Notice: Undefined index: options in /home/nagendra/public_html/content/plugins/elementor-pro/modules/theme-builder/widgets/site-logo.php on line 124

ಸುಂದರ ಸಮಾಜ ನಿರ್ಮಾಣಕ್ಕೆ ಜಯದೇವ ಶ್ರೀಗಳ ಕೊಡುಗೆ ಅನನ್ಯ : ಸಂಸದ ಗೋವಿಂದ ಕಾರಜೋಳ

Facebook
Twitter
Telegram
WhatsApp

 

ವರದಿ ಮತ್ತು ಫೋಟೋ ಕೃಪೆ
ಸುರೇಶ್ ಪಟ್ಟಣ್,
ಮೊ : 98862 95817

ಸುದ್ದಿಒನ್, ಚಿತ್ರದುರ್ಗ,ಡಿ. 22 :
ಮಾನವ ಕುಲ ಒಂದೇ ಗಂಡು ಹೆಣ್ಣು ಮಾತ್ರವೇ ಎರಡು ಜಾತಿ ಎಂಬ ಸಂದೇಶವನ್ನು ಸಮಾಜಕ್ಕೆ ಜಯದೇವ ಶ್ರೀಗಳು ನೀಡುವುದರ ಜೊತೆಯಲ್ಲಿ ಸುಂದರ ಸಮಾಜ ನಿರ್ಮಾಣಕ್ಕೆ ಕೆಲಸಕ್ಕೆ ಹಾಕಿಕೊಂಡಿರುವ ಕಾರ್ಯಕ್ರಮಗಳನ್ನು ಮುಂದುವರೆಸಿಕೊಂಡು ಹೋಗುವುದು ನಮ್ಮ ನಿಮ್ಮಲ್ಲರ ಕರ್ತವ್ಯ ಹಾಗೂ ಜವಾಬ್ದಾರಿಯಾಗಿದೆ ಎಂದು ಸಂಸದರಾದ ಗೋವಿಂದ ಕಾರಜೋಳ ತಿಳಿಸಿದರು.

ಜಿಲ್ಲಾ ಬೇಡ ಜಂಗಮ ಸಮಾಜ ಸಂಸ್ಥೆವತಿಯಿಂದ ಶ್ರೀ ಜಯದೇವ ಮುರುಘರಾಜೇಂದ್ರ ಮಹಾಸ್ವಾಮಿಗಳ 150ನೇ ಜಯಂತೋತ್ಸವ ಶುಭ ಸಂದರ್ಭದಲ್ಲಿ ಚಿತ್ರದುರ್ಗದ ಮೆದೇಹಳ್ಳಿ ರಸ್ತೆಯ ರಾಷ್ಟ್ರೀಯ ಹೆದ್ದಾರಿ ಬ್ರಿಡ್ಜ್ ಸೇತುವೆಯ ಹತ್ತಿರ ಭಾನುವಾರ ಹಮ್ಮಿಕೊಂಡಿದ್ದ ಶ್ರೀ ಜಗದ್ಗುರು ಜಯದೇವ ವೃತ್ತ ಮತ್ತು ನಾಮಫಲಕ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು.

ಇಲ್ಲಿ ಜಯದೇವ ಜಗ್ಗದ್ಗುರುಗಳ ವೃತ್ತ ಎಂದು ಹೆಸರಿಟ್ಟ ಮೇಲೆ ಇದು ಸುಂದರವಾದ ವೃತ್ತವಾಗಬೇಕಿದೆ. ಕಾಟಾಚಾರಕ್ಕೆ ವೃತ್ತವಾಗಬಾರದು. ನಗರಸಭೆಯವರು ಹಾಗೂ ಸಂಬಂಧಪಟ್ಟವರು ಎಲ್ಲರು ಸೇರಿ ಕಾನೂನ ಬದ್ದವಾಗಿ ಸುಂದರವಾದ ವೃತ್ತವನ್ನಾಗಿ ಮಾಡಲು ಮುಂದಾಗಬೇಕಿದೆ ಇದಕ್ಕೆ ಬೇಕಾದ ಸಹಾಯವನ್ನು ಚುನಾಯಿತ ಪ್ರತಿನಿಧಿಗಳಾದ ನಾವುಗಳು ನೀಡುವುದಾಗಿ ಭರವಸೆಯನ್ನು ನೀಡಿದರು,

ಶಾಸಕರಾದ ಎಂ.ಚಂದ್ರಪ್ಪ ಮಾತನಾಡಿ, ಶ್ರೀಗಳು ಮಾಡಿದ ಕಾರ್ಯ ಸೂರ್ಯ ಚಂದ್ರ ಇರುವವರೆಗೂ ಸಹಾ ಚಿರಸ್ಥಾಯಿಯಾಗಲಿದೆ, ಅವರು ಮಾಡಿದ ತ್ರಿವಿಧ ದಾಸೋಹ ಇಂದಿಗೂ ಸಹಾ ಬೇರೆಯವರಿಗೆ ಸರ್ಕಾರಕ್ಕೆ ಮಾದರಿಯಾಗಿದೆ, ಶಿಕ್ಷಣ, ಅನ್ನದಾನ, ಧರ್ಮದ ಬಗ್ಗೆ ತಿಳಿಸುವ ಕಾರ್ಯವನ್ನು ಮಾಡುವುದರ ಮೂಲಕ ಮಾರ್ಗದರ್ಶನವನ್ನು ನೀಡಿದ್ದಾರೆ, ಮಠದ ಮುಂಭಾಗದ ಕರೆಯ ಮಧ್ಯದಲ್ಲಿ ಜಯದೇವ ಶ್ರೀಗಳು ಮೂರ್ತಿಯನ್ನು ನಿರ್ಮಾಣ ಮಾಡುವುದು ಅಗತ್ಯವಾಗಿದೆ, ಇದಕ್ಕೆ ಅಗತ್ಯವಾದ ಸಮಿತಿಯನ್ನು ರಚನೆ ಮಾಡಿ ಕಾರ್ಯ ಪ್ರವೃತ್ತøಆಗಿ ಇದಕ್ಕೆ ನಮ್ಮ ಕೈಲಾದ ಸಹಾಯವನ್ನು ಮಾಡುವುದಾಗಿ ಭರವಸೆಯನ್ನು ನೀಡಿದರು.

ವಿಧಾನ ಪರಿಷತ್ತು ಸದಸ್ಯರಾದ ಕೆ.ಎಸ್.ನವೀನ್ ಮಾತನಾಡಿ, ಶ್ರೀಗಳು ತಮ್ಮ ಬದುಕಿನಲ್ಲಿ ಉತ್ತಮವಾದ ಕಾರ್ಯವನ್ನು ಮಾಡಿದ್ದಾರೆ. ಶ್ರೇಷ್ಟ ಸನ್ಯಾಸಿಯಾಗಿದ್ದಾರೆ. ತಮ್ಮ ಬದುಕನ್ನು ಸಮಾಜ ಸೇವೆಗೆ ಮೀಸಲಿಟ್ಟಿದ್ದರು. ಜಯದೇವ ಶ್ರೀಗಳ ವೃತ್ತ ಅವರ ಸ್ಮರಣೆ ಕಾರ್ಯವನ್ನು ನಾಡಿನ ವಿವಿಧ ಸ್ಥಳಗಳಲ್ಲಿ ಮಾಡಲಾಗಿದೆ ಆದರೆ ನಮ್ಮ ಚಿತ್ರದುರ್ಗದಲ್ಲಿ ಈಗ ಮಾಡುತ್ತಿರುವುದು ವಿಷಾದವಾಗಿದೆ ಇದು ಮುಂಚೆಯೇ ಆಗಬೇಕಿತ್ತು ತಡವಾದರೂ ಸಹಾ ಆಗಿದೆ ಎನ್ನುವುದು ಸಂತೋಷವಾಗಿದೆ. ನಗರಸಭಾ ಸದಸ್ಯರಾದ ಸುರೇಶ್ ರವರ ಪರಿಶ್ರಮದಿಂದ ಇಲ್ಲಿ ಜಯದೇವ ಶ್ರೀಗಳ ವೃತ್ತ ನಿರ್ಮಾಣವಾಗಿದೆ. ಇವರಿಗೆ ಎಲ್ಲರು ಸಹಾ ಸಹಕಾರವನ್ನು ನೀಡಬೇಕಿದೆ. ಮಕ್ಕಳಿಗೆ ಶಿಕ್ಷಣವನ್ನು ನೀಡುವುದರ ಮೂಲಕ ಅವರ ಬದುಕನ್ನು ಹಸನು ಮಾಡಿದ ಕೀರ್ತಿ ಜಯದೇವ ಶ್ರೀಗಳಿಗೆ ಸಲ್ಲುತ್ತದೆ ಎಂದರು.

ಮಾಜಿ ಶಾಸಕರುಗ¼ ಎಸ್.ಕೆ.ಬಸವರಾಜನ್ ಮಾತನಾಡಿ, ತಡವಾಗಿಯಾದರೂ ಸಹಾ ನಮಗೆ ಶ್ರೀಗಳ ನೆನಪಾಗಿದೆ. ಕೊಪ್ಪಳದಿಂದ ಇಲ್ಲಿಗೆ ಬಂದು ನಮ್ಮ ಮಠವನ್ನು ಉದ್ದಾರ ಮಾಡಿದ್ದಾರೆ. 53 ವರ್ಷಗಳ ಮಠದ ಪೀಠಾಧೀಪತಿಗಳಾಗಿ ಉತ್ತಮವಾದ ಸಮಾಜ ಸೇವೆಯನ್ನು ಮಾಡಿದ್ದಾರೆ. ನಾಡನ್ನು ಸುತ್ತುವುದರ ಮೂಲಕ ಶಿಕ್ಷಣಕ್ಕೆ ಹೆಚ್ಚಿನ ಒತ್ತನ್ನು ನೀಡಿದ್ದಾರೆ. ಮಠದಲ್ಲಿ ಇದ್ದರೆ ಖರ್ಚು ಎಂದು ಮಠದಲ್ಲಿ ಇರದೇ ಹೂರಗಡೆ ಪ್ರವಾಸವನ್ನು ಮಾಡುವುದರ ಮೂಲಕ ಮಠವನ್ನು ಬೆಳಸಿದ್ದಾರೆ ಎಂದರು.

ಜಯದೇವ ಶ್ರೀಗಳ ವಿಚಾರವನ್ನು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಎಂ.ಕೆ. ತಾಜ್‍ಪೀರ್, ಬಾಪೂಜಿ ಸಮೂಹ ಸಂಸ್ಥೆಗಳು ಮತ್ತು ಜಿಲ್ಲಾ ಶರಣ ಸಾಹಿತ್ಯ ಪರಿಷತ್ತು ಅಧ್ಯಕ್ಷರಾದ ಡಾ. ಕೆ. ಎಂ. ವೀರೇಶ್, ಹಿರಿಯ ಪತ್ರಕರ್ತರಾದ ಉಜ್ಜನಪ್ಪ ಮಾತನಾಡಿದರು.

ಕಾರ್ಯಕ್ರಮದ ದಿವ್ಯ ಸಾನ್ನಿಧ್ಯವನ್ನು ಹೆಬ್ಬಾಳ್‍ನ ವಿರಕ್ತ ಮಠದ ಮಹಾಂತ ರುದ್ರೇಶ್ವರ ಮಹಾಸ್ವಾಮಿಗಳು, ದಾವಣಗೆರೆಯ ಶ್ರೀ ವಿರಕ್ತ ಮಠದ ಡಾ. ಬಸವಪ್ರಭು ಮಹಾಸ್ವಾಮಿಗಳು ವಹಿಸಿದ್ದರು.

ಶಾಸಕರಾದ ಕೆ. ಸಿ. ವೀರೇಂದ್ರ (ಪಪ್ಪಿ), ನಗರಸಭೆ ಅಧ್ಯಕ್ಷರಾದ ಶ್ರೀಮತಿ ಸವಿತಾ ರಘು, ಉಪಾಧ್ಯಕ್ಷರಾದ ಶ್ರೀಮತಿ ಶ್ರೀದೇವಿ ಚಕ್ರವರ್ತಿ, ಆಯುಕ್ತರಾದ ಎಂ.ಎಸ್. ಸೋಮಶೇಖರ್, ಜಿಲ್ಲಾ ಬೇಡ ಜಂಗಮ ಸಮಾಜ ಸಂಸ್ಥೆಯ ಅಧ್ಯಕ್ಷರಾದ ಸೋಮಶೇಖರ್ ಮಂಡಿಮಠ್ ನಗರಸಭೆಯ ಸ್ಥಾಯಿ ಸಮಿತಿಯ ಮಾಜಿ ಅಧ್ಯಕ್ಷರಾದ ಕೆ. ಬಿ. ಸುರೇಶ್, ಅ.ಭಾ.ವೀ. ಮಹಾ ಸಭಾದ ಅಧ್ಯಕ್ಷರಾದ ಮಹಡಿ ಶಿವಮೂರ್ತಿ, ವೀರಶೈವ ಸಮಾಜದ ಅಧ್ಯಕ್ಷರಾದ ಹೆಚ್. ಎನ್. ತಿಪ್ಪೇಸ್ವಾಮಿ ಭಾಗವಹಿಸಿದ್ದರು.ಇದೇ ಸಂದರ್ಭದಲ್ಲಿ ಅ.ಭಾ.ವೀ. ಮಹಾಸಭಾದ ಜಿಲ್ಲಾ ಕಾರ್ಯದರ್ಶಿಗಳಾದ ಎಂ. ಶಶಿಧರ್ ಬಾಬುರವರನ್ನು ಸನ್ಮಾನಿಸಲಾಯಿತು.

Facebook
Twitter
Telegram
WhatsApp
suddionenews

suddionenews

Leave a Comment

Top Stories

ಚಿತ್ರದುರ್ಗ ಜಿಲ್ಲಾ ಬೇಡ ಜಂಗಮ ಸಮಾಜದ 2025ನೇ ಸಾಲಿನ ಕ್ಯಾಲೆಂಡರ್ ಬಿಡುಗಡೆ

  ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817 ಸುದ್ದಿಒನ್, ಚಿತ್ರದುರ್ಗ , ಡಿ. 22 : ಜಿಲ್ಲಾ ಬೇಡ ಜಂಗಮ ಸಮಾಜ ಸಂಸ್ಥೆ ವತಿಯಿಂದ 2025ನೇ ಸಾಲಿನ

ಸರ್ಕಾರಿ ನೌಕರರು ಹುಟ್ಟಿದ ಊರನ್ನೆ ಮರೆಯಬಾರದು : ಸಂಸದ ಗೋವಿಂದ ಎಂ.ಕಾರಜೋಳ

  ವರದಿ ಮತ್ತು ಫೋಟೋ ಕೃಪೆ ಕೆ.ಎಂ.ಮುತ್ತುಸ್ವಾಮಿ ಕಣ್ಣನ್, ಮೊ : 78998 64552 ಸುದ್ದಿಒನ್, ಚಿತ್ರದುರ್ಗ,ಡಿಸೆಂಬರ್. 22 : ತುಳಿತಕ್ಕೊಳಗಾಗಿರುವ ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗದವರು ಸರ್ಕಾರದ ಯೋಜನೆಗಳನ್ನು ಸದುಪಯೋಗಪಡಿಸಿಕೊಂಡು ಮೇಲೆ ಬರುವಂತೆ

ಸುಂದರ ಸಮಾಜ ನಿರ್ಮಾಣಕ್ಕೆ ಜಯದೇವ ಶ್ರೀಗಳ ಕೊಡುಗೆ ಅನನ್ಯ : ಸಂಸದ ಗೋವಿಂದ ಕಾರಜೋಳ

  ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817 ಸುದ್ದಿಒನ್, ಚಿತ್ರದುರ್ಗ,ಡಿ. 22 : ಮಾನವ ಕುಲ ಒಂದೇ ಗಂಡು ಹೆಣ್ಣು ಮಾತ್ರವೇ ಎರಡು ಜಾತಿ ಎಂಬ ಸಂದೇಶವನ್ನು

error: Content is protected !!