ಬೆಂಗಳೂರು: ಸದ್ಯ ರಾಜ್ಯದಲ್ಲಿ ಹಿಜಾಬ್ ನಿಂದ ಶುರುವಾದ ವಿವಾದ ಕೇಸರಿ ಶಾಲು ಬಳಿಕ ಈಗ ಸಿಂಧೂರದ ಕಡೆಗೆ ತಿರುಗಿದೆ. ಈ ಸಂಬಂಧ ಮಾತನಾಡಿದ ಮಾಜಿ ಸಿಎಂ ಸಿದ್ದರಾಮಯ್ಯ, ಸಿಂಧೂರ ಹಾಕಿಕೊಂಡ್ರೆ, ಹಿಜಾಬ್ ಹಾಕಿಕೊಂಡ್ರೆ ಏನು ತೊಂದ್ರೆ. ಹೊಸದಾಗಿ ವಿರೋಧ ಮಾಡೋದಕ್ಕೆ ಇದೆಲ್ಲವನ್ನು ಹುಟ್ಟಿಹಾಕಿಕೊಳ್ಳಬಾರದು. ಕೇಸರಿ ಶಾಲು ಹಾಕೊಳೋದು ಮೊದಲಿನಿಂದಲೂ ಇತ್ತಾ ಎಂದು ಪ್ರಶ್ನಿಸಿದ್ದಾರೆ.
ಹೀಗೆ ಮಾಡಿದರೆ ಇದು ಸಾಮರಸ್ಯ ಹಾಳು ಮಾಡುತ್ತೆ. ಇದನ್ನ ಬಿಜೆಪಿ ಉದ್ದೇಶ ಪೂರ್ವಕವಾಗಿಯೇ ಮಾಡ್ತಿದ್ದಾರೆ. ಅವ್ರು ಮುಸ್ಲಿಂ ಹೆಣ್ಣು ಮಕ್ಕಳ ಶಿಕ್ಷಣ ತೆಗೆಯಲು ಈ ರೀತಿ ಮಾಡ್ತಿದ್ದಾರೆ. ಮನುಷ್ಯತ್ವ ಇರಬೇಕು. ನಮ್ಮ ಧರ್ಮ ನಮಗೆ ಮುಖ್ಯ ಅವರ ಧರ್ಮ ಅವರಿಗೆ ಮುಖ್ಯ. ಅವರವರು ಪಾಲನೆ ಮಾಡಲಿ ಬಿಡಿ ಎಂದಿದ್ದಾರೆ.
ಇನ್ನು ಈಶ್ವರಪ್ಪ ಬಗ್ಗೆ ಮಾತನಾಡಿ, ಭಂಡ ಬಿದ್ದವರಿಗೆ, ಪಕ್ಷದ ನೈತಿಕತೆಗೆ ಬೆಲೆ ಕೊಡದೆ ಇರುವವರನ್ನ ಏನು ಮಾಡೋದಕ್ಕೆ ಆಗಲ್ಲ. ನಾವೂ ಹೋರಾಟ ಮಾಡಬೇಕು ಮಾಡ್ತೀವಿ. ರಾಷ್ಟ್ರ ಧ್ವಜಕ್ಕೆ ಅವಮಾನ ಆದ್ರೆ ಸುಮ್ನೆ ಕೂರಬೇಕಾ. ಕೇಳದೆ ಕೂತ್ಕೊಳೋಕೆ ಆಗುತ್ತಾ. ನಾವೂ ದೇಶಭಕ್ತರು ಅಂತಾರೆ. ರಾಷ್ಟ್ರ ಧ್ವಜಕ್ಕೆ ಅಗೌರವ ತೋರಿಸೋದು, ಅವಮಾನ ಮಾಡೋದು ದೇಶ ಭಕ್ತಿನಾ. ಸಂವಿಧಾನಕ್ಕೆ ಅವಮಾನ ಮಾಡಿದ್ರೆ ಸಹಿಸೋದಕ್ಕೆ ಆಗುತ್ತಾ. ಇದು ವೆರಿ ಸಿರೀಯಸ್ ಇಶ್ಯೂ. ಬಿಜೆಪಿ ಯಾವತ್ತು ರಾಷ್ಟ್ರಧ್ವಜದಿಂದ ಸ್ಪೂರ್ತಿ ಪಡೆದವರಲ್ಲ. ಅವರಿಗೆ ಇತಿಹಾಸವೂ ಗೊತ್ತಿಲ್ಲ. ಗೌರವ ಕೊಡೋದು ಗೊತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.