ಸುದ್ದಿಒನ್, ಗುಬ್ಬಿ, ಆಗಸ್ಟ್. 10 : ತಾಲೂಕಿನ ನಡುವಲಪಾಳ್ಯದಲ್ಲಿ ಶನೇಶ್ವರ ಸ್ವಾಮಿಯ 12ನೇ ವರ್ಷದ ವಾರ್ಷಿಕೋತ್ಸವ ಅಂಗವಾಗಿ ವಿಶೇಷ ಅಲಂಕಾರ ಮಾಡಿ ಬಹಳ ಅದ್ದೂರಿಯಾಗಿ ಪೂಜಾ ಕಾರ್ಯಕ್ರಮ ನಡೆಯಿತು.
ದೇವಸ್ಥಾನದ ಟ್ರಸ್ಟ್ ಅಧ್ಯಕ್ಷ ಬಸವರಾಜು ಮಾತನಾಡಿ ಶ್ರಾವಣ ಮಾಸದ ದಿನ ಬಹಳ ವಿಶೇಷವಾಗಿ ನಡುಲಪಾಳ್ಯ, ಚಿಕ್ಕೋನಹಳ್ಳಿ, ಕಡೆಪಾಳ್ಯ ಗ್ರಾಮಸ್ಥರು ಸೇರಿ ದವಸಧಾನ್ಯ ತಂದು ಗ್ರಾಮಸ್ಥರೇ ಸೇರಿ ಅಡುಗೆ ಮಾಡಿ ಶ್ರೀ ಶನೇಶ್ವರಸ್ವಾಮಿ ಸನ್ನಿದಿಯಲ್ಲಿ ಭಕ್ತಾದಿಗಳಿಗೆ ಅನ್ನ ಸಂತರ್ಪಣೆ ಏರ್ಪಡಿಸಿರುತ್ತಾರೆ. ಈ ದಿನ ಸುಮಾರು ಮೂರರಿಂದ ನಾಲ್ಕು ಸಾವಿರ ಜನಗೆ ಊಟದ ವ್ಯವಸ್ಥೆ ಏರ್ಪಡಿಸುತ್ತಾರೆ.
ಪ್ರಾತಃಕಾಲದಲ್ಲಿ ಅಭಿಷೇಕ, ಗಂಗಾವತರಣ,ಗಣಪತಿ ಪೂಜೆ, ಪಂಚಾಮೃತ ಅಭಿಷೇಕ, ಹೂವಿನಿಂದ ಅಲಂಕರಿಸಿ ಮಹಾ ಮಂಗಳಾರತಿ ಮಾಡಲಾಗುತ್ತದೆ ಎಂದು ತಿಳಿಸಿದರು.
ರೈತ ಸಂಘದ ಲೋಕೇಶ್ ಮಾತನಾಡಿ, ಮೂರ್ನಾಲ್ಕು ಊರುಗಳ ಗ್ರಾಮಸ್ಥರ ಸಹಕಾರದಿಂದ ಪ್ರತಿವರ್ಷ ಬಹಳ ವಿಜೃಂಭಣೆಯಾಗಿ ಜಾತ್ರೆಯ ರೂಪದಲ್ಲಿ ಯಾವುದೇ ಜಾತಿ ಮತ ಭೇದವಿಲ್ಲದೆ ಎಲ್ಲರೂ ಒಗ್ಗೂಡಿ ಶನೇಶ್ವರನಿಗೆ ಪೂಜಾ ಕಾರ್ಯಕ್ರಮ ನಡೆಯುತ್ತದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಮುಳ್ಳುಕಟ್ಟೆಗೌಡ, ರಾಜಣ್ಣಗೌಡ, ರಾಜಣ್ಣ, ಶಿವಣ್ಣ, ಬಸವರಾಜು, ಸಣ್ಣ ಸಿದ್ದೇಗೌಡ, ಹುಚ್ಚಪ್ಪ, ಪ್ರದಾನ ಅರ್ಚಕರಾದ ಗೌರಿಶಂಕರ್, ಉಮಾ ಗಿರೀಶ್ ಆಚಾರ್ ಕುಟುಂಬಸ್ಥರು ಹಾಗೂ ಭಕ್ತಾದಿಗಳು, ಗ್ರಾಮಸ್ಥರು ಇದ್ದರು.