ಹಾಸನ: ಯಾವುದೇ ಚುನಾವಣೆ ಇರಲಿ ಅಲ್ಲಿ ಮತದಾನ ಮಾಡುವಾಗ ಗೌಪ್ಯತೆ ಕಾಪಾಡಬೇಕು. ಯಾರಿಗೆ ಹಾಕಿದ ಅಂತ ಕೂಡ ಹೇಳುವ ಆಗಿಲ್ಲ. ಅಂತದ್ರಲ್ಲಿ ಅಲ್ಲೊಬ್ಬ ಮತದಾರ ನಾನು ಜೆಡಿಎಸ್ ಗೆ ಹಾಕಿದೆ ಎಂದು ಫೋಟೋ ಸಮೇತ ಪ್ರೂಫ್ ಹಾಕಿದ್ದಾರೆ ಸೋಷಿಯಲ್ ಮೀಡಿಯಾದಲ್ಲಿ.
ಇಂದು ವಿಧಾನಪರಿಷತ್ ಚುನಾವಣೆ ನಡೆಯುತ್ತಿದೆ. ಹಾಸನದಲ್ಲಿ ಜೆಡಿಎಸ್ ಬೆಂಬಲಿಗನೊಬ್ಬ ನಾನು ಜೆಡಿಎಸ್ ಗೆ ಮತ ಹಾಕಿದೆ ಎಂದು ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಾಕಿದ್ದಾರೆಂದು ಕಾಂಗ್ರೆಸ್ ಆರೋಪ ಮಾಡಿದೆ.
ಜೆಡಿಎಸ್ ಅಭ್ಯರ್ಥಿ ಸೂರಜ್ ಗೌಡ ಅವರಿಗೆ ಮತ ನೀಡಿ ಫೋಟೋ ವೈರಲ್ ಮಾಡಿದ್ದಾರೆಂದು ಕಾಂಗ್ರೆಸ್ ಆ ಪೋಸ್ಟ್ ಹಿಡಿದು ಆಕ್ರೋಶ ಹೊರ ಹಾಕಿದ್ದಾರೆ. ಗೌಪ್ಯ ಮತದಾನದ ಉಲ್ಲಂಘನೆಯಾಗಿದೆ. ಚುನಾವಣಾ ಅಕ್ರಮ ನಡೆದಿದೆ ಎಂದು ವಿಧಾನ ಪರಿಷತ್ ಸದಸ್ಯ ಗೋಪಾಲಸ್ವಾಮಿ ಆರೋಪ ಮಾಡಿದ್ದು, ಕಾಂಗ್ರೆಸ್ ನಾಯಕರು ದೂರು ನೀಡಲು ಮುಂದಾಗಿದ್ದಾರೆ.