ಬೆಂಗಳೂರು: ಬಿಗ್ ಬಾಸ್ ಕನ್ನಡ ಸೀಸನ್ 12 ಬಹಳ ಕುತೂಹಲಕಾರಿಯಾಗಿ ನಡೀತಾ ಇದೆ. ಟಾಪ್ 6 ನಲ್ಲಿ ಗಿಲ್ಲಿ, ಅಶ್ವಿನಿ, ರಕ್ಷಿತಾ, ರಘು, ಧನುಷ್, ಕಾವ್ಯಾ ಬಂದು ಕೂತಿದ್ದರು. ಫಿನಾಲೆ ವೇದಿಕೆಗೆ ಹೋಗುವುದಕ್ಕೂ ಮುನ್ನ ಒಬ್ಬರು ಎಲಿಮಿನೇಟ್ ಆಗಿದ್ದಾರೆ. ಆದರೆ ಈ ಎಲಿಮಿನೇಷನ್ ತುಂಬಾನೇ ಶಾಕಿಂಗ್ ಆದಂತ ಎಲಿಮಿನೇಷನ್ ಆಗಿದೆ.
ಧನುಶ್ ಫಿನಾಲೆಗೂ ಮುನ್ನವೇ ಔಟ್ ಆಗಿದ್ದಾರೆ. ಧನುಶ್ ಬಿಗ್ ಬಾಸ್ ಮನೆಗೆ ಬಂದಾಗಿನಿಂದಲೂ ಅವರ ಗ್ರಾಫ್ ತುಂಬಾನೇ ಚೆನ್ನಾಗಿತ್ತು. ಫಿನಾಲೆ ವೇದಿಕೆ ಮೇಲೆ ಇರ್ತಾರೆ ಅಂತಾನೇ ಎಲ್ಲರೂ ಭಾವಿಸಿದ್ದರು. ಆದರೆ ಧನುಶ್ ಮೊದಲೇ ಹೊರಗೆ ಬಂದಿದ್ದಾರೆ. ಧನುಶ್ ಫಿನಾಲೆ ವೇದಿಕೆ ಹತ್ತೋದಕ್ಕೂ ಮುನ್ನವೇ ಹೊರಗೆ ಬಂದಿರೋದಕ್ಕೆ ಅವರ ಕುಟುಂಬದವರಿಗೂ ನೋವಿದೆ. ಅದರಲ್ಲೂ ಧನುಶ್ ತಾಯಿ ಬಿಕ್ಕಳಿ ಬಿಕ್ಕಳಿಸಿ ಕಣ್ಣೀರಾಕಿದ್ದಾರೆ. ಧನುಶ್ ಅವರ ಹೆಂಡತಿ ಕೂಡ ತುಂಬಾ ಬೇಸರ ಮಾಡಿಕೊಂಡರು.
ಧನುಶ್ ಹೊರಗೆ ಬಂದದ್ದು ಒಳಗೆ ಇರುವ ಕಂಟೆಸ್ಟೆಂಟ್ ಗಳು ಸಹ ಶಾಕ್ ಆಗಿದ್ದಾರೆ. ಇದರ ನಡುವೆ ಧನುಶ್ ಬಗ್ಗೆ ಕಿಚ್ಚ ಸುದೀಪ್ ಹೆಮ್ಮೆ ಪಟ್ಟಿದ್ದಾರೆ. ಧನುಶ್, ಮನೆಯ ಒಳಗೆ ಹೋಗುವಾಗ ಯಾವ ರೀತಿಯ ನಗು ಮುಖದಲ್ಲಿ ಇದ್ದರೋ, ಇಂದು ಅದೇ ನಗು ಮುಖವಿದೆ ಅಂದ್ರು. ಧನುಶ್, ಮುಂದೆ ಸಿನಿಮಾಗಳ ಕಡೆಗೆ ಹೆಚ್ಚು ಗಮನ ಹರಿಸುವ ಭರವಸೆ ನೀಡಿದ್ದಾರೆ. ಜೊತೆಗೆ ಕಲರ್ಸ್ ಕನ್ನಡದಲ್ಲಿ ಧಾರಾವಾಹಿಗಳಲ್ಲೂ ನಟಿಸುತ್ತೇನೆ ಎಂದಿದ್ದಾರೆ. ಸದ್ಯ ಮನೆಯಿಂದ ಹೊರಗೆ ಬಂದಿರುವ ಧನುಶ್ ಗೂ ನೋವಿರುವುದು ಅವರ ಮುಖದಲ್ಲಿಯೇ ಕಾಣಿಸುತ್ತಿದೆ.






