ಚಿತ್ರದುರ್ಗ: 1.28ಕೋಟಿ ವೆಚ್ಚದಲ್ಲಿ ಶಾಲಾ ಕೊಠಡಿಗಳ ನಿರ್ಮಾಣ ಕಾರ್ಯಕ್ಕೆ ಚಾಲನೆ ನೀಡಲಾಗುತ್ತಿದೆ. ತಾಲ್ಲೂಕು ಆಡಳಿತದಿಂದ 32 ಗ್ರಾಮಗಳನ್ನು ಸಮಸ್ಯೆ ಮುಕ್ತ ಗ್ರಾಮಗಳಾಗಿ ಘೋಷಿಸಲಾಗಿದೆ. ಹಾಗೇ ಚಳ್ಳಕೆರೆ ತಾಲ್ಲೂಕಿನ ಎಲ್ಲ ಗ್ರಾಮಗಳನ್ನು ಇನ್ನೂ ಒಂದು ವರ್ಷದ ಅವಧಿಯಲ್ಲಿ ಸಮಸ್ಯೆ ಮುಕ್ತ ಗ್ರಾಮಗಳನ್ನಾಗಿ ಘೋಷಿಸಲಾಗುವುದು” ಎಂದರು.
ಇದೇವೇಳೆ ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಎ.ಮುರಳಿ, ಕಾರ್ಯದರ್ಶಿ ಜಯಪಾಲಯ್ಯ, ಪಿ.ಶಿವಣ್ಣ, ಮಂಡಲ ಅಧ್ಯಕ್ಷರಾದ ಡಾ.ಪಿ.ಎಂ.ಮಂಜುನಾಥ, ಇ.ರಾಮರೆಡ್ಡಿ, ಎನ್.ಮಹಾಂತಣ್ಣ, ಶ್ರೀನಿವಾಸ್, ಮಲ್ಲೇಶ್, ಬೋರಸ್ವಾಮಿ, ಗೊಂವಿಂದ, ರಾಜು ಉಪಸ್ಥಿತರಿದ್ದರು.
ಇದೇ ವೇಳೆ ಮಾತನಾಡಿದ ಸಚಿವ ಶ್ರೀರಾಮುಲು, ಸಿದ್ದರಾಮಯ್ಯ ವಿರುದ್ಧ ಗುಡುಗಿದರು. ಬಿಜೆಪಿ ಸರ್ಕಾರ ಭ್ರಷ್ಟ ಸರ್ಕಾರವೆಂದ ಸಿದ್ಧರಾಮಯ್ಯಗೆ ಹೇಳಿಕೆಗೆ ಶ್ರೀರಾಮುಲು ಪ್ರತಿಕ್ರಿಯೆ ನೀಡಿದ್ದು, ಸಿದ್ಧಾರಾಮಯ್ಯ ಆಡಳಿತದಲ್ಲಿ ಭ್ರಷ್ಟರ ರಕ್ಷಣೆ ಮಾಡಿದ್ದಾರೆ. ಬಿಜೆಪಿ ವಿರುದ್ಧ ಸಾವಿರ ಸಲ ಸುಳ್ಳು ಹೇಳಿ ಸತ್ಯ ಮಾಡುವ ಕೆಲಸ ಎಂದರು.
ಇನ್ನು ಸಮಾಜ ಕಲ್ಯಾಣ ಇಲಾಖೆಯಲ್ಲಿ ಲೋನ್ ನೀಡುವಲ್ಲಿ ಲೋಪ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿರುವ ಸಚಿವರು
ನಾನು ಸಮಾಜ ಕಲ್ಯಾಣ ಸಚಿವನಾಗಿದ್ದಾಗ ಪತ್ತೆ ಮಾಡಿ ಕ್ರಮ ಕೈಗೊಳ್ಳಲಾಗುವುದು. ಆದರೆ ಭ್ರಷ್ಟಾಚಾರ ವಿಚಾರವನ್ನು ಬಿಜೆಪಿ ಬಹಳ ದೂರವಿಟ್ಟಿದೆ. ಕಾಂಗ್ರೆಸ್ ಪಕ್ಷ ಶಾಂತಿ ಕದಡುವ ಕೆಲಸ ಮಾಡುತ್ತಿದೆ ಎಂದರು. ಶಾಂತಿ ಗಲಭೆ ಆರೋಪಿಗಳ ಕುಟುಂಬಕ್ಕೆ ಕಿಟ್ ನೀಡಿದ ಜಮೀರ್ ಬಗ್ಗೆ ಉದಾಹರಣೆ ನೀಡಿದರು.