ನವದೆಹಲಿ: ಆರ್ಬಿಐ ಕಳೆದ ಮೇ ತಿಂಗಳಿನಿಂದ ಸತತವಾಗಿ ಆರನೇ ಬಾರಿಗೂ ಬಡ್ಡಿ ದರವನ್ನು ಏರಿಕೆ ಮಾಡಿದೆ. ಬಡ್ಡಿ ದರವನ್ನು 250 bps ನಷ್ಟು ಆರ್ಬಿಐ ಹೆಚ್ಚಳ ಮಾಡಿದೆ. ವಿತ್ತೀಯ ನೀತಿ ಸಮಿತಿಯು ಆರ್ಬಿಐ ನ ಮೂವರು ಸದಸ್ಯರು ಮತ್ತು ಮೂವರು ಬಾಹ್ಯ ಸದಸ್ಯರನ್ನು ಒಳಗೊಂಡಿದ್ದು, ಪ್ರಮುಖ ಸಾಲದ ದರ ಅಥವಾ ರೆಪೊ ದರವನ್ನು 6.50%ಕ್ಕೆ ಏರಿಸಿದೆ.
ಆರ್ಬಿಐ ಆರನೇ ಸಾರಿ ಸಾಲದ ಬಡ್ಡಿ ದರ ಹೆಚ್ಚಳವಾಗಿರುವುದು ದೇಶದ ಮಧ್ಯಮ ವರ್ಗದವರ ಮೇಲೆ ಹೆಚ್ಚು ಹೊರೆಯಾಗಲಿದೆ ಎಂದು ತಜ್ಞರು ಹೇಳಿದ್ದಾರೆ. ಇದರಿಂದಾಗಿ ಪ್ರತಿ ತಿಂಗಳು ಇಎಂಐ ಕಟ್ಟುವವರು ಸಂಕಷ್ಟಕ್ಕೆ ಸಿಲುಕುತ್ತಾರೆಂಬ ಮಾತುಗಳು ಕೇಳಿ ಬರುತ್ತಿವೆ.
ಈ ಬಗ್ಗೆ ಮಾತನಾಡಿರಯವ ಆರ್ಬಿಐ ಗವರ್ನರ್ ಶಕ್ತಿಕಾಂತ್ ದಾಸ್, ಹಣದುಬ್ಬರವು ಅತ್ಯಂತ ಗಂಭೀರ ವಿಚಾರವಾಗಿದೆ. ನಾವೂ ಹಣದುಬ್ಬರದಲ್ಲಿ ನಿರ್ಣಾಯಕವಾಗಿ ಯಾವುದು ಹೆಚತಚು ಉತ್ತಮ ಎಂಬುದನ್ನು ನೋಡಬೇಕಾಗಿದೆ. ಹಣದುಬ್ಬರವನ್ನು ತಗ್ಗಿಸುವ ನಮ್ಮ ಬದ್ಧತೆಯಲ್ಲಿ ನಾವೂ ಅಚಲವಾಗಿ ಉಳಿಯಬೇಕಾಗಿದೆ ಎಂದಿದ್ದಾರೆ.