ವರದಿ ಮತ್ತು ಫೋಟೋ ಕೃಪೆ
ಸುರೇಶ್ ಪಟ್ಟಣ್,
ಮೊ : 98862 95817
ಚಿತ್ರದುರ್ಗ ಫೆ. 06 : ನಗರದ ಸದಾನಂದಯ್ಯ ಲೇ-ಔಟ್, 16ನೇ ವಾರ್ಡ್, ಎಂ.ಕೆ. ಪ್ಯಾಲೇಸ್ ಹಿಂಭಾಗದಲ್ಲಿನ ತ್ರಿಶೂಲಾಂಜ ನೇಯಸ್ವಾಮಿ ದೇವಸ್ಥಾನ ಆವರಣದಲ್ಲಿ ನಿರ್ಮಿಸಿರುವ ಶ್ರೀ ಜೋಳ ಸಿದ್ದಿವಿನಾಯಕ ಹಾಗೂ ಶ್ರೀ ಹುಲಿದೋಣಿ ಸಂಗಮೇಶ್ವರ ದೇವಾಲಯಗಳ ಲೋಕಾರ್ಪಣೆ ಹಾಗೂ ಪ್ರತಿಷ್ಠಾಪನಾ ಮಹೋತ್ಸವ ಕಾರ್ಯ ಕ್ರಮವೂ ಫೆ. 8 ರಿಂದ 10ರವರೆಗೆ ನಡೆಯಲಿದೆ ಎಂದು ತ್ರಿಶೂಲಾಂಜನೇಯಸ್ವಾಮಿ ದೇವಸ್ಥಾನ ಸಮಿತಿಯ ಕಾರ್ಯದರ್ಶಿಗಳಾದ ಜಿ.ಎಸ್.ಸಂಪತ್ ಕುಮಾರ್ ತಿಳಿಸಿದ್ದಾರೆ.
ಸ್ವಸ್ತಿಶ್ರೀ ವಿಜಯಾಭ್ಯುದಯ ಶ್ರೀಮನೃಪ ಶಾಲಿವಾಹನ ಶಖೆ 1946ನೇ ಶ್ರೀ ಕ್ರೋಧಿನಾಮ ಸಂವತ್ಸರದ ಮಾಘ ಶುದ್ಧ ಏಕಾದಶಿಯಿಂದ ಮಾಘ ಶುದ್ದ ತ್ರಯೋದಶಿಯವರಗೆ ನೂತನ ದೇವಾಸ್ಥಾನಗಳ ಪ್ರತಿಷ್ಠಾಪನಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.
ಫೆ. 8 ರ ಶನಿವಾರ ಬೆಳಿಗ್ಗೆ 8-00 ಗಂಟೆಗೆ ಕಳಸದೊಂದಿಗೆ ದೇವರಮೂರ್ತಿಗಳಿಗೆ ಶ್ರೀ ಕ್ಷೇತ್ರ ಕೂಡಲಹಳ್ಳಿ ಸಂಗಮೇಶ್ವರ ಸನ್ನಿಧಾನದಲ್ಲಿ ವೇದಾವತಿ ಮತ್ತು ಸುವರ್ಣಮುಖಿ ನದಿಗಳ ಸಂಗಮ ಸ್ಥಾನದಲ್ಲಿ ಗಂಗಾಪೂಜೆ ನೆರವೇರಿಸಲಾಗುವುದು ಮಧ್ಯಾಹ್ನ 3-00 ಗಂಟೆಗೆ ರೈಲ್ವೆ ಸ್ಟೇಷನ್ ಬಳಿಯ ಆಂಜನೇಯಸ್ವಾಮಿ ದೇವಸ್ಥಾನಸಿ ಭವ್ಯ ಮೆರವಣಿಗೆ ನಡೆಯಲಿದೆ. ಫೆ. 9ರ ಬೆಳಿಗ್ಗೆ 8-00 ಗಂಟೆಗೆ ಗಣಪತಿ ಪೂಜೆ, ಪಂಚಕಳಸ ಪೂಜೆ, ಉಮಾಮಹೇಶ್ವರ ಪೂಜೆ, ನವಗ್ರಹ ಪೂಜೆ ಹಾಗೂ ಹೋಮ ಸಂಜೆ 6 ಗಂಟೆಗೆ ಶ್ರೀ ಜೋಳಸಿದ್ಧಿವಿನಾಯಕ, ಶ್ರೀ ಸಂಗಮೇಶ್ವರ ಹಾಗೂ ಶ್ರೀ ನಂದಿ ವಿಗ್ರಹಗಳ ಸ್ಥಾಪನೆ ಸಂಜೆ 7 ಗಂಟೆಗೆ ಸಾಂಸ್ಕೃತಿಕ ಮನರಂಜನೆ, ಭಜನಾ ಕಾರ್ಯಕ್ರಮಗಳ ನಡೆಯಲಿದೆ.
ಫೆ. 10ರ ಸೋಮವಾರ ಬೆಳಿಗ್ಗೆ 4-35 ರಿಂದ 6-00 ರವರೆಗೆ ಸಲ್ಲುವ ಶುಭಮುಹೂರ್ತದಲ್ಲಿ ಶ್ರೀ ಜೋಳಸಿದ್ದಿವಿನಾಯಕ, ಶ್ರೀ ಸಂಗಮೇಶ್ವರ ಹಾಗೂ ಶ್ರೀ ನಂದಿ ವಿಗ್ರಹಗಳ ಪ್ರಾಣಪ್ರತಿಷ್ಠಾಪನಾ ಕಾರ್ಯಕ್ರಮ ನಡೆಯಲಿದ್ದು, ಬೆಳಿಗ್ಗೆ 9-00 ರಿಂದ 10-30ರವರೆಗೆ ಕಳಸಾರೋಹಣ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಮಧ್ಯಾಹ್ನ 12 ಗಂಟೆಯಿಂದ ಧಾರ್ಮಿಕ ಸಮಾರಂಭ ನಡೆಯಲಿದ್ದು, ಸಾನಿಧ್ಯವನ್ನು ಕೊಟ್ಟೂರಿನ ಕಟ್ಟಿಮನೆ ಹಿರೇಮಠದ ಶ್ರೀ ಷ|| ಬ್ರ|| ಯೋಗಿರಾಜೇಂದ್ರ ಶಿವಾಚಾರ್ಯಸ್ವಾಮಿಗಳು ಹಾಗೂ ಶ್ರೀ ಸದ್ಗುರು ಕಬೀರಾನಂದ ಆಶ್ರಮದ ಶ್ರೀ ಶಿವಲಿಂಗಾನಂದ ಸ್ವಾಮಿಗಳು ವಹಿಸಲಿದ್ದಾರೆ. ವಾಣಿಜ್ಯೋದ್ಯಮಿಗಳಾದ ಮಾಗನೂರು ಚನ್ನಬಸವನಗೌಡ್ರು ಪ್ರಾಚ್ಯವಸ್ತು ಸಂಶೋಧಕರಾದ ಬಿ. ರಾಜಶೇಖರಪ್ಪ ಆಗಮಿಸಲಿದ್ದಾರೆ.ಅಧ್ಯಕ್ಷತೆಯನ್ನು ನಗರಸಭಾ ಸದಸ್ಯರಾದ ವೆಂಕಟೇಶ್ ವಹಿಸಲಿದ್ದಾರೆ. ಮಧ್ಯಾಹ್ನ 12-30 ರಿಂದ ಅನ್ನಸಂತರ್ಪಣೆ ಕಾರ್ಯಕ್ರಮ ನಡೆಯಲಿದೆ ಎಂದು ಸಂಪತ್ ಕುಮಾರ್ ತಿಳಿಸಿದ್ದಾರೆ.