ಮಾತೆತ್ತಿದರೆ ವಾಚ್ ಬಗ್ಗೆ ಮಾತನಾಡುತ್ತಾರೆ : ಸಿದ್ದರಾಮಯ್ಯ ಆಕ್ರೋಶ

ಮೈಸೂರು: ಸಿದ್ದರಾಮಯ್ಯ ವಾಚ್ ಪ್ರಕರಣದ ಬಗ್ಗೆ ಆರೋಪದ ವಿಚಾರಕ್ಕೆ ಕೊಂಚ ಖಾರವಾಗಿಯೇ ಉತ್ತರಿಸಿದ ಮಾಜಿ ಸಿಎಂ ಸಿದ್ದರಾಮಯ್ಯ, ಮಾತೆತ್ತಿದರೆ ವಾಚ್ ಬಗ್ಗೆ ಮಾತನಾಡುತ್ತಾರೆ. ವಾಚ್ ಎಸಿಬಿ ತನಿಖೆಯಾಗಿ ಇತ್ಯರ್ಥವಾಗಿದೆ.‌ಸರ್ಕಾರಕ್ಕೆ ವಾಪಸ್ಸು ಕೊಟ್ಟಿ ಆಗಿದೆ. ಯಾರೋ ಡಾಕ್ಟರ್ ವರ್ಮಾ. ಕುಮಾರಸ್ವಾಮಿ ಕಳ್ಳತನದ ವಾಚ್ ಅಂದರು. ಎಸಿಬಿಗೆ ನಾನೇ ವಹಿಸಿದೆ ಅವರೇ ಬಂದು ರಸೀದಿ ಕೊಟ್ಟು ಮುಗಿದಿದೆ. ನಾನು ಕಟ್ಟಿಕೊಂಡಿದ್ದೇ 35 ರಿಂದ 40 ಲಕ್ಷ ಇರಬಹುದು. ಕಟ್ಟಿಕೊಂಡಿದ್ದರೆ ಏನು ? ಅದೇನು ನಿಮ್ಮಂತೆ 300 ಕೋಟಿ ವ್ಯವಹಾರನಾ ?. ಆದರೆ ನಾನು ಇದನ್ನು ಸಮರ್ಥಿಸುತ್ತಿಲ್ಲ

ವಾದಕ್ಕಾಗಿ ಹೇಳುತ್ತಿದ್ದೇನೆ ಅಷ್ಟೇ ಎಂದಿದ್ದಾರೆ.

ಇದಕ್ಕೆ ಕುಮಾರಸ್ವಾಮಿ ಪುಷ್ಟಿ ವಿಚಾರವಾಗಿ ಪ್ರತಿಕ್ರಿಯೆ ನೀಡಿ, ಕುಮಾರಸ್ವಾಮಿ ಬಿಜೆಪಿ ಸಂಬಂಧ ಏನು ನನಗೆ ಗೊತ್ತಿಲ್ಲ. ಬಿಜೆಪಿಯಿಂದ ನಿಮ್ಮ ಕಾಲದಲ್ಲಿ ಆಗಿಲ್ವಾ ಪ್ರಶ್ನೆ ವಿಚಾರಕ್ಕೆ ಪ್ರತಿಕ್ರಿಯಿಸಿ, ರಾಜಕಾರಣದಲ್ಲಿ ಹೋಲಿಕೆ ಸರಿಯಲ್ಲ. ಜನ ನಿಮಗೆ ದುಡ್ಡು ಕೊಡುತ್ತಾರೆ. ಜನರ ಹಣ ಲೂಟಿ ಮಾಡುತ್ತಿರುವುದಕ್ಕೆ ಉತ್ತರ ಕೊಡಿ. ಆಗಲೂ ನೀವೆ ಅಧಿಕಾರದಲ್ಲಿದ್ದಿರೀ ಈಗಲೂ ನೀವೆ ಅಧಿಕಾರದಲ್ಲಿದ್ದೀರಾ. ಈ ರೀತಿ ನಾನು ಯಾವಾಗಲೂ ನೋಡಿಲ್ಲ ಎಂದು ಮೈಸೂರಿನಲ್ಲಿ ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿಕೆ ನೀಡಿದ್ದಾರೆ.

ಸಿದ್ದರಾಮಯ್ಯ ಸುಳ್ಳು ಹೇಳಿಕೊಂಡು ತಿರುಗುತ್ತಾರೆ ಎಂಬ ಗೃಹ ಸಚಿವ ಅರಗ ಜ್ಞಾನೇಂದ್ರ ಹೇಳಿಕೆ ವಿಚಾರಕ್ಕೆ, ಕಳ್ಳರು ಇನ್ನೇನು ಹೇಳುತ್ತಾರೆ ? ಕಳ್ಳ ಸತ್ಯ ಒಪ್ಪಿಕೊಳ್ಳುತ್ತಾನಾ ?. ಸಚಿವ ಎಂ ಎಲ್ ಸಿಗಳು ಪತ್ರ ಬರೆದಾಗ ಏಕೆ ತನಿಖೆ ಮಾಡಲಿಲ್ಲ. ಮರು ಪರೀಕ್ಷೆ ಏಕೆ ಮಾಡಿದ್ರಿ ?, ವರ್ಗಾವಣೆ ಏಕೆ ಮಾಡಿದ್ರಿ, ಇವರು ಮಂತ್ರಿಯಾಗಲು ಲಾಯಕ್ಕಾ ನಾಲಾಯಕ್ಕಾ ಎಂದು ಪ್ರಶ್ನಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!