ಬೆಂಗಳೂರು; ಕನ್ನಡಿಗರನ್ನು ಕೆಣಕಿದ ಕಾರಣಕ್ಕೆ ಕಮಲ್ ಹಾಸನ್ ಗೆ ಸರಿಯಾಗಿಯೇ ಮುಖಭಂಗವಾಗಿದೆ. ಥಗ್ ಲೈಫ್ ಸಿನಿಮಾ ಕರ್ನಾಟಕದಲ್ಲಿ ರಿಲೀಸ್ ಆಗಿಲ್ಲ. ತಮಿಳುನಾಡಿನಲ್ಲಿ ಮಕಾಡೆ ಮಲಗಿತ್ತು. ಹೀಗಾಗಿ ಥಗ್ ಲೈಫ್ ತಂಡ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದರು. ಅಲ್ಲಿ ತಂಡಕ್ಕೇನೋ ಗೆಲುವು ಸಿಕ್ಕಿದೆ. ಸುಪ್ರೀಂ ಕೋರ್ಟ್ ರಾಜ್ಯ ಸರ್ಕಾರಕ್ಕೆ ತರಾಟೆಗೆ ತೆಗೆದುಕೊಂಡಿದ್ದು, ಇಲ್ಲಿಯೂ ಗ್ರೀನ್ ಸಿಗ್ನಲ್ ಸಿಕ್ಕಿದೆ.
ಇದೀಗ ರಾಜ್ಯ ಸರ್ಕಾರ ಕೂಡ ಥಗ್ ಲೈಫ್ ಬಿಡುಗಡೆಗೆ ಓಕೆ ಎಂದಿದ್ದು, ಸಂಪೂರ್ಣ ರಕ್ಷಣೆ ನೀಡುವುದಾಗಿ ಸುಪ್ರೀಂ ಕೋರ್ಟ್ ಗೆ ಅಫಿಡೆವಿಟ್ ಸಲ್ಲಿಕೆಯನ್ನ ಮಾಡಿದ್ದಾರೆ. ಥಗ್ ಲೈಫ್ ಚಿತ್ರ ಪ್ರದರ್ಶನಗೊಳ್ಳುವ ಚಿತ್ರಮಂದಿರಗಳಿಗೆ ಭದ್ರತೆ ಕೊಡುವುದಾಗಿ ತಿಳಿಸಿದೆ. ಆದರೆ ಫಿಲ್ಮ್ಂ ಚೆಂಬರ್ ಇದಕ್ಕೆ ಒಪ್ಪಿಗೆ ನೀಡಿಲ್ಲ. ಕಮಲ್ ಹಾಸನ್ ಕ್ಷಮೆ ಕೇಳುವ ತನಕ ಸಿನಿಮಾ ಬಿಡುಗಡೆಗೆ ಅವಕಾಶ ನೀಡಿಲ್ಲ. ಆದರೆ ಕ್ಷಮೆಯನ್ನು ಕೇಳದೆ ಮೊಂಡಾಟ ಆಡ್ತಾ ಇರುವ ಕಮಲ್ ಹಾಸನ್ ಸಿನಿಮಾ ರಿಲೀಸ್ ಆದ್ರೂ ಕೂಡ ಕನ್ನಡಿಗರು ಸ್ವಾಭಿಮಾನ ಮೆರೆದು ನಿರ್ಲಕ್ಷ್ಯ ಮಾಡ್ತಾರಾ ಎಂಬುದನ್ನ ನೋಡಬೇಕಿದೆ.
ಈ ಸಿನಿಮಾ ಬಗ್ಗೆ ಸುಪ್ರೀಂ ಕೋರ್ಟ್ ನ ಜಸ್ಟೀಸ್ ಮನಮೋಹನ್, ಜಸ್ಟೀಸ್ ಜೆ.ಭುಯನ್ ಪೀಠವು ಕರ್ನಾಟಕದಲ್ಲಿ ಚಿತ್ರ ಬಿಡುಗಡೆಗೆ ಅನುಮತಿ ನೀಡಿ ಆದೇಶ ನೀಡಿತ್ತು. ರಾಜ್ಯ ಸರ್ಕಾರ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆಯನ್ನು ಎತ್ತಿ ಹಿಡಿಯಬೇಕು. ಜನರು ಬಂದು ಸಿನಿಮಾ ನೋಡ್ತಾರೆ. ಜನ ಬಂದು ಘೇರಾವ್ ಮಾಡ್ತೀವಿ ಅಂತ ಹೇಳಿದಾಕ್ಷಣ ಸಿನಿಮಾ ಬಿಡುಗಡೆಯನ್ನು ನಿಲ್ಲಿಸಬಾರದು. ಜನ ಸಿನಿಮಾ ಹಾಲ್ ಸುಡುತ್ತೇವೆ ಎಂದಿದ್ದಕ್ಕೆ ಸಿನಿಮಾ ಬಿಡುಗಡೆಯನ್ನು ನಿಲ್ಲಿಸಬಾರದು. ಈ ನೆಲದ ಕಾನೂನು ಕಾಪಾಡುವುದು ಮುಖ್ಯ ಎಂದು ಸುಪ್ರೀಂ ಕೋರ್ಟ್ ಹೇಳಿತ್ತು.






