ದಾವಣಗೆರೆ: ಪರಿಷತ್ ಚುನಾವಣೆ ಹತ್ತಿರವಿದ್ದು ಮಾಜಿ ಸಿಎಂ ಬಿ ಎಸ್ ಯಡಿಯೂರಪ್ಪ ಸಹ ಪ್ರಚಾರದಲ್ಲಿ ಪಾಲ್ಗೊಂಡಿದ್ದಾರೆ. ದಾವಣಗೆರೆ ಜಿಲ್ಲೆಯಲ್ಲಿ ಅನಗೋಡು ಗ್ರಾಮದಲ್ಲಿ ಪ್ರಚಾರದಲ್ಲಿ ತೊಡಗಿದ ಯಡಿಯೂರಪ್ಪ, ಸಿದ್ದರಾಮಯ್ಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸಿದ್ದರಾಮಯ್ಯ ಅವರು ವಿಪಕ್ಷ ನಾಯಕ ಎಂಬುದನ್ನಜ ಮರೆತು ಮಾತಾಡುತ್ತಿದ್ದಾರೆ. ಆದ್ರೆ ಚುನಾವಣೆಯ ಫಲಿತಾಂಶದ ಬಳಿಕ ಆ ಬಗ್ಗೆ ತಿಳಿಯುತ್ತದೆ. ಬಹಳ ಹಗುರವಾಗಿ ಮಾತಾಡುವ ಅವರ ಸೊಕ್ಕಿನ ಮಾತುಗಳಿಗೆ ಯಾರು ಬೆಲೆ ಕೊಡುವುದಿಲ್ಲ. ಆ ಧಿಮಾಕು ಬಿಡಬೇಕು ಎಂದಿದ್ದಾರೆ.
ಮತದಾರರು ಕೂಡ ಈಗ ಜಾಗೃತರಾಗಿದ್ದಾರೆ. ಅವರಿಗೆ ಸರಿ ಯಾವುದು, ತಪ್ಪು ಯಾವುದು ಎಂಬುದು ಬಹಳ ಬೇಗ ತಿಳಿಯುತ್ತದೆ. ಸೋತರು ಬುದ್ದಿ ಕಲಿತಿಲ್ಲ ಸಿದ್ದರಾಮಯ್ಯ. ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸೋತರು ಅವರಿನ್ನು ಜಾಗೃತರಾಗಿಲ್ಲ ಎಂದು ಕಿಡಿಕಾರಿದ್ರು.
ಇದೇ ವೇಳೆ ಪ್ರಧಾನ ಮಂತ್ರಿ ಮೋದಿ ಅವರನ್ನ ದೇವೇಗೌಡ ಅವರು ಭೇಟಿಯಾಗಿದ್ದರಿ. ಇದು ರಾಜಕೀಯ ಭೇಟಿ ಅಂತ ಸಿದ್ದರಾಮಯ್ಯ ಅವರು ಅಣಕಿಸಿದ್ದರು. ಇದಕ್ಕೂ ಉತ್ತರ ನೀಡಿರುವ ಯಡಿಯೂರಪ್ಪ, ಪ್ರಧಾನಿ ಮೋದಿ ಅವರನ್ನ ದೇವೇಗೌಡ ಅವರು ಭೇಟಿ ಮಾಡಿರುವುದು ಚುನಾವಣೆಯ ವಿಚಾರಕ್ಕಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.