Notice: Undefined index: options in /home/nagendra/public_html/content/plugins/elementor-pro/modules/theme-builder/widgets/site-logo.php on line 124

ವಿಜೃಂಭಣೆಯಿಂದ ಜರುಗಿದ ಶ್ರೀ ಗುರು ತಿಪ್ಪೇರುದ್ರಸ್ವಾಮಿ ದೊಡ್ಡ ಕಾರ್ತಿಕೋತ್ಸವದ ರಥೋತ್ಸವ

Facebook
Twitter
Telegram
WhatsApp

 

ವರದಿ ಮತ್ತು ಫೋಟೋ ಕೃಪೆ
ಸುರೇಶ್ ಬೆಳಗೆರೆ
ಮೊ : 97398 75729

 

ಸುದ್ದಿಒನ್, ನಾಯಕನಹಟ್ಟಿ : ವೀರಗಾಸೆ ಡೊಳ್ಳು ಕುಣಿತ ಕಲಾ ತಂಡ ಮಂಗಳವಾದ್ಯಗಳೊಂದಿಗೆ  ಶ್ರೀ ಗುರು ತಿಪ್ಪೇರುದ್ರಸ್ವಾಮಿಯ ದೊಡ್ಡ ಕಾರ್ತಿಕೋತ್ಸವದ ರಥೋತ್ಸವ ಸಂಭ್ರಮದಿಂದ ಶುಕ್ರವಾರ ಅದ್ದೂರಿಯಾಗಿ ನೆರವೇರಿತು.

ಪಟ್ಟಣದ ಕಾಯಕಯೋಗಿ ಶ್ರೀ ಗುರು ತಿಪ್ಪೇರುದ್ರಸ್ವಾಮಿಯ ದೊಡ್ಡ ಕಾರ್ತಿಕೋತ್ಸವ ಶುಕ್ರವಾರ ನೂರಾರು ಭಕ್ತರ ಸಮ್ಮುಖದಲ್ಲಿ ನೆರವೇರಿತು. ಮಧ್ಯಾಹ್ನ 3:30ರ ಗಂಟೆಗೆ ರಥೋತ್ಸವಕ್ಕೆ  ಚಾಲನೆಯನ್ನು ನೀಡಿದರು

ಸುಮಾರು 30 ಅಡಿ ಮರದಿಂದ ನಿರ್ಮಿಸಿದ ರಥದ ಮೇಲ್ಭಾಗದಲ್ಲಿ ಕಮಾನಿನಾಕಾರದ ರಥ ಪ್ರಮುಖ ಆಕರ್ಷಣೆಯಾಗಿತ್ತು.‌ ನಾನಾ ಬಣ್ಣದ ಬಟ್ಟೆ ಹಾಗೂ ಬಾವುಟಗಳಿಂದ ರಥವನ್ನು ಅಲಂಕರಿಸಲಾಗಿತ್ತು.
ಉತ್ಸವ ಮೂರ್ತಿಯನ್ನು ದೇವಾಲಯದಿಂದ ತಂದು ರಥದಲ್ಲಿ ಪ್ರತಿಷ್ಠಾಪಿಸಲಾಯಿತು ಮಹಾಮಂಗಳಾರತಿ ನಂತರ ಉತ್ಸವ ಆರಂಭಗೊಂಡಿತು. ಚಿನ್ನದ ಕಿರೀಟ ಚಿನ್ನದ ಆಭರಣಗಳು ಮಲ್ಲಿಗೆ ಕನಕಾಂಬರ ಸೇವಂತಿ ಚೆಂಡು ಹೂವು ಸೇರಿದಂತೆ ನಾನ ಹೂಗಳಿಂದ ಉತ್ಸವ ಮೂರ್ತಿಯ ಅಲಂಕರಿಸಲಾಗಿತ್ತು.

ರಥಕ್ಕೆ ಅಳವಡಿಸಿದ್ದ ಬೃಹತ್ ಹೂವಿನ ಹಾರಗಳು ಗಮನ ಸೆಳೆದವು ಉತ್ಸವ ಬೀದಿಯಲ್ಲಿ ರಥ ಚಲಿಸುವಾಗ ಮಹಿಳೆಯರು ದಾರಿಗೆ ನೀರು ಹಾಕಿ ಸ್ವಚ್ಛಗೊಳಿಸಿ ಕಾಯಿ ಹಣ್ಣು ಹರಕೆ ಸಮರ್ಪಿಸಿದರು..

ಭಕ್ತರು  ಹರಕೆ ಸಲ್ಲಿಸಿದರು ದೇವಾಲಯದ ಅಲಂಕೃತ ಪಟ್ಟದ ಬಸವಣ್ಣನನ್ನು ಬೆಳ್ಳಿಯ ಕಾಲು ಕಡಗ ಅಣೆಪಟ್ಟಿಗಳಿಂದ ಅಲಂಕರಿಸಲಾಗಿತ್ತು ಸಾಂಪ್ರದಾಯಿಕ ಮಂಗಳವಾದ್ಯಗಳು ಉತ್ಸವದಲ್ಲಿದ್ದವು.

ಇದೇ ಸಂದರ್ಭದಲ್ಲಿ ಶ್ರೀ ಗುರು ತಿಪ್ಪೇರುದ್ರಸ್ವಾಮಿ ದೇವಸ್ಥಾನದ ಕಾರ್ಯನಿರ್ವಹಣಾಧಿಕಾರಿ ಎಚ್ ಗಂಗಾಧರಪ್ಪ,  ಎಸ್ ಸತೀಶ್, ಗ್ರಾಮಸ್ಥರಾದ ಎಂ. ವೈ. ಟಿ ಸ್ವಾಮಿ, ಮಾಜಿ ಪಟ್ಟಣ ಪಂಚಾಯತಿ ಅಧ್ಯಕ್ಷ ಎನ್ ಮಹಾಂತಣ್ಣ, ಜೀವಿತ್ ಕುಮಾರ್, ಗಂಗಣ್ಣ ಉಮೇಶ್  ದಳವಾಯಿ ರುದ್ರಮುನಿ, ಸುನಿಲ್ ಕುಮಾರ್, ಶ್ರೀ ಗುರು ತಿಪ್ಪೇರುದ್ರಸ್ವಾಮಿ ದೇವಸ್ಥಾನದ ಸಿಬ್ಬಂದಿಗಳು ಮತ್ತು ಅರ್ಚಕರಾದ ರವಿಕುಮಾರ್, ಅಭಿಷೇಕ್, ಪಟ್ಟಣದ ಸಮಸ್ತ ಭಕ್ತಾದಿಗಳು ನಾಯಕನಹಟ್ಟಿ ಹೋಬಳಿಯ ವಿವಿಧ ಹಳ್ಳಿಗಳ ಗ್ರಾಮಸ್ಥರು ಭಕ್ತಾದಿಗಳು ಉಪಸ್ಥಿತರಿದ್ದರು.

Facebook
Twitter
Telegram
WhatsApp
suddionenews

suddionenews

Leave a Comment

Top Stories

ಡಿಸೆಂಬರ್ 01 ರಿಂದ ಬೆಂಬಲ ಬೆಲೆಯಲ್ಲಿ ರಾಗಿ ಖರೀದಿ : ಜಿಲ್ಲಾಧಿಕಾರಿ ಟಿ.ವೆಂಕಟೇಶ್

  ಚಿತ್ರದುರ್ಗ. ನ.22: ಪ್ರಸಕ್ತ ಮುಂಗಾರು ಹಂಗಾಮಿನ ರಾಗಿ ಬೆಳೆಯನ್ನು ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ಖರೀದಿಸಲು ಡಿಸೆಂಬರ್ 01 ರಿಂದ ನೋಂದಣಿ ಕಾರ್ಯ ಪ್ರಾರಂಭಿಸಲಾಗುವುದು. ಡಿ.31 ರವರೆಗೆ ನೋಂದಣಿ ನಡೆಯಲಿದೆ. ಪ್ರತಿ ಕ್ವಿಂಟಾಲ್

ಸತತ ಏರಿಕೆಯತ್ತ ಸಾಗುತ್ತಿದೆ ಚಿನ್ನದ ಬೆಲೆ : ಇಂದಿನ ದರ ಹೀಗಿದೆ..!

ಚಿನ್ನದ ಬೆಲೆ ಇಳಿಕೆಯಾಯ್ತು ಎಂದು ಖುಷಿ ಪಡುತ್ತಿರುವಾಗಲೇ ಇದೇನಿದು ಒಂದೇ ಸಮನೇ ಏರುತ್ತಲೇ ಇದೆ. ಅದರಲ್ಲೂ 70-80 ರೂಪಾಯಿ ಏರುತ್ತಿದೆ. ಇಂದು ಕೂಡ ಚಿನ್ನದ ದರ ಏರಿಕೆಯಾಗಿದ್ದು, 70 ರೂಪಾಯಿ ಗ್ರಾಂಗೆ ಜಾಸ್ತಿಯಾಗಿದೆ. ಈ

ಚಿತ್ರದುರ್ಗ | ಯೋಗೀಶ್ ಸಹ್ಯಾದ್ರಿ ಬಿಜೆಪಿ ಸೇರ್ಪಡೆ

  ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817 ಸುದ್ದಿಒನ್, ಚಿತ್ರದುರ್ಗ ನ. 22 : ಉಪನ್ಯಾಸಕರು ಹಾಗೂ ಸಹ್ಯಾದ್ರಿ ಇಂಗ್ಲಿಷ್ ಅಕಾಡೆಮಿ, ಅಧ್ಯಕ್ಷರಾದ ಯೋಗೀಶ್ ಸಹ್ಯಾದ್ರಿಯವರು ಬಿಜೆಪಿ

error: Content is protected !!