ಬೆಂಗಳೂರು: ನಿನ್ನೆ ಮಾಧ್ಯಮದವರ ಜೊತೆ ಹಲವು ಮಾಹಿತಿ ಹಂಚಿಕೊಳ್ಳಲು ಸುದ್ದಿಗೋಷ್ಠಿ ಕರೆದಿದ್ದ ಕುರುಬ ಸಮುದಾಯದ ಮುಕುಡಪ್ಪ ಹಾಗೂ ಪುಟ್ಟಸ್ವಾಮಿ, ಮಾಜಿ ಸಿಎಂ ಸಿದ್ದರಾಮಯ್ಯ ಅವರ ವಿರುದ್ಧವಾಗಿಯೂ ಕೆಟ್ಟದಾಗಿ ಮಾತನಾಡಿದ್ದರು. ಅದನ್ನು ಖಂಡಿಸಿ ಇಂದು ಮುಕುಡಪ್ಪ ಹಾಗೂ ಪುಟ್ಟಸ್ವಾಮಿ ಮನೆ ಎದುರು ಪ್ರತಿಭಟನೆ ನಡೆಸುತ್ತಿದ್ದಾರೆ.
ಕುರುಬ ಸಮಾಜದ ಮುಖಂಡರು ಹಾಗೂ ಸಿದ್ದರಾಮಯ್ಯ ಅವರ ಬೆಂಬಲಿಗರಿಂದ ಪ್ರತಿಭಟನೆ ನಡೆಯುತ್ತಿದ್ದು, ಮುಕುಡಪ್ಪ ಅಧಿಕಾರದಲ್ಲಿ ಇರುವ ಪಕ್ಷದ ಕಡೆಗೆ ವಾಲುತ್ತಾರೆ. ಅವರು ಹೇಳಿರುವ ಆಡಿರುವ ಅವಹೇಳನಕಾರಿ ಮಾತುಗಳಿಂದ ಹಾಗೂ ಕೀಳುಮಟ್ಟದ ಪ್ರಯೋಗಕ್ಕೆ ಕೂಡಲೇ ಜನರ ಮುಂದೆಯೇ ಕ್ಷಮೆ ಕೇಳಬೇಕು. ಇವರ ವಿರುದ್ಧ ಕ್ರಿಮಿನಲ್ ಕೇಸ್ ದಾಖಲಿಸಬೇಕು ಎಂದು ರಾಜ್ಯದೆಲ್ಲೆಡೆ ಹೋರಾಟ ಮಾಡುತ್ತೇವೆ ಎಂದು ಪ್ರತಿಭಟನಾನಿರತರು ಒತ್ತಾಯಿಸಿದ್ದಾರೆ.
ಇನ್ನು ಇದೇ ವೇಳೆ ಮಾತನಾಡಿದ ಜಿ ಕೃಷ್ಣಮೂರ್ತಿ, ಸಿದ್ದರಾಮಯ್ಯ ಅವರು ತಮ್ಮ 45 ವರ್ಷದ ರಾಜಕೀಯ ಜೀವನದಲ್ಲಿ ಕಪ್ಪು ಚುಕ್ಕೆ ಇಲ್ಲದೆ ಆಡಳಿತ ನಡೆಸಿದ್ದಾರೆ. ಸಾಕಷ್ಟು ಬಾರಿ ಬಜೆಟ್ ಮಂಡನೆಯನ್ನು ಮಾಡಿದವರು. ರಾಜ್ಯದ ಜನ ಹಸಿವಿನಿಂದ ಇರಬಾರದು ಎಂಬ ಕಾರಣಕ್ಕೆ ಹಲವು ಯೋಜನೆಗಳನ್ನು ಜಾರಿಗೆ ತಂದಿದ್ದಾರೆ ಎಂದಿದ್ದಾರೆ.