ಮೈಸೂರು: ಚುನಾವಣೆ ಹತ್ತಿರವಾಗುತ್ತಿದ್ದಂತೆ ಜನರಿಗೆ ರಾಜಕೀಯ ಪಕ್ಷಗಳು ಭರವಸೆಯನ್ನು ನೀಡುವುದಕ್ಕೆ ಆರಂಭಿಸಿವೆ. ಹೋದಲ್ಲಿ ಬಂದಲ್ಲಿ ನಮ್ಮನ್ನ ನೀವೂ ಗೆಲ್ಲಿಸಿದ್ರೆ ಇದನ್ನ ಕೊಡ್ತೀವಿ, ಅದನ್ನು ಕೊಡ್ತೀವಿ ಅಂತಿದ್ದಾರೆ. ಅದರಂತೆ ಕಾಂಗ್ರೆಸ್ ಪಕ್ಷ ಕೂಡ ಈ ಬಾರಿ ಅಧಿಕಾರ ಹಿಡಿಯುವುದಕ್ಕೆ ಹಲವು ರೀತಿಯಲ್ಲಿ ಸಾಹಸ ಮಾಡುತ್ತಿದೆ. ಈ ಬಾರಿ ಅಧಿಕಾರಕ್ಕೆ ಬಂದರೆ ಉಚಿತವಾಗಿ ವಿದ್ಯುತ್ ನೀಡುವುದಾಗಿ ಭರವಸೆ ನೀಡಿದೆ.
ಕಾಂಗ್ರೆಸ್ ನವರ ಉಚಿತ ವಿದ್ಯುತ್ ಹೇಳಿಕೆಗೆ ಪ್ರತಿಜ್ರಿಯೆ ನೀಡಿರುವ ಸಚಿವ ಸೋಮಣ್ಣ, ಕೈ ನಾಯಕರು ಫ್ರೀ ವಿದ್ಯುತ್ ಕೊಡ್ತೀನಿ ಅಂತಾರೆ. ಜನರಿಗೆ ಆಸೆ ಹುಟ್ಟಿಸುವುದು ಭರವಸೆ ನೀಡುವುದು ಸರಿಯಲ್ಲ. ಇದು ಸಾಧ್ಯವಿಲ್ಲ ಅಂತ ಸಿದ್ದುಗೂ ಗೊತ್ತಿದೆ. ಜೆಡಿಎಸ್ ಭರವಸೆ ನೀಡಿದ್ರೆ ಏನೂ ಅನ್ನಿಸುತ್ತಾ ಇರಲಿಲ್ಲ. ಸಿದ್ದರಾಮಯ್ಯ ಸಿಎಂ ಆಗಿದ್ದವರು. ಸಿದ್ದು 13 ಬಾರಿ ಬಜೆಟ್ ಮಂಡಿಸಿದ್ದವರು. ಜನರಿಗೆ ಈ ರೀತಿ ಆಸೆ ಹುಟ್ಟಿಸುವುದು ಸರಿಯಲ್ಲ ಎಂದಿದ್ದಾರೆ.
ಬೊಮ್ಮಾಯಿ ಮನೆ ಹಾಳಾಗ ಎಂಬ ಸಿದ್ದು ಹೇಳಿಕೆಗೆ ಪ್ರತಿಕ್ರಿಯೆ ನೀಡಿದ್ದು, ಸಿದ್ದು ಈ ರೀತಿ ಯಾಕೆ ಮಾತನಾಡುತ್ತಾರೋ ಗೊತ್ತಿಲ್ಲ. ಸಿದ್ದು ಮೊದಲೆಲ್ಲಾ ಚೆನ್ನಾಗಿಯೇ ಇದ್ರು. ಈಗ ಏನಾಗಿದ್ಯೋ ಗೊತ್ತಿಲ್ಲ. ಏನಾದರೂ ಕೇಳಿದ್ರೆ ಗ್ರಾಮೀಣ ಪದ ಅಂತಾರೆ. ಸಿದ್ದರಾಮಯ್ಯ ಹೇಳಿಕೆ ಸರಿಯಲ್ಲ ಎಂದಿದ್ದಾರೆ.