ಬೆಂಗಳೂರು: ಸಿದ್ದರಾಮಯ್ಯ ಅವರ 75 ನೇ ವರ್ಷದ ಆಚರಣೆ ಮಾಡಬೇಕು ಎಂದು ಅವರ ಅಭಿಮಾನಿಗಳು, ಹಿತೈಷಿಗಳು ತೀರ್ಮಾನ ಮಾಡಿದ್ದಾರೆ. ಈ ಹುಟ್ಟು ಹಬ್ಬ ಕಾಕತಾಳಿಯಂತೆ ಭಾರತ ದೇಶದ ಅಮೃತ ಮಹೋತ್ಸವ ನಡೆಯುತ್ತಿದೆ ಎಂದು ಸಂಸದ ಡಿ ಕೆ ಸುರೇಶ್ ತಿಳಿಸಿದ್ದಾರೆ.
ಇವೆರಡನ್ನು ಜೊತೆಗೆ ಬಿಂಬಿಸುತ್ತಾ ಕಾರ್ಯಕ್ರಮ ಮಾಡುವುದು ಸೂಕ್ತ ಎಂಬುದು ನನ್ನ ವೈಯಕ್ತಿಕ ಅಭಿಪ್ರಾಯ. ನಮಗೆ ಇಷ್ಟ ಇದ್ಯೋ, ಇಲ್ಲವೋ,ಮಾಧ್ಯಮಗಳು ಸಿದ್ದರಾಮೋತ್ಸವ ಎಂದು ಪ್ರಚಾರ ಮಾಡುತ್ತಿದ್ದಾವೆ. ನಮ್ಮ ನಾಯಕರ ಹುಟ್ಡು ಹಬ್ಬ ಎಂದು ಹೆಮ್ಮೆಯಿಂದ ಹೇಳಿಕೊಳ್ಳಬೇಕು. ಇದನ್ನ ನಿರಾಕರಿಸಿದರೇ ಲಾಭವೇನು ಇಲ್ಲ. ಏನು ಬಿಂಬಿಸಲು ಹೋಗುತ್ತಿದ್ದೇವೆ, ಯಾರದ್ದೋ ನಾಯಕತ್ವ ಬಿಂಬಿಸಲು ಹೋಗುತ್ತಿದ್ದೇವೆ ಎಂಬುದಲ್ಲ.
75 ನೇ ವರ್ಷಗಳಲ್ಲಿ ಬದುಕುವುದೇ ಕಷ್ಟ, ನಾವೆಲ್ಲ ಇರುತ್ತೇವೋ, ಇಲ್ಲವೋ. ವ್ಯಕ್ತಿ ಪೂಜೆ ಸಿದ್ದರಾಮಯ್ಯಗೆ ಇಷ್ಟ ಇದಿಯೋ, ಇಲ್ಲವೋ, ಆದರೆ ಕೆಲವರು ಅದನ್ನು ಮಾಡುತ್ತಲೇ ಇರುತ್ತಾರೆ. ಚುನಾವಣಾ ವರ್ಷದಲ್ಲಿ ಕಾರ್ಯಕರ್ತರಿಗೆ ಹಾಗೂ ಜನರಿಗೆ ಕೆಟ್ಟ ಸಂದೇಶ ಹೋಗದಂತೆ ಕಾರ್ಯಕ್ರಮ ಮಾಡಬೇಕು. ಇದರಿಂದ ಪಕ್ಷ ಲಾಭ ಆಗಬೇಕು, ಆ ರೀತಿ ಕಾರ್ಯಕ್ರಮ ಮಾಡಬೇಕು ಸಿದ್ದರಾಮಯ್ಯ ಬೆಂಬಲಿಗ ಪಡೆಗೆ ಡಿ.ಕೆ. ಸುರೇಶ್ ಟಾಂಗ್ ಕೊಟ್ಟಿದ್ದಾರೆ.