ಶೀಬಾರದಲ್ಲಿ ಅದ್ದೂರಿಯಾಗಿ ನಡೆದ ಶ್ರೀ ಮೈಲಾರಲಿಂಗೇಶ್ವರ ಸ್ವಾಮಿಯ ರಥೋತ್ಸವ

1 Min Read

 

 

ಸುದ್ದಿಒನ್, ಚಿತ್ರದುರ್ಗ, ಫೆ. 28 : ನಗರಕ್ಕೆ ಸಮೀಪದ ಶೀಬಾರದಲ್ಲಿ ನಿನ್ನೆ ಗುರುವಾರ ಸಂಜೆ ಶ್ರೀ ಮುರುಘರಾಜೇಂದ್ರ ಬೃಹನ್ಮಠದ ವತಿಯಿಂದ ಪ್ರತಿವರ್ಷ ನಡೆಸಿಕೊಂಡು ಬರಲಾಗುತ್ತಿರುವ ಶ್ರೀ ಜಗದ್ಗುರು ಗುರುಪಾದ ಮುರುಘರಾಜೇಂದ್ರ ಮಹಾಸ್ವಾಮಿಗಳವರ ಹಾಗು ಶ್ರೀ ಮೈಲಾರಲಿಂಗೇಶ್ವರ ಸ್ವಾಮಿಯ 70ನೇ ವರ್ಷದ ರಥೋತ್ಸವ ಅದ್ದೂರಿಯಾಗಿ ನಡೆಯಿತು.

ಈ ಬಾರಿ ಜಯದೇವ ಮುರುಘರಾಜೇಂದ್ರ ಮಹಾಸ್ವಾಮಿಗಳ 150ನೇ ವರ್ಷದ ಜಯಂತೋತ್ಸವವೂ ಬಂದಿರುವ ಕಾರಣ ಅವರ ಹೆಸರಿನಲ್ಲಿಯೂ ಸೇರಿದಂತೆ ನಿನ್ನೆ ಜಾತ್ರೆಗೆ ಚಾಲನೆ ನೀಡಲಾಯಿತು. ಬಸವೇಶ್ವರರು ಹಾಗೂ ಶ್ರೀ ಗುರುಪಾದ ಮುರುಘರಾಜೇಂದ್ರ ಮಹಾಸ್ವಾಮಿಗಳವರ ಭಾವಚಿತ್ರವನ್ನು ಅಲಂಕೃತಗೊಂಡ ಟ್ರಾಕ್ಟರ್‍ನಲ್ಲಿ ಶ್ರೀಮಠದಿಂದ ಜಾತ್ರೆಗೆ ತೆಗೆದುಕೊಂಡು ಹೋಗಿ ಅದರೊಂದಿಗೆ ಮೈಲಾರಲಿಂಗೇಶ್ವರ ಉತ್ಸವ ಮೂರ್ತಿಯನ್ನು ರಥದ ಮೇಲೆ ಕೂರಿಸಿ ಪೂಜಾ ವಿಧಾನಗಳನ್ನು ವಚನಗಳ ಮೂಲಕ ನೆರವೇರಿಸಿ ಸೀಬಾರದ ಸುತ್ತಮುತ್ತಲಿನ ಗ್ರಾಮಗಳ ಸಾವಿರಾರು ಜನರ ಹರ್ಷೋದ್ಘಾರದ ನಡುವೆ ರಥೋತ್ಸವಕ್ಕೆ ಚಾಲನೆ ನೀಡಿ ರಥವನ್ನು ಎಳೆಯಲಾಯಿತು.

ಈ ಸಂದರ್ಭದಲ್ಲಿ ಬೃಹನ್ಮಠದ ಆಡಳಿತ ಮಂಡಳಿಯ ಸದಸ್ಯರ ಡಾ. ಬಸವಕುಮಾರ ಮಹಾ ಸ್ವಾಮಿಗಳು ಹಾಗೂ ದಾವಣಗೆರೆ ವಿರಕ್ತಮಠದ ಡಾ.ಬಸವ ಪ್ರಭುಮಹಾಸ್ವಾಮಿಗಳು ಸಾನಿಧ್ಯ ವಹಿಸಿ ಚಾಲನೆ ನೀಡಿ ರಥೋತ್ಸವದೊಂದಿಗೆ ಹೆಜ್ಜೆ ಹಾಕಿದರು.

ರಥೋತ್ಸವ ಪ್ರಾರಂಭದೊಂದಿಗೆ ದನಗಳ ಜಾತ್ರೆಗೆ ವಿದ್ಯುಕ್ತವಾಗಿ ದೊರಕಿತು. ಮಧ್ಯಕರ್ನಾಟಕದ ಈ ಭಾಗದ ಜನಪ್ರಿಯ ದನಗಳ ಜಾತ್ರೆಗೆ ವಿಶೇಷ ಮೆರಗು ಇದೆ. ರೈತರು, ವ್ಯಾಪಾರಸ್ಥರು ಭಾಗವಹಿಸಿ ಸೇರುವ ವಿವಿಧ ತಳಿಯ ರಾಜ್ಯ ಹಾಗೂ ಬೇರೆ ರಾಜ್ಯಗಳಿಂದ ಬರುವ ರಾಸುಗಳನ್ನು ಕೊಂಡುಕೊಂಡು ಯಶಸ್ವಿಗೊಳಿಸಬೇಕೆಂದು, ಇಲ್ಲಿ ಉತ್ತಮ ರೀತಿಯ ನೀರು, ನೆರಳು ಹಾಗೂ ಬೆಳಕಿನ ವ್ಯವಸ್ಥೆ ಮಾಡಲಾಗಿದ್ದು ಕೃಷಿಕರು ಸಾರ್ವಜನಿಕರು ಇದರ ಸದುಪಯೋಗಪಡಿಸಿಕೊಂಡು ಉತ್ತಮ ರೀತಿಯ ತಳಿಯ ರಾಸುಗಳನ್ನು ಕರೆದುಕೊಂಡು ಬರಲು ತಿಳಿಸಿದರು.

ಈ ಸಂದರ್ಭದಲ್ಲಿ ವ್ಯವಸ್ಥಾಪನಾ ಸಮಿತಿಯ ಜಿ.ಎಂ.ಪ್ರಕಾಶ್, ಜಿ.ಎಮ್. ಕುಮಾರ್, ಚಿದಾನಂದ ಮೂರ್ತಿ, ಸತೀಶ್ ಜಿ.ಎಂ., ಗೌಡರ ಜಯದೇವಪ್ಪ, ಜಿ.ಎಂ. ತಿಪ್ಪೇಸ್ವಾಮಿ, ಜಿ.ಎಂ. ಶಿವಮೂರ್ತಿ, ಗ್ರಾಮ ಪಂಚಾಯತಿ ಸದಸ್ಯರಾದ ಶಂಕರಮ್ಮ, ಜಿಲ್ಲಾ ಪಂಚಾಯತ್ ಮಾಜಿ ಸದಸ್ಯರಾದ ನರಸಿಂಹರಾಜು, ಶಿವಲಿಂಗಪ್ಪ.ಜಿ.ಎಂ, ಜಿ.ಎಂ. ಪುಟ್ಟಸ್ವಾಮಿ, ಜಂಬುನಾಥ್ ಸೇರಿದಂತೆ ಸೀಬಾರ ಗುತ್ತಿನಾಡಿನ ಹಾಗೂ ಸುತ್ತಮುತ್ತಲ ಗ್ರಾಮಸ್ಥರು ಭಾಗವಹಿಸಿದ್ದರು.

Share This Article
Leave a Comment

Leave a Reply

Your email address will not be published. Required fields are marked *