ಬೆಂಗಳೂರು: ಚುನಾವಣೆಗೆ ಇನ್ನು ಕೆಲವೇ ತಿಂಗಳು ಬಾಕಿ ಇದೆ. ಪ್ರಚಾರದ ಕಾರ್ಯವೇನೋ ಅದಾಗಲೇ ಶುರುವಾಗಿದೆ. ಅದರ ನಡುವೆ ಟಿಕೆಟ್ ಆಕಾಂಕ್ಷಿಗಳ ಟೆನ್ಶನ್ ಕೂಡ ಆರಂಬವಾಗಿದೆ. ಬಿಜೆಪಿ ನಾಯಕರ ಶಾರ್ಟ್ ಲೀಸ್ಟ್ ರೆಡಿಯಾಗಿದ್ದು, 20 ಶಾಸಕರಿಗೆ ಟಿಕೆಟ್ ಕೈ ತಪ್ಪುವ ಸಾಧ್ಯತೆ ಇದೆ ಎನ್ನಲಾಗಿದೆ.
ವಯಸ್ಸಿನ ಆಧಾರ, ವರ್ಚಸ್ಸು, ಆಡಳಿತದ ಅಲೆ ಹೀಗೆ ಎಲ್ಲಾ ಲೆಕ್ಕಚಾರಗಳನ್ನು ಮಾಡಿ ಟಿಕೆಟ್ ನೀಡುವ ಸಾಧ್ಯತೆ ಇದೆ. ಗುಜರಾತ್ ನ ಗೆಲುವಿಗೂ ಕಾರಣವಾದ ಪ್ಲ್ಯಾನ್ ಅನ್ನು ಕರ್ನಾಟಕದಲ್ಲೂ ಫಾಲೋ ಮಾಡಲು ಬಿಜೆಪಿ ನಿರ್ಧಾರ ಮಾಡಿದೆ. ಹೀಗಾಗಿಯೇ ಬಿಜೆಪಿಯ 20 ಶಾಸಕರಿಗೆ ಕೊಕ್ ಕೊಡುವ ಸಾಧ್ಯತೆಯೂ ದಟ್ಟವಾಗಿದೆ.
ಮೂಲಗಳ ಪ್ರಕಾರ ನಾಲ್ಕು ಜಿಲ್ಲೆಗಳಲ್ಲಿ ತಲಾ ಇಬ್ಬರು ಶಾಸಕರಿಗೆ ಕೊಕ್ ಕೊಡುವ ಚರ್ಚೆ ನಡೆಯುತ್ತಿದ್ದು, 12 ಜಿಲ್ಲೆಗಳಲ್ಲಿ ತಲಾ ಒಬ್ಬರು ಹಾಲಿ ಶಾಸಕರಿಗೆ ಕೊಕ್ ನೀಡಲಿದ್ದಾರೆ. ಕೊಕ್ ನೀಡುವ ಶಾಸಕರನ್ನು ವೈಯಕ್ತಿಕ ವರ್ಚಸ್ಸು, ಆಡಳಿತ ವಿರೋಧಿ ಅಲೆಯ ಬಗ್ಗೆ ನೋಡಿ, ತೀರ್ಮಾನ ತೆಗೆದುಕೊಳ್ಳಲಿದೆ. ಫೆಬ್ರವರಿ ಎರಡನೇ ವಾರದಲ್ಲಿ ಬಿಜೆಪಿ ಹೈಕಮಾಂಡ್ ನಿರ್ಧಾರ ಹೊರಗೆ ಬೀಳಲಿದೆ.