ಇದೊಂದು ಕುತೂಹಲ ಎಲ್ಲರಿಗೂ ಇತ್ತು. ಮುಖ್ಯಮಂತ್ರಿ ಸ್ಥಾನಕ್ಕಾಗಿ ಪಟ್ಟನ್ನು ಇಬ್ಬರು ಹಿಡಿದಿದ್ದರು. ಡಿಕೆ ಶಿವಕುಮಾರ್ ಅವರನ್ನು ಸಮಾಧಾನ ಮಾಡಲು ಹೈಕಮಾಂಡ್ ಗೆ ಮೂರ್ನಾಲ್ಕು ದಿನಗಳೇ ಬೇಕಾಗಿತ್ತು. ಕಡೆಗೂ ಹೈಕಮಾಂಡ್ ಮಾತಿಗೆ ಇಬ್ಬರು ಒಪ್ಪಿಗೆಯನ್ನೇನೋ ಸೂಚಿಸಿದರು. ಆದರೆ ಬೆಂಗಳೂರಿಗೆ ಬರುವಾಗ ಜೊತೆಯಾಗಿ ಬರುತ್ತಾರಾ ಇಲ್ಲವಾ ಎಂಬ ಅನುಮಾನ ಕೆಲವರಲ್ಲಿ ಇತ್ತು. ಆದರೆ ಆ ಕುತೂಹಲಕ್ಕೆ ಬ್ರೇಕ್ ಬಿದ್ದಿದೆ.
ಡಿಕೆ ಶಿವಕುಮಾರ್ ಮತ್ತು ಸಿದ್ದರಾಮಯ್ಯ ಜೊತೆಯಾಗಿಯೇ ಬಂದಿದ್ದಾರೆ. ಒಂದೇ ವಿಮಾನದಲ್ಲಿ ಬಂದಿಳಿದಿದ್ದು, ಏರ್ಪೋರ್ಟ್ ಬಳಿ ಅಭಿಮಾನಿಗಳನ್ನು ಕಂಡಾಗ ಕೈ ಬೀಸಿ ಸಂತಸ ಹಂಚಿಕೊಂಡಿದ್ದಾರೆ. ಬಳಿಕ ಪ್ರತ್ಯೇಕ ಕಾರಿನಲ್ಲಿ ಮನೆಗೆ ತೆರಳಿದ್ದಾರೆ.
ಇಂದು ರಾತ್ರಿ ಕೆಪಿಸಿಸಿ ಕಚೇರಿಯಲ್ಲಿ ಶಾಸಕಾಂಗ ಸಭೆ ನಡೆಯಲಿದೆ. ಸಿದ್ದರಾಮಯ್ಯ ಹಾಗೂ ಡಿಕೆ ಶಿವಕುಮಾರ್ ನೇತೃತ್ವದಲ್ಲಿ ಆ ಸಭೆ ನಡೆಯಲಿದೆ.