ಬೆಂಗಳೂರು: ಕಾಂಗ್ರೆಸ್ ಪಕ್ಷದಲ್ಲಿ ಸಿಎಂ ಕುರ್ಚಿ ಕದನ ಸಿಕ್ಕಾಪಟ್ಟೆ ಜೋರಾಗಿಯೇ ನಡೆದಿದೆ. ಹೈಕಮಾಂಡ್ ವರೆಗೂ ತಲುಪಿದ ಈ ಕದನಕ್ಕೆ ಫುಲ್ ಸ್ಟಾಪ್ ಇಡುವುದಕ್ಕೆ ನಿರ್ಧಾರ ಮಾಡಲಾಗಿದೆ. ಹೀಗಾಗಿಯೇ ಮೊದಲು ನೀವಿಬ್ಬರು ಕೂತು ಮಾತನಾಡಿ ಎಂಬ ಸಂದೇಶವನ್ನ ಹೈಕಮಾಂಡ್ ರವಾನೆ ಮಾಡಿದೆ. ಅದರ ಭಾಗವಾಗಿಯೇ ಇಂದು ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿಕೆ ಶಿವಕುಮಾರ್ ಬ್ರೇಕ್ ಫಾಸ್ಟ್ ತಿನ್ನುತ್ತಾ, ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವವರಿದ್ದಾರೆ. ಸಿಎಂ ಗೃಹ ಕಚೇರಿ ಕಾವೇರಿಯಲ್ಲಿ ಬ್ರೇಕ್ ಫಾಸ್ಟ್ ಮೀಟಿಂಗ್ ಶುರುವಾಗಿದೆ.
ಬೆಳಗ್ಗೆ 10 ಗಂಟೆಯ ಸುಮಾರಿಗೆ ಡಿಕೆ ಶಿವಕುಮಾರ್ ಸಿಎಂ ನಿವಾಸಕ್ಕೆ ಆಗಮಿಸಿದ್ದಾರೆ. ಡಿಕೆ ಶಿವಕುಮಾರ್ ಬಂದೊಡನೆ ಸಿಎಂ ಸಿದ್ದರಾಮಯ್ಯ ಅವರೇ ಸ್ವಾಗತ ಕೋರಿದ್ದಾರೆ. ಬಳಿಕ ಅಲ್ಲಿಯೇ ಬ್ರೇಕ್ ಫಾಸ್ಟ್ ಮಾಡಿದ್ದಾರೆ. ಇಡ್ಲಿ, ವಡೆ, ಉಪ್ಪಿಟ್ಟು ಹಾಗೂ ಕೇಸರಿ ಬಾತ್ ಸವಿಯುತ್ತಾ ರಾಜಕೀಯದ ಚರ್ಚೆಯನ್ನು ಮಾಡಲು ಶುರು ಮಾಡಿದ್ದಾರೆ.
ಈ ಬ್ರೇಕ್ ಫಾಸ್ಟ್ ಮೀಟಿಂಗ್ ಬಗ್ಗೆ ಗೃಹ ಸಚಿವ ಜಿ ಪರಮೇಶ್ವರ್ ಅವರು ಪ್ರತಿಕ್ರಿಯೆ ನೀಡಿದ್ದು, ಬ್ರೇಕ್ ಫಾಸ್ಟ್ ಮೀಟಿಂಗ್ ನಲ್ಲಿ ಗೊಂದಲ ಬಗೆಹರಿದರೆ ಒಳ್ಳೆಯದೆ ಅಲ್ವಾ. ಗೊಂದಲ ಇರಬಾರದು ಅಂತಾನೇ ಎಲ್ಲರ ಇಚ್ಛೆ. ಹೈಕಮಾಂಡ್ ಸಹ ಗೊಂದಲ ಇರಬಾರದು ಅಂತಾನೇ ಹೇಳಿದ್ದಾರೆ. ಇಬ್ಬರು ನಾಯಕರು ಗೊಂದಲ ಇದ್ದರೆ ಬಗೆಹರಿಸಿಕೊಳ್ಳಿ ಎಂದು ತಿಳಿಸಿದ್ದಾರೆ. ಗೊಂದಲಗಳಿಗೆ ತೆರೆ ಬಿದ್ದರೆ ಒಳ್ಳೆಯದೆ ಅಲ್ವಾ..? ಸದ್ಯಕ್ಕೆ ದೆಹಲಿಗೆ ಹೋಗಲ್ಲ. ಅವಶ್ಯಕತೆ ಬಂದ್ರೆ ದೆಹಲಿಗೆ ಹೋಗ್ತೇವೆ ಎಂದು ಗೃಹ ಸಚಿವ ಜಿ ಪರಮೇಶ್ವರ್ ಅವರು ತಿಳಿಸಿದ್ದಾರೆ. ಸಿಎಂ ಕುರ್ಚಿ ಕದನ ಹಾದಿ ರಂಪ ಬೀದಿ ರಂಪ ಆಗೋದಕ್ಕಿಂತ. ಅವರಿಬ್ಬರೆ ಬಗೆಹರಿಸಿಕೊಳ್ಳಲಿ ಎಂಬುದೇ ಸಚಿವರ ಅಭಿಪ್ರಾಯವಾಗಿದೆ.






