
ವಿಜಯಪುರ: ಕಾಂಗ್ರೆಸ್ ನಾಯಕರು ಬಿಜೆಪಿಯನ್ನು ಯಾವಾಗಲೂ ದೂಷಿಸುತ್ತಿರುತ್ತಾರೆ. ಜೆಡಿಎಸ್ ಮತ್ತು ಬಿಜೆಪಿ ಮೇಲೆ ಹರಿಹಾಯುತ್ತಿರುತ್ತಾರೆ. ಬಿಜೆಪಿ ಸರ್ಕಾರ ಮಾಡುವ ತಪ್ಪುಗಳನ್ನು ಜನರ ಮುಂದೆ ಇಡುತ್ತಾರೆ. ಹೀಗೆ ಯಾವಾಗಲೂ ಬಿಜೆಪಿ ಜಪ ಮಾಡುವ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಜನರ ಬಳಿ ಬಿಜೆಪಿಗೆ ವೋಟ್ ಹಾಕಿ ಎಂದಿದ್ದಾರೆ.

ನಿನ್ನೆ ವಿಜಯಪುರದಲ್ಲಿ ಪ್ರಜಾಧ್ವನಿ ಯಾತ್ರೆ ನಡೆದಿದೆ. ಇಂಡಿ ಕ್ಷೇತ್ರಕ್ಕೆ ಸಿದ್ದರಾಮಯ್ಯ ಬರುತ್ತಿದ್ದಂತೆ ಊರಿನ ಜನರೆಲ್ಲಾ ಅದ್ದೂರಿ ಸ್ವಾಗತ ಮಾಡಿದರು. ಈ ವೇಳೆ ಜನರನ್ನುದ್ದೇಶಿಸಿ ಭಾಷಣ ಮಾಡುವಾಗ ಸಿದ್ದರಾಮಯ್ಯ, ಬಿಜೆಪಿಗೆ ಮತ ಹಾಕಿ ಎಂದಿದ್ದಾರೆ. ಈ ವಿಡಿಯೋ ಸದ್ಯ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಅಂದು ವಿಜಯಪುರ ಜಿಲ್ಲೆಯೊಂದರಲ್ಲಿಯೇ 1300 ಕೋಟಿ ಸಾಲ ಮನ್ನಾ ಆಗಿತ್ತು. ಬಿಜೆಪಿಯವರು ಒಂದು ರೂಪಾಯಿಯನ್ನು ಮನ್ನಾ ಮಾಡಲಿಲ್ಲ. ನಮ್ಮ ಸರ್ಕಾರ ಇದ್ದಾಗ ಫ್ರೀಯಾಗಿ 7 ಕೆಜಿ ಅಕ್ಕಿ ನೀಡುತ್ತಿದ್ದೆವು. ಇದೀಗ ಅದನ್ನು 5 ಕೆಜಿಗೆ ಇಳಿಸಿದ್ದಾರೆ. ಆಗ ಯಡಿಯೂರಪ್ಪ ಅವರಿಗೆ ಹೇಳಿದ್ದೆ ಹಸಿವು ಮುಕ್ತ ಕರ್ನಾಟಕ ಮಾಡಬೇಕು ಅಂತ. ಆಗ ಅವರು ಅದಕ್ಕೆ ಏನು ಮಾಡಲಿ..? ನಮ್ಮ ಸರ್ಕಾರದಲ್ಲಿ ದುಡ್ಡಿಲ್ಲ ಅಂದಿದ್ರು. ಆಗ ನಾನು ನೀವೂ ಲೂಟಿ ಮಾಡೋದನ್ನ ಕಮ್ಮಿ ಮಾಡಿ ಎಂದಿದ್ದೆ. ಈಗ ನಾನು ಮತ್ತೆ ಹೇಳುತ್ತೇನೆ ನಮ್ಮ ಸರ್ಕಾರ ಅಧಿಕಾರಕ್ಕೆ ಬಂದರೆ 10 ಕೆಜಿ ಅಕ್ಕಿಯನ್ನು ಫ್ರಿಯಾಗಿ ನೀಡುತ್ತೇವೆ. ನಮ್ಮ ಮೇಲೆ ನಂಬಿಕೆ ಇದೆ ಅಲ್ವಾ..? ನಮ್ಮ ಮೇಲೆ ವಿಶ್ವಾಸ ಇದೆ ಅಲ್ವಾ..? ಹಾಗಾದ್ರೆ ನೀವೆಲ್ಲಾ ಬಿಜೆಪಿಗೆ ವೋಟ್ ಹಾಕಿ ಎಂದು ಯಡವಟ್ಟು ಮಾಡಿಕೊಂಡಿದ್ದಾರೆ.

GIPHY App Key not set. Please check settings