ಚಳ್ಳಕೆರೆ : ತಾಲ್ಲೂಕಿನ ತಳಕು ಹೋಬಳಿಯ ಕೋಡಿಹಳ್ಳಿ ಗ್ರಾಮದಲ್ಲಿ ನಡೆದ ಎರಡು ದಿನಗಳ ಕಾರ್ಯಕ್ರಮದಲ್ಲಿ ಗ್ರಾಮಿಣ ಜಾನಪದ ಶೈಲಿಯ ತಮಟೆ ನಗಾರಿ ವಿವಿಧ ಜಾನಪದ ಕಲಾ ತಂಡಗಳೊಂದಿಗೆ ಶ್ರೀ ಬಸವೇಶ್ವರ ಸ್ವಾಮಿ ವಿಗ್ರಹ ಪ್ರತಿಷ್ಠಾಪನೆ, ಶ್ರೀ ನಾಗಸುಬ್ರಮಣ್ಯ ಶಿಲಾ ವಿಗ್ರಹ ಹಾಗೂ ಧ್ವಜ ಸ್ತಂಭ, ಹಾಗೂ ಶಿಖರ ಕಳಸ ಪ್ರತಿಷ್ಟಾಪನೆ ಕಾರ್ಯಕ್ರಮವು ಸೋಮವಾರ ಸಾವಿರಾರು ಭಕ್ತರ ಸಮ್ಮುಖದಲ್ಲಿ ಅದ್ದೂರಿಯಾಗಿ ನಡೆಯಿತು,ನಂತರ ನೂತನ ದೇವಸ್ಥಾನಕ್ಕೆ ವಿವಿಧ ಹೂವಿನ ಹಾರಗಳಿಂದ ಶೃಂಗಾರ ಮಾಡಲಾಯಿತು, ಬಣ್ಣ ಬಣ್ಣದ ಕೇಸರಿ ಬಾವುಟಗಳು ಪೆಂಡಾಲ್ ನಿಂದ ಅಲಂಕೃತ ಮಾಡಲಾಗಿತ್ತು,
![](https://suddione.com/content/uploads/2024/10/gifmaker_me-5-1.gif)
ನಂತರ ಮಹಾ ಮಂಗಳಾರತಿ ನೆರವೇರಿಸಿ ಗ್ರಾಮಸ್ಥರು ಹಾಗೂ ಮುಖಂಡರು ಶ್ರೀ ಶರಣ ಬಸವೇಶ್ವರ ಸ್ವಾಮಿ ವಿಗ್ರಹ ಪ್ರತಿಷ್ಠಾಪನೆ ಗೆ ಚಾಲನೆ ನೀಡಿದರು , ಭವ್ಯವಾದ ಮೆರವಣಿಗೆಯು ವಿವಿಧ ರೀತಿಯ ನೃತ್ಯಗಳು ಡೊಳ್ಳು ಕುಣಿತ, ಹೂವು ದವನ ಹಣ್ಣು ಕಾಯಿ ಸ್ವಾಮಿಗೆ ಭಕ್ತರು ಸಮರ್ಪಿಸಿದರು, ಮಂಗಳ ವಾದ್ಯಗಳೊಂದಿಗೆ ಶ್ರೀಮದ್ ಉಜ್ಜೆಯನಿ ಸದ್ಧರ್ಮ ಸಿಂಹಾಸನಾಧೀಶ್ವರ 1008 ಜಗದ್ಗುರು ಸ್ಥಿರ ಗುರುತು ಪೀಠಾಧ್ಯಕ್ಷ ರು ಶ್ರೀ ಶ್ರೀ ಶ್ರೀ ತ್ರಿಲೋಚನ ರಾಜದೇಶಿಕೆಂದ್ರ ಶಿವಾಚಾರ್ಯ ಮಹಾ ಭಗವತ್ಪಾದರು ಇವರ ಅಮೃತ ಹಸ್ತದಿಂದ ಕಳಸ ಪ್ರತಿಷ್ಟಾಪನೆ ಹಾಗೂ ಪ್ರವಚನ ಮಾಡಲಾಯಿತು.
ಶ್ರೀ ಜಗದ್ಗುರು ದೇಶಿಕೇಂದ್ರ ಮಹಾ ಭಗವತ್ಪಾದರು ಮಾತನಾಡಿ ಎಲ್ಲ ಸಮುದಾಯದವರು ಈ ದೇವಸ್ಥಾನ ಲೋಕಾರ್ಪಣೆ ಯಲ್ಲಿ ಪಾಲ್ಗೊಂಡು ಯಶಸ್ವಿಗೊಳಿಸಿದರು ಎಲ್ಲರಿಗೂ ಶರಣ ಬಸವೇಶ್ವರ ಸ್ವಾಮಿಯು ಗ್ರಾಮದ ಎಲ್ಲ ಸದ್ಭಕ್ತರಿಗೆ ಒಳ್ಳೆಯ ಆಯುಷ್ ಆರೋಗ್ಯ ನೀಡಿ ಕಾಪಾಡಲಿ ಹಾಗೆ ಒಳ್ಳೆಯ ಮಳೆ ಬೆಳೆ ಸಮೃದ್ಧಿಯಾಗಲಿ ಎಂದು ಶುಭ ಹಾರೈಸಿದರು..
ಈ ಮೆರವಣಿಗೆಯಲ್ಲಿ ಗಂಡು ಕಲೆಯಾದ ವೀರಗಾಸೆ ನೃತ್ಯ ಪ್ರದರ್ಶನವು ಎಲ್ಲ ಸದ್ಭಕ್ತರ ನೋಡುಗರ ಮನಸೂರೆಗೊಳ್ಳುವಂತೆ ಮಾಡಿದ್ದು ಅತ್ಯಂತ ವಿಶೇಷವಾಗಿತ್ತು.
ಈ ಸಂದರ್ಭದಲ್ಲಿ ಶ್ರೀ ವಾಲ್ಮೀಕಿ ಯುವಕ ಸಂಘ, ಶ್ರೀ ವೇಮನ ರೆಡ್ಡಿ ಸಂಘ, ಡಾ. ಬಿ.ಆರ್ ಅಂಬೇಡ್ಕರ್ ಯುವಕ ಸಂಘ, ವಿವಿಧ ಮಹಿಳಾ ಸಂಘಟನೆಗಳ ಎಲ್ಲ ಪದಾಧಿಕಾರಿಗಳು ಹಾಗೂ ಸರ್ವ ಸದಸ್ಯರು,ಯುವಕರು, ಮತ್ತು ಗ್ರಾಮದ ಮುಖಂಡರಾದ ಗ್ರಾಮದ ದೊಡ್ಡ ಓಬಯ್ಯ, ಜಿ.ತಿಪ್ಪೇಸ್ವಾಮಿ, ಮಂಜಣ್ಣ, ರಾಜಣ್ಣ, ಸಣ್ಣ ತಿಪ್ಪಯ್ಯ,ವೆಂಕಟ ರೆಡ್ಡಿ, ಶಿವಾರೆಡ್ಡಿ, ಪ್ರೇಮ ಮೂರ್ತಿ, ಹನುಮಂತ ರೆಡ್ಡಿ, ನಿಂಗರೆಡ್ಡಿ, ಡಾ.ಮುನಿಸ್ವಾಮಿ ರೆಡ್ಡಿ, ಸೋಮಶೇಖರ್ ರೆಡ್ಡಿ, ಬಾಲಯ್ಯ, ಒಬಣ್ಣ, ಬಸಯ್ಯ, ಪಾಲಯ್ಯ,ಗೋಪಣ್ಣ ರೈತರಾದ ನಾಗರಾಜ್, ತಿಪ್ಪೇಸ್ವಾಮಿ, ಸೋಮಶೇಖರ್, ಲಿಂಗಾರೆಡ್ಡಿ, ಭೀಮರೆಡ್ಡಿ, ರುದ್ರಣ್ಣ, ಬಸವ ರೆಡ್ಡಿ, ಅಪ್ಪಾರೆಡ್ಡಿ, ಓಬಯ್ಯ, ಟಿ. ರಾಜಣ್ಣ, ಗ್ರಾಮ ಪಂಚಾಯಿತಿ ಸದಸ್ಯರು ಆದ ಎಸ್. ಟಿ. ರೇವಣ್ಣ, ಟಿ.ರಾಜಣ್ಣ, ದ್ರಾಕ್ಷಾಯಿಣಿ ನಾಗರಾಜ್, ಡಿ.ಓ ಲಕ್ಷ್ಮಿ , ಶ್ರೀಮತಿ ಲಕ್ಷ್ಮೀದೇವಿ ತಿಪ್ಪೇಸ್ವಾಮಿ, ಸಣ್ಣ ನಾಗಯ್ಯ, ಎಂ.ಏಚ್ ತಿಪ್ಪೇಸ್ವಾಮಿ, ಪುಟ್ಟಣ್ಣ, ತಿಪ್ಪೇಸ್ವಾಮಿ, ಓಬಣ್ಣ, ಮಂಜಣ್ಣ, ಡಾ.ಮುನಿಸ್ವಾಮಿ ರೆಡ್ಡಿ, ವಿನಯ್ ಕುಮಾರ್ ಬಿ.ಎಂ, ಶಿವಕುಮಾರ್ ಭಾರಿ, ಮಲ್ಲಿಕಾರ್ಜುನಯ್ಯ.ಟಿ, ಲಿಂಗರಾಜ್.ಡಿ, ರುದ್ರಮುನಿ, ಮಂಜುನಾಥ್,ಎಂ.ಟಿ, ಭಿಮೇಶ್ ಶೆಟ್ಟಿ, ತಿಮ್ಮಶೆಟ್ಟಿ, ಶ್ರೀನಿವಾಸ್, ಮಂಜುನಾಥ್ ತಿಪ್ಪೇಸ್ವಾಮಿ, ಮುಂತಾದವರು ಉಪಸ್ಥಿತರಿದ್ದರು.
ಎಲ್ಲ ಭಕ್ತರಿಗೆ ಪ್ರಸಾದ ವಿನಿಯೋಗ ಮಾಡಲಾಯಿತು ಹಾಗೂ ಇಂದು ಬಂದಿರುವ ಎಲ್ಲ ಭಕ್ತಾಧಿಗಳಿಗೆ ಅನ್ನ ಸಂತರ್ಪಣೆ ನಡೆಯಿತು ಎಲ್ಲರ ಸಹಕಾರದೊಂದಿಗೆ ಕಾರ್ಯಕ್ರಮವು ಎರಡು ದಿನಗಳ ಕಾಲ ಅತ್ಯಂತ ಯಶಸ್ವಿಯಾಗಿ ನೆರವೇರಿತು.
![](https://suddione.com/content/uploads/2025/01/studio-11.webp)
![](https://suddione.com/content/uploads/2025/02/site.webp)