ಹುಬ್ಬಳ್ಳಿ: 2023ರ ಚುನಾವಣೆಗೆ ಕಾಂಗ್ರೆಸ್ ಈಗಾಗಲೇ ಸಾಕಷ್ಟು ತಯಾರಿ ನಡೆಸಿಕೊಳ್ಳುತ್ತಿದೆ. ಅದರಲ್ಲೂ ಕಳೆದ ಆರು ತಿಂಗಳಿನಿಂದ ಸಿದ್ದರಾಮಯ್ಯ ಅವರು ಯಾವ ಕ್ಷೇತ್ರದಲ್ಲಿ ನಿಲ್ಲಲಿದ್ದಾರೆ ಎಂಬ ಚರ್ಚೆ, ಕುತೂಹಲ ಹೆಚ್ಚಾಗಿದೆ. ಈ ಮಧ್ಯೆ ಮಾಜಿ ಸಚಿವ ಸಂತೋಷ್ ಲಾಡ್ ಸಿದ್ದರಾಮಯ್ಯ ಚುನಾವಣೆಯಲ್ಲಿ ಸ್ಪರ್ಧೆ ಮಾಡುವುದಕ್ಕಿಂತ ರಾಜ್ಯ ತಿರುವುಗುವುದು ಉತ್ತಮ ಎನ್ನುತ್ತಿದ್ದಾರೆ. ಸಿದ್ದರಾಮಯ್ಯ ಅವರ ಆಪ್ತ ವಲಯದಲ್ಲಿ ಗುರತಿಸಿಕೊಂಡವರು ಸಂತೋಷ್ ಲಾರ್ಡ್ ಇದೀಗ ಅವರೇ ಉಲ್ಟಾ ಹೊಡೆಯುತ್ತಿದ್ದಾರೆ.
ಏರ್ ಪೋರ್ಟ್ ನಲ್ಲಿ ಈ ಬಗ್ಗೆ ಮಾತನಾಡಿದ ಸಂತೋಷ್ ಲಾಡ್,ನಮ್ಮ ರಾಜ್ಯದಲ್ಲಿ ಮುಖಂಡರು ಎಲ್ಲಿಯೇ ನಿಂತರು ಗೆಲುವು ಸಿಗುತ್ತೆ. ಅದರ ಬದಲು ಅವರು ರಾಜ್ಯದಲ್ಲೆಲ್ಲಾ ಸಂಚರಿಸಿದರೆ ಪಕ್ಷ ಇನ್ನಷ್ಟು ಬಲಗೊಳ್ಳುತ್ತದೆ. ಸಾಹೇಬ್ರು ಸ್ಪರ್ಧೆಗೆ ನಿಲ್ಲದೆ ಕರ್ನಾಟಕ ತಿರುಗಿದರೆ ಪಕ್ಷಕ್ಕೆ ಒಳ್ಳಯದು. ಇದು ನನ್ನ ವೈಯಕ್ತಿಕ ಅಭಿಪ್ರಾಯ ಎಂದಿದ್ದಾರೆ.
ಬೇರೆ ಕ್ಷೇತ್ರಗಳಲ್ಲಿ ಈ ರೀತಿಯ ಐಡಿಯಾ ವರ್ಕೌಟ್ ಆಗಿದೆ. ಹೀಗಾಗಿ ಇಲ್ಲಿಯೂ ಆಗಬಹುದು ಎಂದು ಹೇಳಿದೆ. ಸಿದ್ದರಾಮಯ್ಯ ಜೊತೆಗೆ ಡಿಕೆಶಿ ಕೂಡ ಸ್ಪರ್ಧಿಸಬಾರದು. ಬೇಕಾದರೇ ನಮ್ಮ ಶಾಸಕರಿಂದ ಅಧ್ಯಕ್ಷರಿಗೆ ಒತ್ತಡ ಹಾಕಿಸುತ್ತೇವೆ ಎಂದಿದ್ದಾರೆ. ಈ ಮಾತು ಸದ್ಯ ರಾಜ್ಯ ರಾಜಕಾರಣದಲ್ಲಿ ಚರ್ಚೆಗೆ ಗ್ರಾಸವಾಗಿದೆ.