ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದ ಆರೋಪಿಯಾಗಿರುವ ಪವಿತ್ರಾ ಗೌಡಗೆ ಮತ್ತೆ ಸಂಕಷ್ಟ ಶುರುವಾಗ್ತಾ ಇದೆ. ಮನೆಯಿಂದ ಊಟ ಬರುತ್ತೆ ಎಂಬ ಆಸೆಯನ್ನ ಇಟ್ಟುಕೊಂಡಿದ್ದರು. ಆದರೆ ಅದಕ್ಕೆ ಈಗ ತಣ್ಣೀರು ಬಿದ್ದಂತೆ ಆಗಿದೆ. ಈ ಸಂಬಂಧ ಮನೆಯೂಟವನ್ನು ಪ್ರಶ್ನಿಸಿ ಈಗ ಹೈಕೋರ್ಟ್ ಮೊರೆ ಹೋಗೋದಕ್ಕೆ ತೆರೆಮರೆಯ ಪ್ಲ್ಯಾನ್ ರೆಡಿಯಾಗ್ತಾ ಇದೆ. ಸೆಷನ್ಸ್ ಕೋರ್ಟ್ ಆದೇಶವನ್ನು ಪ್ರಶ್ನೆ ಮಾಡಿ ಹೈಕೋರ್ಟ್ ಗೆ ಮೇಲ್ಮನವಿಯನ್ನು ಸಲ್ಲಿಸೋದಕ್ಕೆ ಮುಂದಾಗ್ತಾ ಇದ್ದಾರೆ.
ಜೈಲಾಧಿಕಾರಿಯಿಂದ ಹೈಕೋರ್ಟ್ ಗೆ ಅರ್ಜಿ ಸಲ್ಲಿಸಲು ತೀರ್ಮಾನ ಮಾಡಲಾಗಿದೆ. ಸೋಮವಾರ ಅರ್ಜಿ ಸಲ್ಲಿಕೆ ಮಾಡಲಿದ್ದಾರೆ. ಜೈಲಿನಲ್ಲಿ ಇದ್ದವರಿಗೆ ಒಂದೇ ತೆರನಾದ ಊಟವನ್ನು ನೀಡಲಾಗುತ್ತಿದೆ. ಇಲ್ಲಿವರೆಗೆ ಜೈಲಿನ ಊಟದಿಂದ ಯಾರಿಗೂ, ಯಾವುದೇ ತೊಂದರೆಯಾಗಿಲ್ಲ. ಜೈಲಿನ ಊಟ ಎಲ್ಲಾ ರೀತಿಯಲ್ಲೂ ಪರೀಕ್ಷೆಯಾಗಿದೆ ಅಂತ ವಾದ ಮಂಡಿಸೋದಕ್ಕೆ ರೆಡಿಯಾಗಿದ್ದಾರೆ.
ಯಾಕಂದ್ರೆ ಜೈಲಿನ ಊಟ FSSI ನಿಂದ ಪ್ರಮಾಣಿಕರೀಸಲ್ಪಟ್ಟಿದೆ. ಜೈಲಿನಲ್ಲಿ ಎಲ್ಲರಿಗೂ ಗುಣಮಟ್ಟದ ಊಟವನ್ನೇ ನೀಡಲಾಗುತ್ತಿದೆ. ಪವಿತ್ರಾ ಗೌಡ ಒಬ್ಬರಿಗೆ ಮನೆಯೂಟ ನೀಡಿದರೆ ಬೇರೆಯವರು ಕೂಡ ಮನೆಯೂಟಕ್ಕೆ ಬೇಡಿಕೆ ಇಡುತ್ತಾರೆ. ಉಳಿದ ಕೈದಿಗಳು ಮನೆಯೂಟಕ್ಕೆ ಬೇಡಿಕೆ ಇಟ್ಟರೆ ಅದನ್ನು ಒದಗಿಸುವುದಕ್ಕೆ ಆಗುವುದಿಲ್ಲ. ಅಷ್ಟೇ ಅಲ್ಲ ಮನೆಯೂಟ ನೀಡಿದರೆ ಜೈಲೂಟ ಕಳಪೆ ಎಂದು ಒಪ್ಪಿಕೊಂಡಂತೆ ಆಗುತ್ತದೆ ಎಂಬ ವಾದವನ್ನು ಮಂಡಿಸಲು ಜೈಲು ಅಧಿಕಾರಿಗಲಕು ತಯಾರಾಗಿದ್ದಾರೆ. ಹೀಗಾಗಿ ಪವಿತ್ರಾ ಗೌಡಗೆ ವಾರಕ್ಕೆ ಒಮ್ಮೆ ಆದರೂ ಮನೆಯಿಂದ ಊಟ ಬರುವ ನಿರೀಕ್ಷೆ ಇತ್ತು. ಅಮ್ಮನ ಕೈರುಚಿ ಹಾಗೂ ಬೇಕಾದ ತಿಂಡಿಯನ್ನ ತಿನ್ನಬಹುದು ಎಂದುಕೊಂಡಿದ್ದ ಪವಿತ್ರಾಗೆ ಎಲ್ಲವೂ ಫೇಲ್ ಆಗಿದೆ.






