, ಚೆನ್ನೈ ಸೇರಿದಂತೆ ವಿವಿದೆಢರ ಸಿಎಂ ಸಿದ್ದರಾಮಯ್ಯ ಅವರು ಓಡಾಟ ನಡೆಸಿದ್ದಾರೆ. ಈ ಮೂಲಕ ಸಿದ್ದರಾಮಯ್ಯ ಅವರು ಸರ್ಕಾರದ ಬೊಕ್ಕಸದಿಂದ 47 ಕೋಟಿ ರೂಪಾಯಿಯನ್ನು ಬಳಕೆ ಮಾಡಿದ್ದಾರೆ. ಇನ್ನು ಸರ್ಕಾರ ನೀಡಿದ ಮಾಹಿತಿಯಲ್ಲಿ ಬರೀ 5 ಕೋಟಿಗೂ ಹೆಚ್ಚು ಹಣವನ್ನು ಮೈಸೂರು ಪ್ರವಾಸಕ್ಕೆ ಸಿಎಂ ಬಳಕೆ ಮಾಡಿದ್ದಾರೆ.

