ಜೀವನದಲ್ಲಿ ಬಸವತತ್ವ ಮತ್ತು ವಚನಸಾಹಿತ್ಯದ ಮಹತ್ವ ತಿಳಿಸಿದ ಶ್ರೀ ಬಸವಪ್ರಭು ಸ್ವಾಮೀಜಿ

1 Min Read

 

ಸುದ್ದಿಒನ್, ಚಿತ್ರದುರ್ಗ,ಸೆ. 11 : ಜೀವನವೆಂದರೆ ಮುಳ್ಳಿನ ಹಾಸಿಗೆ. ಅದು ಊಟದ ತಟ್ಟೆ ಇದ್ದ ಹಾಗೆ. ಅದರಲ್ಲಿ ಏನಿದ್ದರೂ ಅನುಭವಿಸಬೇಕು ಎಂದು ಶ್ರೀ ಬಸವಪ್ರಭು ಸ್ವಾಮಿಗಳು ನುಡಿದರು.

ವಿದ್ಯಾನಗರದಲ್ಲಿ ಸೋಮವಾರ ನಡೆದ ನಿತ್ಯಕಲ್ಯಾಣ ಮನೆ ಮನೆಗೆ ಚಿಂತನ ಕಾರ್ಯಕ್ರಮದಲ್ಲಿ ಮಾತನಾಡಿದ ಶ್ರೀಗಳು, ಜೀವನ ಅಂದ ಮೇಲೆ ಸನ್ಮಾನ ಅವಮಾನ ಇರುತ್ತದೆ. ಸೋಲು-ಗೆಲವು ಸಹಜ. ಸಂತರು, ಶರಣರು, ಮಹಾಂತರು ಸುಖ-ದುಃಖವನ್ನು ಸಮನಾಗಿ ಸ್ವೀಕರಿಸಿದರು. ಅಪ್ಪಟ ವೈಚಾರಿಕತೆಯ ವಾಸ್ತವವಾದಿಗಳು. ಬದುಕಿನಲ್ಲಿ ಬರುವ ಕಷ್ಟಗಳನ್ನು ಧೈರ್ಯವಾಗಿ ಎದುರಿಸಿದವರು ಬಸವಾದಿ ಶರಣರು. ಕೆಲವರು ಸಮಸ್ಯೆ ಬಂತೆಂದರೆ ಆತ್ಮಹತ್ಯೆಗೆ ಒಳಗಾಗುತ್ತಾರೆ.‌ಅದು ಜೀವನ ಅಲ್ಲ.

ಈ ಹಿನ್ನೆಲೆಯಲ್ಲಿ ಕೂಡಲಸಂಗನ ಶರಣರು ಧೀರರು. ಧೈರ್ಯ ಇರುವವರಿಗೆ ಬಸವತತ್ವ ಒಲಿಯುತ್ತದೆ. ಸಮಸ್ಯೆಗಳು ಬಂದಾಗ ಮೌನ ವಹಿಸಬೇಕು. ಕಷ್ಟಗಳು ದೇವರ ಪರೀಕ್ಷೆ ಎನ್ನಬೇಕು. ತಾಳ್ಮೆಯಿಂದ ಎಲ್ಲನ್ನು ನಿಭಾಯಿಸಲು ಸಾಧ್ಯ. ತಾಳ್ಮೆ ಬೇಕು ಎಂದರೆ ವಚನಸಾಹಿತ್ಯವನ್ನು ಓದಬೇಕೆಂದರು.

ಜೆ. ಪರಶುರಾಮ್ ಮಾತನಾಡಿ, ಭೂಮಿ ಸಮತೋಲನ ತಪ್ಪಿದರೆ ಭೂಕಂಪಗಳು ಸೃಷ್ಟಿಯಾಗುತ್ತವೆ. ದುಃಖ ಬಂದಾಗ ಬೌದ್ಧಿಕ ಮಟ್ಟ ಕುಸಿಯುತ್ತದೆ. ಅದನ್ನು ತಾಳ್ಮೆಯಿಂದ ಸ್ವೀಕರಿಸಬೇಕು. ಸುಖ ಬಂದರೆ ಹಿಗ್ಗದೆ ಮುಂದುವರಿಯಬೇಕೆಂದರು.

ಲಿಂಗಸಗೂರು ವಾಲ್ಮೀಕಿ ಗುರುಪೀಠದ ಶ್ರೀ ವರದಾನೇಶ್ವರ ಸ್ವಾಮಿಗಳು ಮಾತನಾಡಿ, ಕಷ್ಟ ಎಲ್ಲ ಪ್ರಾಣಿಗಳಿಗೂ ಇದೆ. ಕಷ್ಟ ಜೀವನವನ್ನು ಕಲಿಸುತ್ತದೆ. ಸಮಾಜಮುಖಿ ಕಾರ್ಯಗಳನ್ನು ಮಾಡತ್ತ, ವಿಚಾರವಂತಿಕೆಯನ್ನು ಮೈಗೂಡಿಸಿಕೊಳ್ಳಬೇಕೆಂದರು.

ಸುರೇಶ್‍ಬಾಬು ಮಾತನಾಡಿದರು. ಗ್ರಾ.ಪಂ. ಅಧ್ಯಕ್ಷ  ಜಯರಾಮರೆಡ್ಡಿ, ಉಪಾಧ್ಯಕ್ಷೆ ಶ್ರೀಮತಿ ಲೀಲಾವತಿ ಶಿವಮೂರ್ತಿ, ಸದಸ್ಯರಾದ ಶ್ರೀಮತಿ ವನಜಾಕ್ಷಿ, ನಿರಂಜನ, ಶ್ರೀಮತಿ ಸುಲೋಚನ ಶಂಕರ್, ಶ್ರೀಮತಿ ಪ್ರತಿಭಾ ಮಂಜುನಾಥ ಇದ್ದರು. ಜಮುರಾ ಕಲಾವಿದರು ವಚನ ಪ್ರಾರ್ಥನೆ ಮಾಡಿದರು. ಮಂಜುನಾಥ್ ಸ್ವಾಗತಿಸಿದರು. ಟಿ.ಪಿ. ಜ್ಞಾನಮೂರ್ತಿ ನಿರೂಪಿಸಿದರು.

Share This Article
Leave a Comment

Leave a Reply

Your email address will not be published. Required fields are marked *