ಬೆಂಗಳೂರು; ಈಗಂತು ಎಲ್ಲದಕ್ಕೂ ಟ್ಯಾಕ್ಸ್ ಕಟ್ಟಿ ಕಟ್ಟಿ ಜನ ಸುಸ್ತಾಗಿ ಹೋಗಿದ್ದಾರೆ. ಈಗ ಎಟಿಎಂ ನಲ್ಲಿ ಹಣ ಡ್ರಾ ಮಾಡಯವುದಕ್ಕೆ ಯೋಚನೆ ಮಾಡಬೇಕಾಗಿದೆ. ಡಿಜಿಟಲ್ ಪೇಮೆಂಟ್ ಗೂ ಶುಲ್ಕ ಕಟ್ ಆಗಲಿದೆ. ಈಗ ಎಟಿಎಂನಲ್ಲಿ ಡ್ರಾ ಮಾಡಿಕೊಂಡ್ರು ಕಟ್ ಆಗಲಿದೆ. ಮೇ 1ರಿಂದಾನೇ ಶುಲ್ಕ ಹೆಚ್ಚಾಗಲಿದೆ. ಅದರ ಕಂಪ್ಲೀಟ್ ಮಾಹಿತಿ ಇಲ್ಲಿದೆ ನೋಡಿ.

ಎಟಿಎಂನಲ್ಲಿ ಹಣ ಡ್ರಾ ಮಾಡಲು ಹೋದರೆ ಮೊದಲಿಗಿಂತ ಎರಡು ರೂಪಾಯಿ ಹೆಚ್ಚಳವಾಗಲಿದೆ. ಆದರೆ ಈ ಎರಡು ರೂಪಾಯಿ ಯಾವಾಗ ಕಟ್ ಆಗಲಿದೆ ಎಂದರೆ ಉಚಿತ ವಹಿವಾಟು ಮಿತಿಮೀರಿದ ಮೇಲೆ ಎರಡು ರೂಪಾಯಿ ಹೆಚ್ಚುವರಿಯಾಗಿ ಪಾವತಿಸಬೇಕಾಗುತ್ತದೆ. ಭಾರತೀಯ ರಿಸರ್ವ್ ಬ್ಯಾಂಕ್ ಇಂಟರ್ ಚೆಂಜ್ ಶುಲ್ಕವನ್ನು ಹೆಚ್ಚಿಸಿರುವುದೇ ಇದಕ್ಕೆಲ್ಲ ಕಾರಣವಾಗಿದೆ. ಈ ಮೊದಲು ಪ್ರತಿ ವಹಿವಾಟಿಗೆ 17 ರೂಪಾಯಿ ವಿಧಿಸಲಾಗಿತ್ತು, ಈಗ 19 ರೂಪಾಯಿ ಪಾವತಿಸಬೇಕಾಗುತ್ತದೆ.

ಎಟಿಎಂ ಸೇವೆಯನ್ನು ಒದಗಿಸುವುದಕ್ಕಾಗಿ ಒಂದು ಬ್ಯಾಂಕ್ ಇನ್ನೊಂದು ಬ್ಯಾಂಕ್ ಗೆ ವಿಧಿಸುವ ಶುಲ್ಕವನ್ನು ಇಂಟರ್ ಚೇಂಜ್ ಶುಲ್ಕ ಎನ್ನುತ್ತಾರೆ. ಹಣಕಾಸಿನ ವ್ಯವಹಾರಕ್ಕಾಗಿ ಎಟಿಎಂ ಅವಲಂಭಿಸಿರುವ ಗ್ರಾಹಕರು ತನ್ಮ ಉಚಿತ ವಹಿವಾಟನ್ನು ಮಿತಿ ಮೀರಿ ಟ್ರಾನ್ಸಕ್ಷನ್ ಮಾಡಿದಾಗ ಹೆಚ್ಚುವರಿಯಾಗಿ 2 ರೂಪಾಯಿ ನೀಡಬೇಕಾಗುತ್ತದೆ. ಇದು ಗ್ರಾಹಕರಿಗೆ ಹೊರೆಯೇ ಸರಿ. ಯಾಕಂದ್ರೆ ಎಷ್ಟೋ ಸಲ ಹಣದ ಅಗತ್ಯ ಇಷ್ಟೇ ಬೇಕಾಗುತ್ತದೆ, ಲಿಮಿಟೇಷನ್ಸ್ ನಲ್ಲಿಯೇ ಹಣವನ್ನು ಡ್ರಾ ಮಾಡ್ತೀವಿ ಅಂತ ಹೇಳುವುದಕ್ಕೆ ಆಗಲ್ಲ. ಹೀಗಾಗಿ ಎರಡು ರೂಪಾಯಿ ಹೆಚ್ಚುವರಿ ಮಾಡಿರೋದು ಬ್ಯಾಂಕ್ ವ್ಯವಹಾರ ನಡೆಸುವವರಿಗೆ ತಲೆ ನೋವಾಗಿದೆ.

